Get Updates
Get notified of breaking news, exclusive insights, and must-see stories!

ದಾವಣಗೆರೆಯಲ್ಲಿ ಸೈಟುಗಳ ಮಾರಾಟ: ಸ್ಥಳ, ದರದ ಮಾಹಿತಿ

ದಾವಣಗೆರೆ, ಜನವರಿ 05: ದಾವಣಗೆರೆಯಲ್ಲಿ ಸೈಟುಕೊಳ್ಳಬೇಕು, ಹೂಡಿಕೆ ಮಾಡಬೇಕು ಎಂದು ಆಲೋಚಿಸುತ್ತಿರುವ ಜನರಿಗೆ ಮಾಹಿತಿಯೊಂದಿದೆ. ಒಟ್ಟು ಸೈಟು ಮೊತ್ತದ ಶೇ 25ರಷ್ಟನ್ನು ಪಾವತಿ ಮಾಡಿ, ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಮಾಡಬಹುದು. ಆಸಕ್ತರು ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ 31/01/2025 ಆಗಿದೆ. ದಾವಣಗೆರೆ ಜಿಲ್ಲಾ ವ್ಯಾಪ್ತಿಯನ್ನು ಹೊಂದಿರುವ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿ., ಹರಿಹರ ಮೂಲಕ ಈ ನಿವೇಶನಗಳನ್ನು ಮಾರಾಟ ಮಾಡಲಾಗುತ್ತಿದೆ.

ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿ., ಹರಿಹರ ನಿವೇಶನಕ್ಕೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಮಾಡಿದೆ. ಪರಸ್ಪರ ಸಹಕಾರ, ನಂಬಿಕೆ, ವಿಶ್ವಾಸದ ಮೇಲೆ 2015ರಲ್ಲಿ ಪ್ರಾರಂಭವಾದ ಸಂಸ್ಥೆ ನಗರ ಪ್ರದೇಶದಲ್ಲಿ ಜೀವನ ನಿರ್ವಹಿಸುತ್ತಿರುವ ಸಾಮಾನ್ಯ ನೌಕರರು ನಿವೇಶನವನ್ನು ಖರೀದಿ ಮಾಡುವುದು ಬಹಳಷ್ಟು ಕಷ್ಟಕರವಾದ ಸಂದರ್ಭದಲ್ಲಿ ನೌಕರರ ಸಹಕಾರದಿಂದ ಕೇವಲ ನಾಲ್ಕು ವರ್ಷದಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಬಡಾವಣೆ ನಿರ್ಮಾಣ ಮಾಡುತ್ತಿದೆ.

Site For Sale In Davanagere Submit Application Till January 31st

ಪ್ರಥಮ ಹಂತದ ನೌಕರರ ಬಡಾವಣೆಯನ್ನು ಹರಿಹರದ ವಿದ್ಯಾನಗರ 'ಸಿ' ಬ್ಲಾಕ್‌ನಲ್ಲಿ ಸುಸಜ್ಜಿತ ಬಡಾವಣೆ ನಿರ್ಮಾಣ ಮಾಡಿ 167 ಜನ ನೌಕರರಿಗೆ ನಿವೇಶನಗಳನ್ನು ಪಾರದರ್ಶಕವಾಗಿ ಹಂಚಿಕೆಮಾಡಿ ನೌಕರರು ಸುಸಜ್ಜಿತವಾದ ಮನೆಗಳನ್ನು ಕಟ್ಟಿಕೊಳ್ಳುವಂತೆ ಮಾಡಿರುವುದು ನಮ್ಮ ಸಂಘದ ಸಾಧನೆಯಾಗಿದೆ ಎಂದು ಹೇಳಿದೆ. 2ನೇ ಹಂತದ ನೌಕರರ ಬಡಾವಣೆಯು ಹರಿಹರ-ದಾವಣಗೆರೆ ರಸ್ತೆ (ರೈಲ್ವೆ ಟ್ರ್ಯಾಕ್ ಪಕ್ಕದ ಪ್ಯಾರಲಲ್ ರಸ್ತೆ)ಯಲ್ಲಿ ನಿರ್ಮಾಣಗೊಂಡಿದ್ದು ನಿವೇಶನ ಹಂಚಿಕೆ ಮಾಡಲು ಸಿದ್ಧಗೊಂಡಿದೆ.

ಇನ್ನೂ ನಿವೇಶನ ರಹಿತ ಬಹಳಷ್ಟು ನೌಕರರಿಂದ ನಿವೇಶನಗಳಿಗೆ ಬೇಡಿಕೆ ಇರುವುದರಿಂದ 3ನೇ ಹಂತದ ನೌಕರರ ಬಡಾವಣೆ ನಿರ್ಮಾಣ ಮಾಡಲು ಸಂಘದ ಆಡಳಿತ ಮಂಡಳಿಯು ತೀರ್ಮಾನಿಸಿದೆ. ಎಲ್ಲಾ ನೌಕರರಿಗೂ ಅನುಕೂಲವಾಗುವಂತೆ ಈಗಾಗಲೇ ಜಿಲ್ಲಾಧಿಕಾರಿಗಳಿಂದ ಭೂಪರಿವರ್ತನೆ ಹೊಂದಿರುವ ಜಮೀನನ್ನು ನೌಕರರ ಬಡಾವಣೆ ನಿರ್ಮಾಣ ಮಾಡಲು ಹರಿಹರ ನಗರಕ್ಕೆ ಹೊಂದಿಕೊಂಡಂತೆ 2ನೇ ಹಂತದ ನೌಕರರ ಬಡಾವಣೆಯ ಮೇಲ್ಭಾಗದ ದಕ್ಷಿಣಕ್ಕೆ ಕಾಳಿದಾಸನಗರ ಹತ್ತಿರದ ನೀಲಾನಹಳ್ಳಿ ರಸ್ತೆಯ ಫಸ್ಟ್ ಸ್ಟೆಪ್ ಸ್ಕೂಲ್ ಹತ್ತಿರ ಹರಿಹರ ಕಸಬಾ ಹೋಬಳಿಯ ಷೇರಾಪುರ ಸರ್ವೆ ನಂ : 11 ಮತ್ತು 12ರ ಜಮೀನುಗಳನ್ನು ಗುರುತಿಸಲಾಗಿದೆ.

ಸದರಿ ಜಮೀನನ್ನು ಅಭಿವೃದ್ಧಿಪಡಿಸಿ ಬಡಾವಣೆ ನಿರ್ಮಾಣ ಮಾಡಿ ನಿವೇಶನಗಳನ್ನು ಹಂಚಿಕೆ ಮಾಡಿಕೊಡಲು ನುರಿತ ಡೆವಲಪರ್‌ಗಳಾದ ಸಾಯಿ ರಿಯಲೇಟರ್ಸ್, ಹರಿಹರ ಇದರ ಪಾಲುದಾರರಾದ ಶ್ರೀ ಕೆ. ರವಿಚಂದ್ರ ಹಾಗೂ ಶ್ರೀಮತಿ ನಿಕಿತಾ ಎಂ. ಮಂಜುನಾಥ ಇವರಿಗೆ ವಹಿಸಿಕೊಡಲಾಗಿದೆ.

ನಿವೇಶನದ ದರದ ವಿವರಗಳು: ನಿವೇಶನದ ಬೆಲೆ ಚದರ, ಅಡಿ ಒಂದಕ್ಕೆ ರೂ. 1,450 ನಿಗದಿಗೊಳಿಸಲಾಗಿದ್ದು, 4 ಸಮ ಕಂತುಗಳಲ್ಲಿ ಮೂರು ತಿಂಗಳಿಗೊಮ್ಮೆ ಹಣವನ್ನು ಪಾವತಿಸಿ ನಿವೇಶನಗಳನ್ನು ಪಡೆದುಕೊಳ್ಳಬಹುದಾಗಿದೆ. ನಿವೇಶನದಾರರು ತಮ್ಮ ಸ್ವಂತ ಖರ್ಚಿನಲ್ಲಿ ಕ್ರಯ (Registration) ಮಾಡಿಕೊಳ್ಳಬೇಕು.

ದಾವಣಗೆರೆ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಸಕ್ತ ರಾಜ್ಯ ಸರ್ಕಾರಿ, ಕೇಂದ್ರ ಸರ್ಕಾರಿ, ಅರೆ ಸರ್ಕಾರಿ, ಮತ್ತು ಅನುದಾನಿತ ಶಾಲಾ ಕಾಲೇಜು ನೌಕರರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಒಟ್ಟು ಮೊತ್ತದ ಮೊದಲನೇ ಕಂತಿನ ಶೇ.25 ರಷ್ಟು ಹಣವನ್ನು ನಿವೇಶನದ ಅಳತೆಗೆ ತಕ್ಕಂತೆ ಅರ್ಜಿ ಸಲ್ಲಿಸಲು ದಿನಾಂಕ 30/12/2024ರ ವರೆಗೆ ನಿಗದಿಗೊಳಿಸಲಾಗಿತ್ತು. ನೌಕರರ ಬೇಡಿಕೆಯ ಮೇರೆಗೆ ನಿವೇಶನಕ್ಕೆ ಅರ್ಜಿಸಲ್ಲಿಸುವ ದಿನಾಂಕವನ್ನು ದಿನಾಂಕ 31/01/2025ರ ವರೆಗೆ ವಿಸ್ತರಿಸಲಾಗಿದೆ.

* ನಿವೇಶನದ ಅಳತೆ 30 x 40, ಒಟ್ಟು ಮೊತ್ತ ರೂ. 17,40,000-00. ಮೊದಲನೇ ಕಂತಿನ ಮೊತ್ತ ರೂ. 4,35,000-00
* ನಿವೇಶನದ ಅಳತೆ 30 x 50, ಒಟ್ಟು ಮೊತ್ತ ರೂ. 21,75,000-00. ಮೊದಲನೇ ಕಂತಿನ ಮೊತ್ತ ರೂ. 5,43,750-00.
* ನಿವೇಶನದ ಅಳತೆ 40 x 60, ಒಟ್ಟು ಮೊತ್ತ 34,80,000-00. ಮೊದಲನೇ ಕಂತಿನ ಮೊತ್ತ ರೂ. 8,70,000-00.

ಇಚ್ಛಿಸುವ ನಿವೇಶನವನ್ನು ಅರ್ಜಿ ನಮೂನೆಯಲ್ಲಿ ಗುರುತಿಸಿ ಕಂತಿನ ಹಣವನ್ನು ಸಂಘದ ಖಾತೆ ಸಂಖ್ಯೆ 2000009978-47 (IFSC Code KSCB0701001) ಜಿಲ್ಲಾ ಜೇಂದ್ರ ಸಹಕಾರಿ ಬ್ಯಾಂಕ್‌, ಜಯಶ್ರೀ ಚಿತ್ರ ಮಂದಿರ ಪಕ್ಕ, ಪಿಬಿ ರಸ್ತೆ, ಹರಿಹರ ಶಾಖೆಗೆ ಜಮಾ ಮಾಡಿ ಅರ್ಜಿ ನಮೊನೆಯೊಂದಿಗೆ ನೌಕರರ ಸೇವಾ ದೃಢೀಕರಣ ಪತ್ರ ಅಥವಾ ನೌಕರರ ಗುರುತಿನ ಚೀಟಿ, ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಹಾಗೂ ರೂ. 100ರ ಛಾಪಾ ಕಾಗದದಲ್ಲಿ ಪ್ರಮಾಣ ಪತ್ರ (ಆಫಿಡೆವಿಟ್ ) ದೊಂದಿಗೆ ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು.

ಮೇಲೆ ತಿಳಿಸಿದ ಕಂತಿನ ಮೊತ್ತವನ್ನು ಪೂರ್ಣ ಪಾವತಿಸಬೇಕು. ಭಾಗಶಃ ಹಣ ಪಡೆಯಲಾಗುವುದಿಲ್ಲ. ಸೀಮಿತ ನಿವೇಶನಗಳು ಲಭ್ಯವಿರುವ ಕಾರಣ ಮೊದಲು ಅರ್ಜಿ ಸಲ್ಲಿಸಿದ ನೌಕರರಿಗೆ ಆದ್ಯತೆ ನೀಡಲಾಗುವುದು. ಷೇರು ಹೊಂದಿರದ ನೌಕರರು ಹೊಸ ಷೇರು ಸದಸ್ಯತ್ವದ ಬಾಬ್ತು ರೂ. 5600 ಪಾವತಿಸಿ ಸದಸ್ಯತ್ವ ಪಡೆದು ನಿವೇಶನಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಸಂಘವು ಜಿಲ್ಲಾ ವ್ಯಾಪ್ತಿಯನ್ನು ಹೊಂದಿರುವುದರಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಥವಾ ದಾವಣಗೆರೆ ಜಿಲ್ಲೆಯ ನಿವಾಸಿಗಳಾಗಿದ್ದು ಬೇರೆ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ವಿಶೇಷ ಸೂಚನೆ. ಬ್ಯಾಂಕಿಗೆ ಹಣ ಸಂದಾಯ ಮಾಡಿದ ಚಲನ್ ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಿ ಸಂಘದ ಕಛೇರಿಗೆ ಸಲ್ಲಿಸುವುದು. ಬ್ಯಾಂಕಿಗೆ ಮೊದಲನೇ ಕಂತಿನ ಹಣ ಪಾವತಿ ಮಾಡಿದ ಆಧಾರದಂತೆ (Seniority) ಜೇಷ್ಠತೆ ನೀಡಲಾಗುವುದು. ಮೊದಲನೇ ಕಂತಿನ ಹಣ ಪಾವತಿ ಮಾಡಿದ ನೌಕರರಿಗೆ ಜೇಷ್ಠತೆ ಆಧಾರದಂತೆ ನಿವೇಶನಗಳನ್ನು ಪಾರದರ್ಶಕವಾಗಿ ಹಂಚಿಕೆ ಮಾಡಲಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+