ಎಸ್ಸಿ, ಎಸ್ಟಿಗೆ ಹೆಚ್ಚುವರಿ ಮೀಸಲಾತಿ ಸಿಗಲು ಸಂವಿಧಾನ ತಿದ್ದುಪಡಿ ಆಗಲೇಬೇಕು: ಸಿದ್ದರಾಮಯ್ಯ
ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ರಾಜ್ಯ ಸರ್ಕಾರ ಘೋಷಿಸಿರುವ ಮೀಸಲಾತಿ ಸೌಲಭ್ಯ ಸಿಗಬೇಕಾದರೆ ಸಂವಿಧಾನದಲ್ಲಿ ತಿದ್ದುಪಡಿ ಆಗಲೇಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಾತ್ರಾ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ದಾವಣಗೆರೆ, ಫೆಬ್ರವರಿ 9: ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ರಾಜ್ಯ ಸರ್ಕಾರ ಘೋಷಿಸಿರುವ ಮೀಸಲಾತಿ ಸೌಲಭ್ಯ ಸಿಗಬೇಕಾದರೆ ಸಂವಿಧಾನದಲ್ಲಿ ತಿದ್ದುಪಡಿ ಆಗಲೇಬೇಕು. 9 ಶೆಡ್ಯೂಲ್‌ನಲ್ಲಿ ಸೇರಲೇಬೇಕು. ಇಲ್ಲದಿದ್ದರೆ ಮೀಸಲಾತಿ ಊರ್ಜಿತವಾಗುವುದಿಲ್ಲ. ಈಗ ಲೋಕಸಭೆ ಅಧಿವೇಶನ ನಡೆಯುತ್ತಿದೆ. ಇದು ಒಳ್ಳೆಯ ಕಾಲ. ಈ ಬಗ್ಗೆ ವಾಲ್ಮೀಕಿ ಶ್ರೀಗಳು ಒತ್ತಾಯ ಮಾಡಬೇಕು. ಫೆ. 10ರಿಂದ ನಡೆಯಲಿರುವ ವಿಧಾನಸಭೆ ಅಧಿವೇಶನದಲ್ಲಿ ಈ ವಿಚಾರ ಸಂಬಂಧ ನಾನು ಪ್ರಸ್ತಾಪಿಸುತ್ತೇನೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಾತ್ರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೀಸಲಾತಿ ಸಂಬಂಧ ನಾಗಮೋಹನ್ ದಾಸ್ ಆಯೋಗ ರಚನೆ ಮಾಡಿದ್ದೇ ನಾವು. ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗ ಕುಮಾರಸ್ವಾಮಿ ಬಳಿ ತೆರಳಿದಾಗ ಒಪ್ಪಿಗೆ ಸೂಚಿಸಿದ್ದರು. ಎಸ್ಟಿ ಸಮಾಜದ ಶಾಸಕರು ಈ ಬಗ್ಗೆ ಹೆಚ್ಚಿನ ಒತ್ತಡ ಹೇರಿದ್ದರು. ನಾನೂ ಧ್ವನಿಗೂಡಿಸಿದ್ದೆ. ಆದರೆ ನಾಗಮೋಹನ್ ದಾಸ್ ವರದಿ ಎರಡು ವರ್ಷವಾದರೂ ಜಾರಿಯಾಗಲಿಲ್ಲ. ಈ ವರದಿಯನ್ವಯ ಎಸ್ಸಿ, ಎಸ್ಟಿ ಸಮಾಜಕ್ಕೆ ಒಟ್ಟು ಶೇಕಡಾ 24ರಷ್ಟು ಮೀಸಲಾತಿ ಸಿಗಬೇಕು. ಕೇವಲ ಕಾನೂನಿನಲ್ಲಿಯೇ ಉಳಿಯಬಾರದು, ಜಾರಿಗೆ ಬರಬೇಕೆಂಬುದಷ್ಟೇ ನನ್ನ ಉದ್ದೇಶ ಎಂದರು.
ಲೋಕಸಭೆ ಅಧಿವೇಶನ ನಡೆಯುತ್ತಿದೆ. ಇದು ಒಳ್ಳೆಯ ಕಾಲ. ಶೇಕಡಾ 50ಕ್ಕಿಂತ ಹೆಚ್ಚು ಮೀಸಲಾತಿ ನೀಡುವಾಗಿಲ್ಲ. ಇದಕ್ಕೆ ಸಂವಿಧಾನ ತಿದ್ದುಪಡಿ ಆಗಲೇಬೇಕು. ಶೆಡ್ಯೂಲ್ 9ಗೆ ಸೇರಿಸಿದರೆ ಮೀಸಲಾತಿ ರಕ್ಷಣೆ ಸಿಗುತ್ತದೆ. ಇಲ್ಲದಿದ್ದರೆ ಆಗಲ್ಲ. ಬಡವರಿಗೆ ಶೇಕಡಾ 10ರಷ್ಟು ಮೀಸಲಾತಿ ನೀಡಲು ಯಾರನ್ನೂ ಕೇಳಲಿಲ್ಲ. ಲೋಕಸಭೆ, ರಾಜ್ಯಸಭೆಯಲ್ಲಿ ಎರಡೇ ದಿನದಲ್ಲಿ ಮುಗಿಸಲಾಯಿತು. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬೇಕು. ಆದರೆ, ಆ ರೀತಿ ಮಾಡಿಲ್ಲ. ಯಾರನ್ನೂ ಕೇಳಿಲ್ಲ. ಕಾನೂನು, ಸಂವಿಧಾನ ವಿರುದ್ಧವಾಗಿ ಮಾಡಿದ್ರಿ. ಈಗ ಇದನ್ನೂ ಮಾಡಿ. ಕೇವಲ ಕಾನೂನು ಮಾಡಿದರೆ ಜನರನ್ನು ತಪ್ಪಿಗೆಳೆಯುವ ಕೆಲಸ ಆಗುತ್ತದೆ. ಸಫಲವಾಗಬೇಕಾದರೆ, ಊರ್ಜಿತವಾಗಬೇಕಾದರೆ ಸಂವಿಧಾನ ತಿದ್ದುಪಡಿ ಆಗಲೇಬೇಕು. ಆಗ ರಕ್ಷಣೆ ಸಿಗಲು ಸಾಧ್ಯ ಎಂದು ಹೇಳಿದರು.

ಸ್ವಾರ್ಥಕ್ಕೋಸ್ಕರ ಜಾತಿ ವ್ಯವಸ್ಥೆ ಮಾಡಿಕೊಂಡಿದ್ದೇವೆ. ನಮ್ಮ ಸಮಾಜದಲ್ಲಿ ಎಲ್ಲರಿಗೂ ಶಿಕ್ಷಣ ಕಲಿಯುವಂಥ, ಸಂಪತ್ತು ಅನುಭವಿಸುವ ಅವಕಾಶ ಇರಲಿಲ್ಲ. ಕೆಲವೇ ಜನರು ಶಿಕ್ಷಣ, ಸಂಪತ್ತು, ಅಧಿಕಾರ ಗಳಿಸುವಂಥ ಮತ್ತು ಅನುಭವಿಸುವಂತ ವಾತಾವರಣವಿತ್ತು. ವಾಲ್ಮೀಕಿ ಮಹರ್ಷಿ ಅವರು ಈ ಸಮಾಜದಲ್ಲಿ ಜನಿಸಿದ್ದರೂ ಜಗತ್ತಿಗೆ ಮಾನವೀಯ ಮೌಲ್ಯಗಳನ್ನು ಬಿತ್ತಿದಂಥ ಮಹಾನ್ ಆದಿ ಕವಿ ಎಂಬುದನ್ನು ನೆನಪು ಮಾಡಿಕೊಳ್ಳಬೇಕು. ವಾಲ್ಮೀಕಿ ಜನಾಂಗಕ್ಕೆ ಅನೇಕ ಇತಿಹಾಸಗಳಿವೆ. ಸಾಂಸ್ಕೃತಿಕ ರಾಯಭಾರಿ, ಪಾಳೇಗಾರರು, ರಾಜರು ಇದ್ದು, ದೊಡ್ಡ ಇತಿಹಾಸ ಇರುವ ಸಮುದಾಯ. ಈ ಸಮುದಾಯ ನಿಶ್ಚಿತವಾದ ಕಸುಬು ಇರಲಿಲ್ಲ. ಹಾಗಾಗಿ ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿರುವ ಸಮಾಜ. ಶಿಕ್ಷಣ, ರಾಜಕೀಯ ಅಧಿಕಾರ, ಆರ್ಥಿಕ ಶಕ್ತಿ ಇತ್ತೀಚಿನ ದಿನಗಳಲ್ಲಿ ಬಂದಿದೆ. ಇದಕ್ಕೆ ಕಾರಣ ಡಾ. ಬಿ. ಆರ್. ಅಂಬೇಡ್ಕರ್ ಕೊಟ್ಟ ಸಂವಿಧಾನ. ನಾವೆಲ್ಲರೂ ಶಿಕ್ಷಿತರಾಗಲು, ಅಧಿಕಾರಕ್ಕೆ ಬರಲು, ರಾಜಕೀಯದಲ್ಲಿ ಬೆಳೆಯಲು, ಆರ್ಥಿಕವಾಗಿ ಬೆಳೆಯಲು ಅಂಬೇಡ್ಕರ್ ನೀಡಿರುವ ಸಂವಿಧಾನ ಎಂದು ತಿಳಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಸರ್ಕಾರಿ ಕೆಲಸದಲ್ಲಿ ಬಡ್ತಿ ಮೀಸಲಾತಿ ನೀಡುವಂಥ ಕಾನೂನು ಜಾರಿಗೆ ತಂದಿದ್ದು ಕೇವಲ ಕರ್ನಾಟಕದಲ್ಲಿ ಮಾತ್ರ. ಈ ಮೀಸಲಾತಿ ಯಾವ ರಾಜ್ಯದಲ್ಲಿಯೂ ಇಲ್ಲ. ಇಲ್ಲಿ ಸರ್ಕಾರಿ ನೌಕರರು ಇದ್ದರೆ ಅವರಿಗೆ ಗೊತ್ತಿರುತ್ತದೆ. ರತ್ನಪ್ರಭಾ ಅವರು ಸರ್ಕಾರದ ರಾಜ್ಯ ಮುಖ್ಯ ಕಾರ್ಯದರ್ಶಿಯಾಗಿದ್ದಾಗ ವರದಿ ತರಿಸಿಕೊಂಡು ಕಾನೂನು ಮಾಡಿದೆವು. ಸುಪ್ರೀಂಕೋರ್ಟ್ ವರೆಗೆ ಹೋಗಿ ಅಲ್ಲಿಯೂ ಗೆದ್ದೆವು ಎಂದರು.

ಮೀಸಲಾತಿ ಹೆಚ್ಚಳ ಸಂಬಂಧ ಪ್ರತಿಭಟನೆ ವಾಪಸ್ ಪಡೆಯಿರಿ ಎಂದರೂ ವಾಲ್ಮೀಕಿ ಶ್ರೀಗಳು ವಾಪಸ್ ಪಡೆಯಲಿಲ್ಲ. ಯಾರು ಹೇಳಿದರೂ ಕೇಳಲಿಲ್ಲ. ಎರಡು ವರ್ಷಕ್ಕೂ ಜಾಸ್ತಿ ಕಾಲ ನಾಗಮೋಹನ್ ದಾಸ್ ವರದಿ ಕೊಟ್ಟರೂ ಜಾರಿಯಾಗಿರಲಿಲ್ಲ. ಇದಕ್ಕಾಗಿ ಅಧಿವೇಶನದಲ್ಲಿ ಹೆಚ್ಚಾಗಿ ಹೋರಾಟ ಮಾಡಿದ್ದುಎಸ್ಸಿ, ಎಸ್ಟಿ ಸಮಾಜದ ಕಾಂಗ್ರೆಸ್, ಜೆಡಿಎಸ್ ಶಾಸಕರು. ಸದನದ ಬಾವಿಗಿಳಿದು ಹೋರಾಟ ಮಾಡಿದರು. ಆದ್ರೆ, ಬಿಜೆಪಿ ಶಾಸಕರು ಬರಲಿಲ್ಲ. ಸ್ವಾಮೀಜಿಯವರಿಗೆ ಈ ವಿಚಾರ ತಿಳಿಸುತ್ತಿದ್ದೇನೆ. 257 ದಿನಗಳ ಕಾಲ ಶ್ರೀಗಳು ಹೋರಾಟ ಮಾಡಿದರ ಫಲವಾಗಿ ಅನಿವಾರ್ಯವಾಗಿ ರಾಜ್ಯ ಸರ್ಕಾರ ನಾಗಮೋಹನ್ ದಾಸ್ ವರದಿ ಜಾರಿಗೊಳಿಸಿತು. ಸರ್ವಪಕ್ಷಗಳ ಸಭೆ ಕರೆದಾಗ ಹೇಳಿದ್ದೆ. ಕಾನೂೂನು ಮಾಡಿ ಶೆಡ್ಯೂಲ್ 9ಗೆ ಸೇರಿಸಿ ಎಂದೆ. ಆದರೆ ಆಗಿಲ್ಲ. ಮೂಗಿಗೆ ತುಪ್ಪ ಹಚ್ಚಿದರೆ ವಾಸನೆಯಾದರೂ ಗೊತ್ತಾಗುತ್ತದೆ. ಹಣೆಗೆ ಹಚ್ಚಕ್ಕೆ ಹೋಗಬೇಡಿ ಎಂದಿದ್ದೆ ಎಂದು ಹೇಳಿದರು.
ಜಾತ್ರಾ ಮಹೋತ್ಸವಕ್ಕೆ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದವರಿಗೆ ಆಹ್ವಾನ ಇದೆ. ಬೇರೆ ಬೇರೆ ಪಕ್ಷಗಳ ನಾಯಕರಿಗೆ ಬೇರೆ ಸಮಯ ಕೊಟ್ಟಿರುವುದು ಸಂತೋಷ. ನನಗೆ ಮೊದಲನೇ ಸ್ಥಾನ ನೀಡಿದ್ದಾರೆ. ಹಾಗಾಗಿ ಧನ್ಯವಾದ ಅರ್ಪಿಸುತ್ತೇನೆ ಎಂದ ಅವರು, ವಾಲ್ಮೀಕಿ ಜಾತ್ರೆಯಲ್ಲಿ ಹಿಂದೆ ಕೂಡ ಭಾಗವಹಿಸಿದ್ದೆ. ಶ್ರೀಗಳು ಬರಲೇಬೇಕೆಂದು ಮನೆಗೆ ಬಂದು ಆಹ್ವಾನ ನೀಡಿದ್ದರು. ಬಂದೇ ಬರುತ್ತೇನೆ ಎಂದು ಹೇಳಿದ್ದೆ. ಪ್ರಜಾಧ್ವನಿ ರಥಯಾತ್ರೆ ಪ್ರಾರಂಭ ಮಾಡಿದ್ದೇವೆ. ನಿನ್ನೆ ಗುಲ್ಬರ್ಗಾದಲ್ಲಿದ್ದೆ. ಈ ಜಾತ್ರೆಯಲ್ಲಿ ಭಾಗವಹಿಸಬೇಕೆಂದು ಒಂದು ದಿನ ಪ್ರಜಾಧ್ವನಿ ಯಾತ್ರೆ ಮುಂದೂಡಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಶ್ರೀಗಳ ಆಶೀರ್ವಾದ ಪಡೆಯುವಂಥ ಅವಕಾಶ ಇಂದು ನನಗೆ ಸಿಕ್ಕಿದೆ ಎಂದರು.
-
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply












Click it and Unblock the Notifications