PM Modi Davanagare Visit : ಮಾ.25ರಂದು ಮತ್ತೆ ರಾಜ್ಯಕ್ಕೆ ಮೋದಿ: ದಾವಣಗೆರೆಯಲ್ಲಿ ಬೃಹತ್ ಬಿಜೆಪಿ ಸಮಾವೇಶ
ರಾಜ್ಯದ ನಾಲ್ಕು ಭಾಗಗಳಿಂದ ‘ವಿಜಯ ಸಂಕಲ್ಪ ಯಾತ್ರೆ’ಯು ಈಗಾಗಲೇ ಸಂಚರಿಸುತ್ತಿದ್ದು, ಮಾರ್ಚ್ 25ಕ್ಕೆ ದಾವಣಗೆರೆಯಲ್ಲಿ ಸಮಾಪ್ತಿಯಾಗಲಿದ್ದುದೆ. ಹೀಗಾಗಿ ದಾವಣಗೆರೆಯಲ್ಲಿ ‘ಮಹಾ ಸಂಗಮ’ ಸಮಾವೇಶ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ.
ದಾವಣಗೆರೆ, ಮಾರ್ಚ್ 13: ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 25ಕ್ಕೆ ದಾವಣಗೆರೆಗೆ ಆಗಮಿಸಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಭರದಿಂದ ತಯಾರಿ ಸಾಗಿದೆ. ಪ್ರಧಾನಿಗಳ ಕಾರ್ಯಕ್ರಮಕ್ಕೆ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆಯಿದೆ. ಜಿ.ಎಂ.ಐ.ಟಿ. ಕಾಲೇಜಿನ ಪಕ್ಕದಲ್ಲಿ ಸುಮಾರು 400 ಎಕರೆ ಜಾಗದಲ್ಲಿ ಸಮಾವೇಶ ನಡೆಯಲಿದ್ದು, ಈಗಾಗಲೇ 30ಕ್ಕೂ ಹೆಚ್ಚು ಜೆಸಿಬಿಯಿಂದ ಸ್ವಚ್ಚತಾ ಕಾರ್ಯ ಆರಂಭಗೊಂಡಿದೆ.
ರಾಜ್ಯದ ನಾಲ್ಕು ಭಾಗಗಳಿಂದ 'ವಿಜಯ ಸಂಕಲ್ಪ ಯಾತ್ರೆ'ಯು ಈಗಾಗಲೇ ಸಂಚರಿಸುತ್ತಿದ್ದು, ಮಾರ್ಚ್ 25ಕ್ಕೆ ದಾವಣಗೆರೆಯಲ್ಲಿ ಸಮಾಪ್ತಿಯಾಗಲಿದ್ದುದೆ. ಹೀಗಾಗಿ ದಾವಣಗೆರೆಯಲ್ಲಿ 'ಮಹಾ ಸಂಗಮ' ಸಮಾವೇಶ ನಡೆಯಲಿದ್ದು, ಸಂಸದ ಜಿ.ಎಂ. ಸಿದ್ದೇಶ್ವರ ನೇತೃತ್ವದಲ್ಲಿ ಸಕಲ ಸಿದ್ಧತೆ ಆರಂಭಗೊಂಡಿಗೆ.

ಪ್ರಧಾನಿ ನರೇಂದ್ರ ಮೋದಿ ಅವರು ದಾವಣಗೆರೆಗೆ ಆಗಮಿಸುತ್ತಿರುವುದರಿಂದ ಸಿದ್ಧತೆಗಳೂ ಜೋರಾಗಿ ನಡೆಯುತ್ತಿವೆ. ಲಕ್ಷಾಂತರ ಜನರನ್ನು ಸೇರಿಸುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವ ಬಿಜೆಪಿ ಮುಖಂಡರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನ ಗಳಿಸಲು ಪ್ರಯತ್ನಿಸತೊಡಗಿದ್ದಾರೆ.
ಮೋದಿ ಆಗಮನ ಬಿಜೆಪಿ ಪಾಳೆಯದಲ್ಲಿ ಈಗಾಗಲೇ ಹುರುಪು ತಂದಿದೆ. ದಾವಣಗೆರೆ ಸದ್ಯಕ್ಕೆ ಬಿಜೆಪಿ ಭದ್ರಕೋಟೆಯಾಗಿದೆ. ಹಾಗಾಗಿ, ಮೋದಿ ಬಂದು ಮತಯಾಚಿಸಿದರೆ ಮತ್ತಷ್ಟು ಹೆಚ್ಚು ಮತಗಳು ಬಿಜೆಪಿಗೆ ಬರುತ್ತವೆ ಎಂಬ ಲೆಕ್ಕಾಚಾರ ಮುಖಂಡರದ್ದಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ 75ನೇ ವರ್ಷದ ಅಮೃತ ಮಹೋತ್ಸವ ಸಿದ್ದರಾಮೋತ್ಸವ ನಿರೀಕ್ಷೆಗೆ ಮೀರಿ ಯಶಸ್ಸು ತಂದು ಕೊಟ್ಟಿತ್ತು. ಈ ಕಾರಣಕ್ಕೆ ಮೋದಿ ಅವರನ್ನು ಕರೆಯಿಸಿ ಹತ್ತು ಲಕ್ಷಕ್ಕೂ ಹೆಚ್ಚು ಜನರು ಸೇರಿಸಿದರೆ ಟಾಂಗ್ ನೀಡಿದಂತಾಗುತ್ತದೆ ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರವಾಗಿದೆ.

ನರೇಂದ್ರ ಮೋದಿ ಅವರು ದಾವಣಗೆರೆಗೆ ಬರುವುದು ಪಕ್ಕಾ ಎಂದು ಬಿಜೆಪಿ ನಾಯಕರು ಸ್ಪಷ್ಟಪಡಿಸಿದ್ದಾರೆ. ದಾವಣಗೆರೆ ಎಲ್ಲಾ ಪಕ್ಷಗಳಿಗೂ ಅದೃಷ್ಟದ ನೆಲ. ಹಾಗಾಗಿ, ಎಲ್ಲಾ ಪಕ್ಷಗಳು ಇಲ್ಲಿ ಸಮಾವೇಶ ನಡೆಸುವುದು ಸಾಮಾನ್ಯ ಎಂಬಂತಾಗಿದೆ. ಮೋದಿ ಅವರು ಇಲ್ಲಿಗೆ ಬಂದರೆ ದಾವಣಗೆರೆ, ಚಿತ್ರದುರ್ಗ, ಹಾವೇರಿ, ಬಳ್ಳಾರಿ, ತುಮಕೂರು ಜಿಲ್ಲೆಗಳಲ್ಲಿ ಹೆಚ್ಚಿನ ಸ್ಥಾನ ಪಡೆಯಲು ಸುಲಭವಾಗಬಹುದು ಎಂಬ ಲೆಕ್ಕಾಚಾರವೂ ಮೋದಿ ಭೇಟಿ ಹಿಂದೆ ಅಡಗಿದೆ ಎನ್ನಲಾಗಿದೆ.
ಸಿದ್ಧತಾ ಕಾರ್ಯಗಳನ್ನು ಆರಂಭಿಸಲಾಗಿರುವ ಜಿಎಂಐಟಿ ಪಕ್ಕದ ಸ್ಥಳಕ್ಕೆ ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಿ.ಮಂಜನಾಯ್ಕ, ಮಾಯಕೊಂಡದ ಚುನಾವಣಾ ಪ್ರಭಾರಿ ಎನ್.ರಾಜಶೇಖರ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಹಾಗೂ ಬಿಜೆಪಿ ಯುವ ಮುಖಂಡ ಶಿವನಗೌಡ ಟಿ.ಪಾಟೀಲ್, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ನಿರ್ದೇಶಕ ಗೌತಮ್ ಜೈನ್, ಸುರೇಶ್ ಗಂಡಗಳೆ, ರಾಜು ನಿಲಗುಂದ, ಮಾದ್ಯಮ ಪ್ರಮುಖ್ ವಿಶ್ವಾಸ, ಟಿಂಕರ್ ಮಂಜಣ್ಣ,ಬಾಲರಾಜ ಶ್ರೇಷ್ಠ, ಶಂಕರಗೌಡ ಬಿರಾದರ್, ಕಿರೀಟ ಸಿ.ಕಲಾಲ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.












Click it and Unblock the Notifications