ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ ಪಾಲಿಕೆಯ 21.56 ಕೋಟಿ ರೂ. ಉಳಿತಾಯ ಬಜೆಟ್ ಮಂಡನೆ: ಪ್ರಮುಖ ಅಂಶಗಳು

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಮಾರ್ಚ್ 31: 2022-23ನೇ ಸಾಲಿನ ದಾವಣಗೆರೆ ಮಹಾನಗರ ಪಾಲಿಕೆಯ ಆಯವ್ಯಯ ಮಂಡನೆಯಾಗಿದ್ದು, ಈ ಬಜೆಟ್‌ನಲ್ಲಿ ಡಿಜಟಲೀಕರಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ.

ಈ ಆಯವ್ಯಯದಲ್ಲಿ ದಾವಣಗೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೊಸದಾಗಿ ದೊಡ್ಡದಾದ ಯೋಜನೆಗಳಿಲ್ಲ. ಕಳೆದ ಎರಡು ವರ್ಷ ಮಂಡಿಸಿರುವ ಬಜೆಟ್‌ನಲ್ಲಿದ್ದ ಹೆಚ್ಚಿನ ಯೋಜನೆಗಳನ್ನೇ ಮುಂದುವರಿಸಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚಿನದ್ದೇನ್ನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ.

 ವಿಶೇಷ ವರದಿ: ಬಡವರ ಹಸಿವು ನೀಗಿಸುತ್ತಿದ್ದ ತಾಣ ಪಾಳುಕೊಂಪೆ; ಹಳ್ಳ ಹಿಡಿಯುತ್ತಾ ಇಂದಿರಾ ಕ್ಯಾಂಟೀನ್? ವಿಶೇಷ ವರದಿ: ಬಡವರ ಹಸಿವು ನೀಗಿಸುತ್ತಿದ್ದ ತಾಣ ಪಾಳುಕೊಂಪೆ; ಹಳ್ಳ ಹಿಡಿಯುತ್ತಾ ಇಂದಿರಾ ಕ್ಯಾಂಟೀನ್?

ಈ ಬಾರಿಯ ಡಿಜಟಲೀಕರಣದ ಬಜೆಟ್‌ನಲ್ಲಿ ಹಳೆಯ ಬಾಟಲ್‌ನಲ್ಲಿ ಹೊಸ ಮದ್ಯ ಸೇರಿಸಿದಂತಾಗಿದೆ ಎಂಬುದು ವಿರೋಧ ಪಕ್ಷದ ವಿಶ್ಲೇಷಣೆಯಾದರೆ, ಇದೊಂದು ಉತ್ತಮ ಬಜೆಟ್, ಡಿಜಟಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿರುವುದು ಒಳ್ಳೆಯ ಬೆಳವಣಿಗೆ ಎಂದು ಆಡಳಿತ ಪಕ್ಷದ ಸದಸ್ಯರು ಬೆನ್ನು ತಟ್ಟಿಕೊಂಡಿದ್ದಾರೆ.

Presentation of Davanagere City Corporation Budget 2022-23; More Emphasis On Degitalization

ದಾವಣಗೆರೆ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ 2022-23ನೇ ಸಾಲಿನ ಆಯವ್ಯಯವನ್ನು ಪಾಲಿಕೆ ಮೇಯರ್ ಆರ್. ಜಯಮ್ಮ ಆದೇಶದ ಮೇರೆಗೆ ಪಾಲಿಕೆ ಹಣಕಾಸು ಮತ್ತು ಮೇಲ್ಮನವಿ ಸ್ಥಾಯಿ ಸಮಿತಿ ಅಧ್ಯಕ್ಷ ಸೋಗಿ ಶಾಂತಕುಮಾರ್ ಮಂಡನೆ ಮಾಡಿದರು. 512.12 ಕೋಟಿ ರೂಪಾಯಿ ಬಜೆಟ್ ಗಾತ್ರವಿದ್ದು, 21.56 ಕೋಟಿ ರೂ.ಗಳ ಉಳಿತಾಯದ ನಿರೀಕ್ಷೆಯೊಂದಿಗೆ ಮಂಡನೆ ಮಾಡಲಾಗಿದೆ.

2021-22ನೇ ಸಾಲಿನ ಪರಿಷ್ಕೃತ ಹಾಗೂ 2022-23ನೇ ಸಾಲಿನ ಆಯವ್ಯಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ 21.56 ಕೋಟಿ ರೂ.ಗಳ ಉಳಿತಾಯ ಬಜೆಟ್ ಮಂಡಿಸಿದರು. ಪಾಲಿಕೆಯಲ್ಲಿ ಪ್ರಸ್ತುತ ಇರುವ ಆರಂಭಿಕ ಶಿಲ್ಕು 12,256.27 ಲಕ್ಷ ರೂ.ಗಳ ಜೊತೆಗೆ ರಾಜಸ್ವ ಸ್ವೀಕೃತಿಯಿಂದ 13,633.80 ಲಕ್ಷ ರೂ. ಬಂಡವಾಳ ಸ್ವೀಕೃತಿಯಿಂದ 8,930.36 ಲಕ್ಷ ರೂ. ಅಸಾಮಾನ್ಯ ಸ್ವೀಕೃತಿಯಿಂದ 16392.27 ಲಕ್ಷ ರೂ. ಸೇರಿದಂತೆ 2022-23ನೇ ಸಾಲಿನಲ್ಲಿ ಪಾಲಿಕೆಯು ಒಟ್ಟು 51212.70 ಲಕ್ಷ ರೂ. ಆದಾಯ ಕ್ರೂಢೀಕರಿಸುವ ನಿರೀಕ್ಷೆ ಹೊಂದಿದೆ.

Presentation of Davanagere City Corporation Budget 2022-23; More Emphasis On Degitalization

ರಾಜಸ್ವ ಪಾವತಿಗಾಗಿ 12,504.60 ಲಕ್ಷ ರೂಪಾಯಿ, ಬಂಡವಾಳ ಪಾವತಿಗಾಗಿ 15566.00 ಲಕ್ಷ ರೂಪಾಯಿ ಹಾಗೂ ಅಸಾಮಾನ್ಯ ಪಾವತಿಗಾಗಿ 20,986.00 ಲಕ್ಷ ರೂ. ಸೇರಿದಂತೆ ಒಟ್ಟು 49,056.60 ಲಕ್ಷ ರೂ.ಗಳನ್ನು ಪಾಲಿಕೆ ಸಿಬ್ಬಂದಿಯ ವೇತನ, ವಿವಿಧ ಅಭಿವೃದ್ದಿ
ಕಾಮಗಾರಿ, ನಾಗರಿಕರಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಿ 21.56 ಕೋಟಿ ರೂ. ಉಳಿಸುವ ಗುರಿಯನ್ನು ಪಾಲಿಕೆ ಹಾಕಿಕೊಂಡಿದೆ.

Presentation of Davanagere City Corporation Budget 2022-23; More Emphasis On Degitalization

ಬಜೆಟ್‌ನ ಪ್ರಮುಖ ಅಂಶಗಳು
- ಮೂಲಭೂತ ಸೌಕರ್ಯ ಆಸ್ತಿಗಳ ನಿರ್ವಹಣೆ ಮತ್ತು ದುರಸ್ತಿ.
- ಹೊರಗುತ್ತಿಗೆ ವೆಚ್ಚಗಳು
- ಉಗ್ರಾಣ ಸಾಮಗ್ರಿಗಳ ಖರೀದಿ, ಸ್ಮಶಾನಗಳ ಅಭಿವೃದ್ಧಿ
- ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು
- ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಐಎಎಸ್/ಕೆಎಎಸ್‌ಗೆ ಆಯ್ಕೆಯಾಗಲು ತರಬೇತಿ
- ಅನಗತ್ಯವಾಗಿ ನಿರ್ಮಿಸಿರುವ ರಸ್ತೆ ಉಬ್ಬುಗಳನ್ನು ತೆರವುಗೊಳಿಸುವುದು ಹಾಗೂ ರಸ್ತೆಗಳ ಗುಂಡಿಗಳನ್ನು ಮುಚ್ಚುವ ಕಾಮಗಾರಿ
- ನಗರ ಅರಣ್ಯೀಕರಣ ಹಾಗೂ ವಿಶ್ವ ಪರಿಸರ ದಿನಾಚರಣೆ
- ಮಳೆನೀರು ಮರುಪೂರಣ
- ರಾಜ್ಯ, ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸುವ ನಗರದ ಕ್ರೀಡಾಪಟುಗಳಿಗೆ ಪ್ರೋತ್ಸಾಹ
- ವಯೋ ವೃದ್ಧಾಶ್ರಮಗಳಿಗೆ ಪರಿಕರವನ್ನು ನೀಡುವುದು
- ಉದ್ಯಾನವನಗಳನ್ನು ನಿರ್ವಹಣೆ ಮಾಡಲು ಪರಿಕರಗಳ ಖರೀದಿ
- ಡಿಜಿಟಲ್ ಗ್ರಂಥಾಲಯ ನಿರ್ಮಾಣ
- ಪಾಲಿಕೆ ಒಡೆತನದಲ್ಲಿ ಬರುವ ನಿವೇಶನದಲ್ಲಿ ಒಂದು ಸುಸಜ್ಜಿತವಾದ ಸಮುದಾಯ ಭವನ ನಿರ್ಮಿಸುವುದು
- ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ ಸರ್ಕಾರದ ವಿಶೇಷ ಅನುದಾನದಲ್ಲಿ ಅಭಿವೃದ್ಧಿ ಯೋಜನೆ
- ಅಂಗವಿಕಲತೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಉತ್ತಮ ಪರಿಕರಗಳನ್ನು ನೀಡುವುದು
- ಪೌರಸನ್ಮಾನ ಕಾರ್ಯಕ್ರಮ
- ಇ-ತ್ಯಾಜ್ಯ ಸಂಗ್ರಹಣಾ ಘಟಕ
- ಯಾಂತ್ರೀಕೃತ ಕಸಗುಡಿಸುವ ಯಂತ್ರ ಮತ್ತು ರೋಡ್ ಬ್ರೇಕರ್ ಮಿಷನ್‌ಗಳ ಖರೀದಿ
- ಪಾರಂಪರಿಕ ತ್ಯಾಜ್ಯ ವಿಲೇವಾರಿ ಪಡಿಸುವಿಕೆ
- ಘನತ್ಯಾಜ್ಯ ವಿಲೇವಾರಿ ಮಾಡಲು ನಗರದ ನಾಲ್ಕು ದಿಕ್ಕಿನಲ್ಲಿಯೂ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ನಿವೇಶನ ಖರೀದಿಸುವುದು
- ಮಹಾನಗರ ಪಾಲಿಕೆಯ ಪೌರಕಾರ್ಮಿಕರಿಗೆ ಹಾಜರಾತಿ ಸ್ಥಳಗಳಲ್ಲಿ ವಿಶ್ರಾಂತಿ ಗೃಹ ನಿರ್ಮಾಣ
- ಮಹಾನಗರ ಪಾಲಿಕೆಯ ಸದಸ್ಯರುಗಳ ಜ್ಞಾನಾರ್ಜನೆಗಾಗಿ ಅಧ್ಯಯನ ಪ್ರವಾಸ
- ಮಹಾನಗರ ಪಾಲಿಕೆಗಳ ನೌಕರರ ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಕೂಟ ಆಯೋಜನೆ
- ಮೇಯರ್ ಕಪ್ ಆಯೋಜನೆ
- ಬೀದಿ ಬದಿ ವ್ಯಾಪಾರಸ್ಥರಿಗೆ ಕಲ್ಯಾಣ ನಿಧಿ ಸ್ಥಾಪನೆ
- ವಿಕಲಚೇತನ ಬಡ ವಿದ್ಯಾರ್ಥಿಗಳಿಗೆ ಸೋಲಾರ್ ದೀಪ ವಿತರಣೆ
- ನಗರ ವ್ಯಾಪ್ತಿಯ ಹಳೇ ಮರಗಳನ್ನು ವೈಜ್ಞಾನಿಕ ರೀತಿಯಲ್ಲಿ ತೆರವುಗೊಳಿಸುವುದು
- ಕೈಗಾರಿಕಾ ವಸಾಹಾತು ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ
- ಪ್ರತಿ ಉದ್ಯಾನವನಗಳಲ್ಲಿ ಪ್ರಾಣಿ-ಪಕ್ಷಿಗಳಿಗೆ ಕುಡಿಯುವ ನೀರಿನ ತೊಟ್ಟಿಗಳ ನಿರ್ಮಾಣ
- ಗರಡಿ ಮನೆ ನಿರ್ಮಾಣ ಮತ್ತು ನಿರ್ವಹಣೆ
- ದುಗ್ಗಮ್ಮನ ಬಾವಿಯನ್ನು ಅಭಿವೃದ್ಧಿ ಪಡಿಸುವುದು
- ಸ್ಕೈ ವಾಕ್ (Sky Walk) ನಿರ್ಮಾಣ
- ನಗರ ವ್ಯಾಪ್ತಿಯಲ್ಲಿ ಬರುವಂತಹ ಎಲ್ಲಾ ಮಹಾತ್ಮರ ಪ್ರತಿಮೆಗಳಿಗೆ ಸುಣ್ಣ-ಬಣ್ಣ ಸೇರಿದಂತೆ ವೃತ್ತಗಳ ನವೀಕರಣ
- ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಸ್ವಚ್ಛತಾ ಕಾರ್ಯಕ್ಕೆ ಪರಿಕರಗಳನ್ನು ವಿತರಿಸುವುದು
- ಕಸಾಯಿಖಾನೆ (Slaughter House) ನಿರ್ಮಾಣ
- ರಾಜಕಾಲುವೆಗಳಲ್ಲಿ ಹೂಳೆತ್ತುವ ಕಾಮಗಾರಿ
- ಒಳಚರಂಡಿ ದುರಸ್ಥಿ ಹಾಗೂ ನಿರ್ಮಾಣ
- ಕನ್ನಡ ಅನುಷ್ಠಾನಕ್ಕಾಗಿ ಕಾರ್ಯಕ್ರಮ
- ಸಮುದಾಯ ಭವನ ನಿರ್ಮಾಣ ಹಾಗೂ ನವೀಕರಣ ಕಾಮಗಾರಿ
- ಮಾನಸಿಕ ಅಸ್ವಸ್ಥತೆಯ ಬಗ್ಗೆ ಅರಿವು ಮೂಡಿಸುವುದು
- ಕಚೇರಿಯ ಹಳೇ ಕಡತಗಳನ್ನು ಸಂರಕ್ಷಿಸುವುದು
- ಜೀವ ವೈವಿದ್ಯ ನಿರ್ವಹಣಾ ಸಂರಕ್ಷಣಾ ಚಿಕಿತ್ಸಾ ಕೇಂದ್ರ ಸ್ಥಾಪನೆ
- ತಾರಸಿ ಉದ್ಯಾನವನ
- ಆಯುರ್ವೇದ ಥೀಮ್ ಪಾರ್ಕ್
- ಬೋನ್ಸಾಯ್ ಉದ್ಯಾನವನ. ಇನ್ನು ಈ ಬಾರಿಯ ಬಜೆಟ್‌ನಲ್ಲಿ ಡಿಜಟಲೀಕರಣಕ್ಕೆ ಹೆಚ್ಚು ಒತ್ತು ನೀಡಿರುವುದು ವಿಶೇಷ.

ಸಭೆಯಲ್ಲಿ ಕೋಲಾಹಲ:
ಕಳೆದ ಬಾರಿಯ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದ್ದ 22ಕ್ಕೂ ಹೆಚ್ಚು ಯೋಜನೆಗಳನ್ನು ಕೈಬಿಡಲಾಗಿದೆ ಎಂಬ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ಆರೋಪ ಮಹಾನಗರ ಪಾಲಿಕೆಯಲ್ಲಿ ನಡೆದ ಬಜೆಟ್ ಮಂಡನೆ ಮೇಲಿನ ಚರ್ಚೆ ವೇಳೆ ಕೋಲಾಹಲಕ್ಕೆ ಕಾರಣವಾಯಿತು. ಘೋಷಣೆ ಮಾಡಲಾಗಿದ್ದ 39 ಯೋಜನೆಗಳ ಪೈಕಿ ಇಷ್ಟೊಂದು ಯೋಜನೆಗಳನ್ನು ಕೈಬಿಡಲಾಗಿದೆ ಎಂಬ ಮಾತು ಹೇಳುತ್ತಿದ್ದಂತೆ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ವಾಗ್ಯುದ್ಧವೇ ನಡೆಯಿತು.

ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಬಜೆಟ್ ಮಂಡನೆ ಮಾಡಲಾಯಿತು. ಬಳಿಕ ಮಂಜುನಾಥ್ ಮಾತು ಆರಂಭಿಸುತ್ತಿದ್ದಂತೆಯೇ ಆಡಳಿತ ಪಕ್ಷದ ವಿರುದ್ಧ ಮುಗಿಬಿದ್ದರು. ಮೇಯರ್ ಅವರಿಗೆ ಈ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಕೋರಿದರು. ಈ ವೇಳೆ ಮಧ್ಯಪ್ರವೇಶಿಸಿದ ಮಾಜಿ ಮೇಯರ್ ಆದ ಕಾರ್ಪೊರೇಟರ್ ಎಸ್.ಟಿ. ವೀರೇಶ್ ಅವರು ಸುಖಾಸುಮ್ಮನೆ ಆರೋಪ ಮಾಡುವುದು ಬೇಡ. ಯಾರೋ ಡಿಟಿಪಿ ಮಾಡಿದ್ದನ್ನು ತೆಗೆದುಕೊಂಡು ಬಂದು ಆರೋಪ ಮಾಡಿದರೆ ಹೇಗೆ? ಇದರಲ್ಲಿ ಪಾಲಿಕೆಯ ಅಧಿಕಾರಿಗಳ ಸೀಲು, ಸಹಿ ಇದೆಯಾ? ನಾನು ಸಹ ಇದೇ ರೀತಿಯಲ್ಲಿ ಕಾಗದದಲ್ಲಿ ಮಾಡಿಸಿಕೊಂಡು ಬರುತ್ತೇನೆ. ಅದನ್ನು ನಂಬಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಈ ವೇಳೆ ಬಿಜೆಪಿ ಸದಸ್ಯರು ಸಹ ದನಿಗೂಡಿಸಿದರು. ಮಂಜುನಾಥ್ ಅವರಿಗೆ ಪಾಲಿಕೆ ಸದಸ್ಯರಾದ ಚಮನ್ ಸಾಬ್ ಸೇರಿದಂತೆ ಇತರ ಕಾಂಗ್ರೆಸ್ ಸದಸ್ಯರು ಬೆಂಬಲಿಸಿದರು. ಕಾಮಗಾರಿ ಆಗಿದ್ದರೆ ಆಗಿ ಎಂದು ಹೇಳಿ. ಇಲ್ಲದಿದ್ದರೆ ಇಲ್ಲ ಎಂದು ಹೇಳಿ. ಅದನ್ನು ಬಿಟ್ಟು ಸುಮ್ಮನೆ ಆರೋಪ ಮಾಡಿದರೆ ತಪ್ಪು ಸಂದೇಶ ಹೋಗುತ್ತದೆ ಎಂದು ವೀರೇಶ್ ಹೇಳಿದರು.

ಈ ಮಾತಿನಿಂದ ಮತ್ತಷ್ಟು ಆಕ್ರೋಶಗೊಂಡ ಗಡಿಗುಡಾಳ್ ಮಂಜುನಾಥ್ ಕೆಲಸ ಮಾಡಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಯೋಜನೆಗಳನ್ನು ಜಾರಿ ಮಾಡದೇ ಈ ರೀತಿ ಮಾತನಾಡಿದರೆ ಹೇಗೆ? ಎಲ್ಲವೂ ಪಾರದರ್ಶಕವಾಗಿದ್ದರೆ ಮಾಹಿತಿ ಕೊಡಲು ಯಾಕೆ ಈ ರೀತಿಯ ನಿಮ್ಮ ವರ್ತನೆ. ಮೇಯರ್ ಜಯಮ್ಮ ಅವರು ಈ ಬಗ್ಗೆ ಮಾಹಿತಿ ನೀಡಲಿ. ಅದನ್ನು ಬಿಟ್ಟು ಎಲ್ಲದಕ್ಕೂ ನೀವ್ಯಾಕೆ ಉತ್ತರ ನೀಡುತ್ತೀರಿ ಎಂದು ಛಾಟಿ ಬೀಸಿದರು.

ಕಳೆದ ಬಾರಿಯ ಬಜೆಟ್‌ನಲ್ಲಿನ 22 ಯೋಜನೆಗಳನ್ನು ಕೈ ಬಿಡಲಾಗಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳೇ ನೀಡಿದ್ದಾರೆ. ನಿಮ್ಮ ತಪ್ಪು ಮುಚ್ಚಿಕೊಳ್ಳಲು ಯತ್ನಿಸಬೇಡಿ. ಸರಿಯಾದ ಮಾಹಿತಿ ನೀಡಿ. ಅದನ್ನು ಬಿಟ್ಟು ಸಭೆಯಲ್ಲಿ ಏರು ದನಿಯಲ್ಲಿ ಮಾತನಾಡಿದರೆ ನಮಗೂ ಮಾತನಾಡಲು ಬರುತ್ತದೆ. ಇದೊಂದು ನಿರಾಶದಾಯಕ ಬಜೆಟ್. ಕೇಂದ್ರ, ರಾಜ್ಯ, ಮಹಾನಗರ ಪಾಲಿಕೆಯಲ್ಲಿಯೂ ಬಿಜೆಪಿ ಆಡಳಿತದಲ್ಲಿದೆ. ನಗರಾಭಿವೃದ್ಧಿ ಸಚಿವರೇ ಜಿಲ್ಲಾ ಉಸ್ತುವಾರಿ ಸಚಿವರು. ನಿಮ್ಮ ಕೈಯಲ್ಲಿ ಅನುದಾನ ತರಲು ಆಗಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಈ ವಿಚಾರದ ಬಗ್ಗೆ ಆಡಳಿತ ಪಕ್ಷದವರು ಯಾವುದೇ ಮಾತು ಆಡಲಿಲ್ಲ.

English summary
The Davanagere City Corporation budget Presentation for the year 2022-23, put a lot of emphasis on digitization in this budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X