ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆಯಲ್ಲಿ ಕೊರೊನಾ ನಿರೋಧಕ ಲಸಿಕೆ ಖಾಲಿ: ಜನರ ಪರದಾಟ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಏಪ್ರಿಲ್ 24: ದಾವಣಗೆರೆ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೇವಲ ನಗರ ಮಾತ್ರವಲ್ಲ, ಗ್ರಾಮೀಣ ಪ್ರದೇಶಗಳಲ್ಲಿಯೂ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ನಡುವೆ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ನಿರೋಧಕ ಲಸಿಕೆ ಖಾಲಿಯಾಗಿದ್ದು, ಲಸಿಕೆ ಹಾಕಿಸಿಕೊಳ್ಳಲು ಬಂದವರು ವಾಪಾಸ್ ಹೋಗುವಂತ ಸ್ಥಿತಿ ನಿರ್ಮಾಣವಾಗಿದೆ.

ಮೊದಲ ಹಂತದ ಲಸಿಕೆ ಪಡೆದವರು, ಎರಡನೇ ಡೋಸ್ ಲಸಿಕೆ ಪಡೆಯಲು ಬಂದು ವಾಪಸ್ ಆಗುತ್ತಿದ್ದು ಆಸ್ಪತ್ರೆಯಲ್ಲಿ ಕೇಳಿದರೆ ಸರಿಯಾದ ಉತ್ತರವೂ ಸಿಕ್ತಿಲ್ಲ ಎನ್ನೋದು ಜನರ ಆರೋಪ.

Davanagere: Public outrage over Coronavirus Vaccine shortage

ಲಸಿಕೆ ಡೋಸ್ ಗಳು ಖಾಲಿಯಾಗಿವೆ. ಯಾವಾಗ ಬರುತ್ತವೆ ಎನ್ನುವುದು ಗೊತ್ತಿಲ್ಲ ಎಂದು ಜಿಲ್ಲಾಸ್ಪತ್ರೆಯ ಸಿಬ್ಬಂದಿ ಹೇಳುತ್ತಾರೆ. ನಾಳೆ ಬರುತ್ತಾ ಅಂತ ಕೇಳಿದರೂ ಸಹಾ ಯಾವುದೇ ಉತ್ತರವಿಲ್ಲ. ಯಾವಾಗ ಬರುತ್ತೆ ಅಂತ ನಮಗೆ ಗೊತ್ತಿಲ್ಲ ಎನ್ನುತ್ತಾರೆ ಅಲ್ಲಿರುವ ಸಿಬ್ಬಂದಿ.

Davanagere: Public outrage over Coronavirus Vaccine shortage

ಆದರೆ ಮಾಧ್ಯಮದಲ್ಲಿ ಮಾತ್ರ ಲಸಿಕೆ ಹಾಕಿಸಿಕೊಳ್ಳಿ ಅಂತ ರಾಜಕಾರಣಿಗಳು ಹೇಳುತ್ತಾರೆ, ಆದ್ರೆ ಇಲ್ಲಿಗೆ ಬಂದರೆ ಲಸಿಕೆ ಇಲ್ಲ ಎಂದರೆ ನಾವು ಯಾರನ್ನು ಕೇಳಬೇಕು ಎಂಬುದು ಸಾರ್ವಜನಿಕರ ಅಳಲು. ಈ ಕುರಿತು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರನ್ನು ಕೇಳಿದರೆ ಲಸಿಕೆ ಖಾಲಿ ಆಗಿರುವುದು ಗಮನಕ್ಕೆ ಬಂದಿದೆ. ಸುಮಾರು 300 ಜನರಿಗೆ ಆಗುವಷ್ಟು ಇತ್ತು. ಅದಕ್ಕಿಂತ ಜಾಸ್ತಿ ಜನ ಬಂದಿದ್ದರಿಂದ, ಅದು ಮುಗಿದ ನಂತರ ವಾಪಸ್ ಕಳಿಸಿದ್ದಾರೆ. ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತಂದಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

Recommended Video

KL Rahul ಮುಂಬೈ ವಿರುದ್ಧ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು ಇದೇ ಕಾರಣಕ್ಕೆ | Oneindia Kannada

English summary
Davanagere: Public outrage over Coronavirus Vaccine shortage in district hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X