Get Updates
Get notified of breaking news, exclusive insights, and must-see stories!

Saina Nehwal: ಶಾಮನೂರು ಶಿವಶಂಕರಪ್ಪ ವಿರುದ್ಧ ಬ್ಯಾಡ್ಮಿಂಟನ್ ತಾರೆ ಕಿಡಿಕಾರಿದ್ದೇಕೆ?

ದಾವಣಗೆರೆ, ಮಾರ್ಚ್‌, 31: ಈಗಾಗಲೇ ಲೋಕಸಭೆ ಚುನವಣೆಗೆ ದಿನಾಂಕ ನಿಗದಿಯಾಗಿದ್ದು, ಅಭ್ಯರ್ಥಿಗಳು ಕೆಲವೆಡೆ ಒಳಗೊಳಗೆ ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ ಎನ್ನುವ ಮಾಹಿತಿಗಳು ಕೇಳಿಬರುತ್ತಿವೆ. ಅಲ್ಲದೆ ಒಬ್ಬರ ಮೇಲೊಬ್ಬರು ಆರೋಪ, ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ. ಇದೀಗ ಶಾಮನೂರು ಶಿವಶಂಕರಪ್ಪ ಅವರು ಜಿ.ಎಂ.ಸಿದ್ದೇಶ್ವರ ಪತ್ನಿ ಗಾಯತ್ರಿ ಸಿದ್ದೇಶ್ವರ ವಿರುದ್ಧ ಆಡಿದ ಆ ಒಂದೇ ಒಂದು ಮಾತಿಗೆ ಬ್ಯಾಡ್ಮಿಂಟನ್‌ ತಾರೆ ತಿರುಗೇಟು ನೀಡಿದ್ದಾರೆ.

ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ ಪತ್ನಿ ಗಾಯತ್ರಿ ಸಿದ್ದೇಶ್ವರ ವಿರುದ್ಧ ಶಾಮನೂರು ಶಿವಶಂಕರಪ್ಪ ಅವರು ಹಗುರವಾಗಿ ಮಾತನಾಡಿದ್ದಕ್ಕಾಗಿ ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಹಾಲಿ ಶಾಸಕ ಶಿವಶಂಕರಪ್ಪ (92), ಸಂಸದ ಜಿ.ಎಂ.ಸಿದ್ದೇಶ್ವರ ಪತ್ನಿ, ಬಿಜೆಪಿ ಅಭ್ಯರ್ಥಿ "ಗಾಯತ್ರಿ ಸಿದ್ದೇಶ್ವರ ಅವರು ಅಡುಗೆ ಮನೆಗೆ ಲಾಯಕ್‌ ," ಎನ್ನುವ ಹೇಳಿಕೆಯನ್ನು ನೀಡಿದ್ದರು. ಈ ಹೇಳಿಕೆ ವಿರುದ್ಧ ಸೈನಾ ನೆಹ್ವಾಲ್ ಕೆಂಡಕಾರಿದ್ದಾರೆ.

Saina Nehwal Why did the badminton player express anger against Shamanur Shivashankarappa

ಇನ್ನು 2012ರ ಲಂಡನ್ ಒಲಿಂಪಿಕ್ಸ್‌ಲ್ಲಿ ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದ ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್ (34), "ಕರ್ನಾಟಕದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರು ಮಹಿಳೆಯರನ್ನು ಅಡುಗೆಮನೆಗೆ ಸೀಮಿತಗೊಳಿಸಬೇಕು ಎಂದು ಹೇಳಿದ್ದಾರೆ. ದಾವಣಗೆರೆ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ವಿರುದ್ಧ ಈ ರೀತಿಯ ಅವಹೇಳನಕಾರಿ ಹೇಳಿಕೆ ನೀಡಿರುವುದು ಸರಿಯಲ್ಲ," ಎಂದು ಬರೆದಕೊಳ್ಳುವ ಮೂಲಕ ತೀಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ.

"ದೇಶದ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಛಾಪು ಮೂಡಿಸಲು ಬಯಸಿದಾಗ ಮಹಿಳೆಯರ ವಿರುದ್ಧ ಇಂತಹ ದ್ವೇಷದ ಹೇಳಿಕೆಗಳು ಕಳವಳಕಾರಿ," ಎಂದು ಟ್ವೀಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ದಾವಣಗೆರೆ BJPಯಲ್ಲಿ ಮತ್ತೆ ಸ್ಫೋಟ: ಇನ್ನೇನೂ ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ಶಮನವಾಯ್ತು ಅನ್ನೋವಷ್ಟರಲ್ಲಿ ಮತ್ತೆ ಭಿನ್ನ ರಾಗ ತಾರಕಕ್ಕೇರಿದೆ. ಅಲ್ಲದೆ, ದೂಡಾ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಉಚ್ಚಾಟನೆಗೆ ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ್, ಎಂ.ಪಿ.ರೇಣುಕಾಚಾರ್ಯ ನೇತೃತ್ವದ 11 ಮಂದಿಯ ಲಗಾನ್ ಟೀಂ ಪಕ್ಷದ ವರಿಷ್ಠರಿಗೆ ಪತ್ರ ಬರೆದಿದೆ.

ಅಪೂರ್ವ ರೆಸಾರ್ಟ್‌ನಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಹಾಗೂ ಬಿಜೆಪಿ ಭಿನ್ನಮತೀಯರ ಗುಂಪಿನ ನಡುವೆ ಸಂಧಾನ ಸಭೆ ನಡೆಸಿದ್ದರು. ಸಭೆಯ ಬಳಿಕ ಮಾತನಾಡಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವರು ಆಲ್ ಇಸ್ ವೆಲ್. ಎಲ್ಲವೂ ಸರಿ ಹೋಗಿದೆ. ಅತಿ ಹೆಚ್ಚಿನ ಮತಗಳಿಂದ ಗಾಯತ್ರಿ ಸಿದ್ದೇಶ್ವರ ಅವರನ್ನು ಲೋಕಸಭೆಗೆ ಕಳುಹಿಸಿಕೊಡಬೇಕು. ಎಸ್.ಎ.ರವೀಂದ್ರನಾಥ್ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುವುದಾಗಿ ಘೋಷಿಸಿ ಹೋಗಿದ್ದರು.

ಯಡಿಯೂರಪ್ಪ ಬಂದು ಹೋದ ಬಳಿಕವೂ ಬಂಡಾಯದ ರಹಣಕಹಳೆ ಮೊಳಗಿಸಲಾಗಿದೆ. ಇದಕ್ಕೆ ಕಾರಣ ಯಶವಂತರಾವ್ ಜಾಧವ್ ಹಾಗೂ ಮಹಾನಗರ ಪಾಲಿಕೆ ಮಾಜಿ ಮೇಯರ್ ಅಜಯ್ ಕುಮಾರ್ ನಡುವಿನ ಜಟಾಪಟಿ. ಇದು ಈಗ ತಾರಕಕ್ಕೇರಿದ್ದು, ಯಶವಂತರಾವ್ ಜಾಧವ್ ಉಚ್ಚಾಟನೆ ಮಾಡಲೇಕೆಂದು ಪಟ್ಟು ಹಿಡಿದಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಕರ್ನಾಟಕ ರಾಜ್ಯ ಉಸ್ತುವಾರಿ ರಾಧಮೋಹನ್ ಅಗರ್ ವಾಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜೇಶ್ ಜಿ ಅವರಿಗೆ ಪತ್ರ ಕಳುಹಿಸಲಾಗಿದೆ. ಈ ಮೂಲಕ ಸಿದ್ದೇಶ್ವರರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಯಶವಂತರಾವ್ ಜಾಧವ್ ವಿರುದ್ಧ ಗುಟುರು ಹಾಕಲಾಗಿದೆ.

ವಾಗ್ವಾದ ನಡೆದಿದ್ದು ಯಾಕೆ?: ಅಪೂರ್ವ ರೆಸಾರ್ಟ್‌ನಲ್ಲಿ ಯಡಿಯೂರಪ್ಪ, ಪ್ರಹ್ಲಾದ್ ಜೋಶಿ, ರಾಧಮೋಹನ್ ಅಗರ್ ವಾಲ್, ಜಿ. ವಿ. ರಾಜೇಶ್ ಅವರ ಸಮ್ಮುಖದಲ್ಲಿ ಸಂಧಾನ ಸಭೆ ನಡೆಯುತಿತ್ತು. ಈ ವೇಳೆ ಯಶವಂತರಾವ್ ಜಾಧವ್ ಹಾಗೂ ಅಜಯ್ ಕುಮಾರ್ ನಡುವೆ ಮಾತಿನ ಚಕಮಕಿ ನಡೆಯಿತು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ನಾನು ಯಶವಂತರಾವ್ ಜಾಧವ್ ಅವರಿಗೆ ಲಕ್ಷ ಲಕ್ಷ ಹಣ ಕೊಟ್ಟಿದ್ದೆ ಎನ್ನುವ ಅಜಯ್ ಕುಮಾರ್ ಮಾತು ಯಶವಂತರಾವ್ ಜಾಧವ್ ರೊಚ್ಚಿಗೇಳುವಂತೆ ಮಾಡಿತು. ಈ ವೇಳೆ ಇಬ್ಬರ ನಡುವೆ ವಾಗ್ವಾದ ಜೋರಾಯಿತು. ಏರು ದನಿಯಲ್ಲಿ ಮಾತನಾಡಿದರು. ಸವಾಲು-ಪ್ರತಿಸವಾಲು ಹಾಕಲಾಯಿತು ಎಂದು ಹೇಳಲಾಗುತ್ತಿದೆ. ಬಳಿಕ ಯಡಿಯೂರಪ್ಪ, ಪ್ರಹ್ಲಾದ್ ಜೋಶಿ ಸೇರಿದಂತೆ ಹಿರಿಯರು ಇಬ್ಬರನ್ನು ಸಮಾಧಾನ ಪಡಿಸಿದರು ಎಂದು ತಿಳಿದುಬಂದಿದೆ.

ಯಶವಂತರಾವ್ ಜಾಧವ್ ಅವರು ಯಾವುದೇ ಹಣ ಕೊಟ್ಟಿಲ್ಲ. ಸೋಲಿನ ಬಳಿಕ ಹಾಗೂ ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಇಂಥ ಆರೋಪ ಮಾಡುತ್ತಿರುವುದು ಯಾಕೆ ಎಂದು ಯಶವಂತರಾವ್ ಜಾಧವ್ ಪ್ರಶ್ನಿಸಿದರು. ಈ ವೇಳೆ ಅಜಯ್ ಕುಮಾರ್ ಅವರು ಯಶವಂತರಾವ್ ಜಾಧವ್ ನಡುವೆ ಜೋರಾಗಿ ಮಾತಾಯಿತು. ಆಗ ಮಧ್ಯಪ್ರವೇಶಿಸಿದ ರೇಣುಕಾಚಾರ್ಯ ಅವರು ಅಜಯ್ ಕುಮಾರ್ ಪರ ಬ್ಯಾಟ್ ಬೀಸಿದರು.

ಬರೆದಿರುವ ಪತ್ರದ ದೂರಿನಲ್ಲೇನಿದೆ?: ಮಾರ್ಚ್ 26-03-2024ರಂದು ದಾವಣಗೆರೆಯ ಅಪೂರ್ವ ರೆಸಾರ್ಟ್‌ನಲ್ಲಿ ನಡೆದ ಬಿಜೆಪಿ ಪ್ರಮುಖರ ಸಭೆ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ಜರುಗಿತು. ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆ ಬಗ್ಗೆ ವಿಸ್ತ್ರತವಾಗಿ ಚರ್ಚಿಸಲಾಯಿತು.

ಸಭೆಯ ಅಂತ್ಯದಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ, ದಾವಣಗೆರೆ ಮಹಾನಗರ ಪಾಲಿಕೆಯ ಮಾಜಿ ಮೇಯರ್, ಹಾಲಿ ಸದಸ್ಯ ಬಿ.ಜಿ.ಅಜಯ್ ಕುಮಾರ್ ಅವರ ಜೊತೆ ಯಶವಂತರಾವ್ ಜಾಧವ್ ಅವರು ಅವಾಚ್ಯ ಶಬ್ದಗಳೊಂದಿಗೆ ವಾಗ್ವಾದ ಮಾಡಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಹಿರಿಯರಾದ ಬಿ.ಎಸ್.ಯಡಿಯೂರಪ್ಪನವರು, ಕರ್ನಾಟಕ ಲೋಕಸಭಾ ಪ್ರಭಾರಿ ರಾಧಮೋಹನ್ ಅಗರ್ ವಾಲ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಪ್ರಾಂತ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ರಾಜೇಶ್‌ ಜಿ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ್, ಜಿ.ಕರುಣಾಕರ ರೆಡ್ಡಿ, ಎಂ.ಪಿ.ರೇಣುಕಾಚಾರ್ಯ, ಕ್ಲಸ್ಟರ್ ಪ್ರಮುಖ್ ಕೆ.ಎಸ್.ನವೀನ್, ಎನ್.ರವಿಕುಮಾರ್, ಸಂಸದ ಜಿ.ಎಂ.ಸಿದ್ದೇಶ್ವರ್ ಇವರ ಸಮಕ್ಷಮದಲ್ಲಿಯೇ ಅತ್ಯಂತ ಅನುಚಿತವಾಗಿ ವರ್ತಿಸಿದ ಯಶವಂತರಾವ್ ಜಾಧವ್ ಅವರ ನಡವಳಿಕೆ ಖಂಡನೀಯ.

ಬಿಜೆಪಿಯ ಪ್ರಮುಖರ ಸಭೆಯಲ್ಲಿ ತುಂಬಾ ಆಗೌರವಯುತ ವರ್ತನೆ ಮಾಡಿರುತ್ತಾರೆ. ಬಿಜೆಪಿ ಕಾರ್ಯಕರ್ತರ ಗೌರವ ಕಾಪಾಡುವ ಜವಾಬ್ದಾರಿ ತಮ್ಮದಾಗಿದ್ದು, ಚುನಾವಣೆಯಲ್ಲಿ ನಾವೆಲ್ಲರೂ ಸಕ್ರಿಯವಾಗಿ ಭಾಗವಹಿಸಲು, ತುರ್ತಾಗಿ ಯಶವಂತರಾವ್ ಜಾಧವ್ ಬಗ್ಗೆ ಶಿಸ್ತು ಕ್ರಮ ಜರುಗಿಸಬೇಕಾಗಿ ವಿನಂತಿಸುತ್ತೇವೆ ಎಂದು ಪತ್ರದಲ್ಲಿ ದೂರಲಾಗಿದೆ.

ಎಸ್.ಎ.ರವೀಂದ್ರನಾಥ್, ಕರುಣಾಕರ ರೆಡ್ಡಿ, ಎಂ.ಪಿ.ರೇಣುಕಾಚಾರ್ಯ, ಟಿ.ಗುರುಸಿದ್ದನಗೌಡ, ಎಂ.ಬಸವರಾಜ್ ನಾಯ್ಕ್, ಡಾ.ಎ.ಹೆಚ್.ಶಿವಯೋಗಿಸ್ವಾಮಿ, ಲೋಕಿಕೆರೆ ನಾಗರಾಜ್, ಬಿ.ಜಿ.ಅಜಯ್ ಕುಮಾರ್, ಮಾಡಾಳ್ ಮಲ್ಲಿಕಾರ್ಜುನ್, ಕೆ.ಎಂ.ಸುರೇಶ್, ಎಂ.ಎನ್.ಕಲ್ಲೇಶ್, ಡಾ.ಟಿ.ಜಿ.ರವಿಕುಮಾರ್ ಅವರು ಕೂಡಲೇ ಯಶವಂತರಾವ್ ಜಾಧವ್ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ಈ ವಿಚಾರ ಯಾವ ಮಟ್ಟಕ್ಕೆ ಹೋಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+