ಸಿದ್ದರಾಮಯ್ಯ ಗುಣಮುಖರಾಗಲೆಂದು ಅಭಿಮಾನಿಗಳಿಂದ ದೇವಿಗೆ ವಿಶೇಷ ‌ಪೂಜೆ

ದಾವಣಗೆರೆ, ಡಿಸೆಂಬರ್ 12: ಕಳೆದ ಎರಡು ದಿನಗಳಿಂದ ಮಾಜಿ‌ ಸಿಎಂ ಸಿದ್ದರಾಮಯ್ಯ ಅನಾರೋಗ್ಯದ ಹಿನ್ನೆಲೆಯಲ್ಲಿ, ಅವರು ಶೀಘ್ರ ಗುಣಮುಖರಾಗಲೆಂದು ಕಾರ್ಯಕರ್ತರು ದಾವಣಗೆರೆಯ ನಗರ ದೇವತೆ ದುರ್ಗಾಂಬಿಕಾ ದೇವಿಗೆ ವಿಶೇಷ ‌ಪೂಜೆ ಸಲ್ಲಿಸಿದರು.

ದಾವಣಗೆರೆಯ ಕುರುಬ ಯುವ ಘಟಕದ ಲಿಂಗರಾಜ್ ನೇತೃತ್ವದಲ್ಲಿ ಪೂಜೆ ನಡೆಸಿದ್ದು, ದೇವಿಗೆ ಕುಂಕುಮಾರ್ಚನೆ ಹಾಗೂ ಸಿದ್ದರಾಮಯ್ಯನವರ ಹೆಸರಿನಲ್ಲಿ ಅರ್ಚನೆ ಮಾಡಿಸಿ ಗುಣಮುಖರಾಗಲೆಂದು ದೇವಿಯ ಮುಂದೆ ಸಿದ್ದರಾಮಯ್ಯನವರ ಫೋಟೋ ಇಟ್ಟು ಪೂಜೆ ಸಲ್ಲಿಸಲಾಯಿತು.

Special Pooja Offered To Durgambika Devi In Davanagere For Fast Recovery Of Siddaramaiah

ಮಾಜಿ ಸಿಎಂ ಸಿದ್ದರಾಮಯ್ಯ ಕೂಡಲೇ ಗುಣಮುಖರಾಗಲೆಂದು 101 ತೆಂಗಿನ ಕಾಯಿ ಹೊಡೆಯುವುದರ ಮೂಲಕ ಹರಕೆ ತೀರಿಸಿ, ದೇವಿ ಆರೋಗ್ಯ ಆಯಸ್ಸು ನೀಡಿ ಅವರಿಗೆ ಆಶೀರ್ವಾದ ಮಾಡಬೇಕು ಎಂದು ಪ್ರಾರ್ಥನೆ ಸಲ್ಲಿಸಲಾಯಿತು. ಇದೇ ಸಂದರ್ಭ ಸಿದ್ದರಾಮಯ್ಯನವರ ಭಾವಚಿತ್ರ‌ ಹಿಡಿದು ಜೈಕಾರ ಹಾಕಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+