ನೂತನ ಸರ್ಕಾರ ಅಸ್ತಿತ್ವಕ್ಕೆ: ದಾವಣಗೆರೆಯಲ್ಲಿ 5 ಸಾವಿರ ಜನರಿಗೆ ನಾಳೆ ಅನ್ನದಾನ
ದಾವಣಗೆರೆ, ಮೇ 19: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿ. ಕೆ. ಶಿವಕುಮಾರ್ ಮೇ. 20ರಂದು ಪ್ರಮಾಣ ವಚನ ಸ್ವೀಕಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ಮೇ. 20ರಂದು ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶೇಖರಪ್ಪ ನಗರ ಹಾಗೂ ಭಾರತ್ ಕಾಲೋನಿಯ ಕಾಂಗ್ರೆಸ್ ಅಭಿಮಾನಿಗಳು ತಿಳಿಸಿದರು.
ಈ ಕಾರ್ಯಕ್ರಮದ ಸಂಚಾಲಕ ಕೆ. ಎ. ಪಾಪಣ್ಣ ಮಾತನಾಡಿ, ದಾವಣಗೆರೆಯ 19 ಹಾಗೂ 20 ನೇ ವಾರ್ಡ್‌ನ ಶೇಖರಪ್ಪ ನಗರ, ಭಾರತ್ ಕಾಲೋನಿ ಎ ಬ್ಲಾಕ್‌ನ ಕಾಂಗ್ರೆಸ್ ಅಭಿಮಾನಿಗಳು ಆಎಂರ್‌ಸಿ ರಸ್ತೆಯಲ್ಲಿರುವ ಗಣೇಶ ಹೋಟೆಲ್ ಸರ್ಕಲ್ ಬಳಿ ಮಧ್ಯಾಹ್ನ 12ಕ್ಕೆ ಅನ್ನಸಂತರ್ಪಣೆ ನಡೆಯಲಿದೆ ಎಂದರು.

ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪರ ಸೊಸೆ ಹಾಗೂ ಎಸ್. ಎಸ್. ಮಲ್ಲಿಕಾರ್ಜುನ್‌ರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಅವರು ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸುಮಾರು 5ರಿಂದ 10 ಸಾವಿರ ಜನರು ಅನ್ನ ಸಂತರ್ಪಣೆ.
ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆಯಿದೆ. ಕಾಂಗ್ರೆಸ್‌ಗೆ ಮತ್ತೆ ಅಧಿಕಾರ ದೊರೆತ ಹಿನ್ನೆಲೆಯಲ್ಲಿ ಅನ್ನ, ಸಾಂಬಾರು, ಗೋಧಿ ಹುಗ್ಗಿ ಸಿಹಿಯೊಂದಿಗೆ ಅನ್ನ ಸಂತರ್ಪಣೆ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜವಾಹರ್ ಬಾಲ್ ಮಂಚ್ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಕೆ
ದಾವಣಗೆರೆ: ನಗರದ ದುಗ್ಗಮ್ಮ ದೇವಸ್ಥಾನ ಮತ್ತು ಕಡಕ್ ಷಾ ವಲಿ ದರ್ಗಾದಲ್ಲಿ ದಾವಣಗೆರೆ ಜಿಲ್ಲಾ ಜವಾಹರ್ ಬಾಲ್ ಮಂಚ್, ಕಾಂಗ್ರೆಸ್ ಕಾರ್ಯಕರ್ತರಿಂದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅಭೂತಪೂರ್ವ ಗೆಲುವು ಸಾಧಿಸಿದ್ದು, ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಶುಭ ಕೋರಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ಮೊಹಮ್ಮದ್ ಜಿಕ್ರಿಯಾ, ಕಾಂಗ್ರೆಸ್ ಪಕ್ಷವು ಈ ಬಾರಿ ಚುನಾವಣೆಯಲ್ಲಿ ಹಿಂದೆಂದೂ ಕಾಣದ ಅಭೂತಪೂರ್ವ ಗೆಲುವು ಸಾಧಿಸಿರುವುದರಿಂದ ಎಲ್ಲಾ ಮುಖಂಡರು, ಕಾರ್ಯಕರ್ತರಿಗೆ ವಿಶೇಷವಾಗಿ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಾಗೂ ನೂತನ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರಿಗೆ ಅಭಿನಂದನೆ ಸಲ್ಲಿಸಿದರು.
ಮುಂದಿನ 5 ವರ್ಷ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿರಲಿ. ಬಡಪರ ಯೋಜನೆಗಳನ್ನು ನೀಡಲಿ. ರಾಜ್ಯದಲ್ಲಿ ಶಾಂತಿ ಸಮೃದ್ಧಿ, ಸಹೋದರತ್ವ ನೆಲೆಸಲಿ ಎಂದು ಸಿಹಿ ಹಂಚಿ ಶುಭ ಕೋರಿದರು.
ದಾವಣಗೆರೆಯಲ್ಲಿ ನಡೆದ ಐತಿಹಾಸಿಕ ಸಿದ್ದರಾಮೋತ್ಸವದ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರಲು ಕಾರಣವಾಗಿದ್ದು ಈ ನಿಟ್ಟಿನಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಜಯ ಸಾಧಿಸಿದ ಎಲ್ಲಾ ನೂತನ ಶಾಸಕರಿಗೆ ಅಭಿನಂದಿಸಿ ಮಧ್ಯಕರ್ನಾಟಕದಲ್ಲಿ ಅತಿ ಹೆಚ್ಚು ಸ್ಥಾನ ಗಳಿಸಲು ಶ್ರಮವಹಿಸಿದ ಹಿರಿಯರಾದ ಡಾ.ಶಾಮನೂರು ಶಿವಶಂಕರಪ್ಪ ಇಲ್ಲವೇ ಎಸ್.ಎಸ್.ಮಲ್ಲಿಕಾರ್ಜುನ್ ರವರಿಗೆ ಪ್ರಭಾವಿ ಖಾತೆಗಳನ್ನು ನೀಡಿ ಇನ್ನೂ ಹೆಚ್ಚಿನ ಸೇವೆ ಮಾಡಲು ಅವಕಾಶ ನೀಡಬೇಕೆಂದು ಪಕ್ಷದ ಹೈಕಮಾಂಡ್‌ಗೆ ಮನವಿ ಮಾಡಿದರು.
ಈ ವೇಳೆ ಹಿರಿಯ ಮುಖಂಡರಾದ ರಾಜು ಭಂಡಾರಿ, ಕಿಸಾನ್ ಕಾಂಗ್ರೆಸ್ ಮುಖಂಡ ಎಂ. ಹಾಲೇಶ್, ಮಂಜುಸ್ವಾಮಿ ಕತ್ತಲಗೇರಿ, ಸುರೇಶ್.ಎಂ.ಜಾಧವ್, ಹರೀಶ್.ಹೆಚ್, ಹಾಲೇಶ್. ಬಿ,ಶಿಲ್ಪಾ ಪರಶುರಾಮ್, ಪ್ರೇಮಾ, ರಿಯಾಜುದ್ದೀನ್, ಧನಂಜಯ್
ಮತ್ತಿತರ ಪದಾಧಿಕಾರಿಗಳು, ಮುಖಂಡರು ಭಾಗವಹಿಸಿದ್ದರು.












Click it and Unblock the Notifications