ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ; ಕ್ಯಾರಿಬ್ಯಾಗ್‌ಗೆ ಹಣ ಪಡೆದು 5 ಸಾವಿರ ದಂಡ ಕಟ್ಟಿದ ಅಂಗಡಿ!

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜೂನ್‌ 5: ಎರಡು ಜೊತೆ ಶೂ ಹಾಗೂ ಬ್ಯಾಗ್ ಖರೀದಿಸಿದಾಗ ಅನುಮತಿ ಇಲ್ಲದೇ ಕ್ಯಾರಿಬ್ಯಾಗ್‍ನ ಶುಲ್ಕ ರೂ.7 ಅನ್ನು ಬಿಲ್ ಜೊತೆಗೆ ಸೇರಿಸಿ ಪಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನೊಂದ ಗ್ರಾಹಕರಿಗೆ 5 ಸಾವಿರ ರೂಪಾಯಿ ಹಾಗೂ 3 ಸಾವಿರ ರೂಪಾಯಿ ದಾವೆಯ ಖರ್ಚು ನೀಡುವಂತೆ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಆದಿತ್ಯ ಬಿರ್ಲಾ ಫ್ಯಾಷನ್ ಆ್ಯಂಡ್ ರಿಟೇಲ್ ಲಿಮಿಟೆಡ್ ಕಂಪನಿ 'ಪ್ಯಾಂಟಲೂನ್ಸ್' ಮಳಿಗೆಗೆ ನಿರ್ದೇಶನ ನೀಡಿದೆ.

ಹರಿಹರದ ವಕೀಲರಾದ ನೀತು ಎಚ್. ಬಿ. 2020ರ ಫೆಬ್ರುವರಿ 1 ರಂದು ಶಾಮನೂರು ರಸ್ತೆಯಲ್ಲಿರುವ ಆದಿತ್ಯ ಬಿರ್ಲಾ ಫ್ಯಾಷನ್ ಆಂಡ್ ರಿಟೇಲ್ ಲಿಮಿಟೆಡ್ ಕಂಪನಿ 'ಪ್ಯಾಂಟಲೂನ್ಸ್' ಮಳಿಗೆಯಲ್ಲಿ ಎರಡು ಶೂ ಹಾಗೂ ಬ್ಯಾಗ್ ಖರೀದಿಸಿದ್ದರು.

ಉಡುಪಿ: ಅದಾನಿ ಗ್ರೂಪ್‌ಗೆ 52 ಕೋಟಿ ದಂಡ ಉಡುಪಿ: ಅದಾನಿ ಗ್ರೂಪ್‌ಗೆ 52 ಕೋಟಿ ದಂಡ

ರೂ.2,004 ಬಿಲ್‍ನಲ್ಲಿ ಕ್ಯಾರಿಬ್ಯಾಗ್‍ಗಾಗಿ ರೂ.7 ಅನ್ನು ಸೇರಿಸಲಾಗಿತ್ತು. ಕ್ಯಾರಿಬ್ಯಾಗ್ ಮೇಲೆ ಕಂಪನಿಯ ಹೆಸರು ನಮೂದಿಸಿರುವುದರಿಂದ ಬ್ಯಾಗ್‍ನ ಶುಲ್ಕವನ್ನು ಪಡೆಯದಂತೆ ಮಾಡಿದ್ದ ಮನವಿಗೆ ಮಳಿಗೆಯ ಅಧಿಕಾರಿಗಳು ಕಿವಿಗೊಡಲಿಲ್ಲ. ಬದಲಾಗಿ ಉಳಿದ ಗ್ರಾಹಕರ ಎದುರಿನಲ್ಲೇ ಅಪಹಾಸ್ಯ ಮಾಡಿದ್ದರು.

Pantaloons Fined Rs 5000 for Charging Rs 7 for Carry Bags

ಈ ಹಿನ್ನೆಲೆಯಲ್ಲಿ ನೀತು 2020ರ ಮೇ 20ರಂದು ಜಿಲ್ಲಾ ಗ್ರಾಹಕರ ಆಯೋಗದಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷೆ ಎಚ್. ಎನ್. ಮೀನಾ ಹಾಗೂ ಸದಸ್ಯ ತ್ಯಾಗರಾಜನ್ ಸಿ. ಎಸ್. ಅವರು ಕಂಪನಿಯು ಸೇವಾ ಲೋಪವೆಸಗಿದೆ ಎಂದು ಅಭಿಪ್ರಾಯಪಟ್ಟಿದೆ.

ಜೂನ್ 30ರೊಳಗೆ ಪ್ಯಾನ್-ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದರೆ ದುಪ್ಪಟ್ಟು ದಂಡಜೂನ್ 30ರೊಳಗೆ ಪ್ಯಾನ್-ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದರೆ ದುಪ್ಪಟ್ಟು ದಂಡ

ಪ್ರತಿವಾದಿಗಳಾದ ಮುಂಬೈನ ಆದಿತ್ಯ ಬಿರ್ಲಾ ಫ್ಯಾಷನ್ ಅಂಡ್ ರಿಟೇಲ್ ಲಿಮಿಟೆಡ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕಂಪನಿಯ ದಾವಣಗೆರೆಯ ಮಳಿಗೆಯ ಪ್ರಧಾನ ವ್ಯವಸ್ಥಾಪಕ ಅವರು ಕ್ಯಾರಿಬ್ಯಾಗ್‍ಗೆ ವಿಧಿಸಿದ್ದ ರೂ.7 ಅನ್ನು ವಾಪಸ್ ನೀಡಬೇಕು. ಜೊತೆಗೆ ದೈಹಿಕ ಹಾಗೂ ಮಾನಸಿಕ ತೊಂದರೆ ನೀಡಿರುವುದಕ್ಕೆ ರೂ.5 ಸಾವಿರ ಪರಿಹಾರ ಮತ್ತು ದಾವೆ ವೆಚ್ಚವಾಗಿ ರೂ.3 ಸಾವಿರವನ್ನು 30 ದಿನಗಳ ಒಳಗೆ ನೀಡಬೇಕು. ಸಕಾಲಕ್ಕೆ ಪಾವತಿಸದಿದ್ದರೆ ಶೇ.6ರಷ್ಟು ಬಡ್ಡಿ ಸಹಿತ ನೀಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳು ಮಳಿಗೆಗೆ ಕಾಲ ಕಾಲಕ್ಕೆ ತೆರಳಿ ಕ್ಯಾರಿ ಬ್ಯಾಗ್‍ಗೆ ಶುಲ್ಕ ಪಡೆಯುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಕ್ಯಾರಿ ಬ್ಯಾಗ್‍ಗೆ ಶುಲ್ಕ ಪಡೆಯುವುದಿಲ್ಲ ಎಂಬ ಫಲಕ ಹಾಕಬೇಕು ಎಂದು ಅದೇಶದಲ್ಲಿ ನಿರ್ದೇಶನ ನೀಡಲಾಗಿದೆ. ಗ್ರಾಹಕರ ಪರವಾಗಿ ವಕೀಲ ವಿಜಯೇಂದ್ರ ಎಂ. ಎನ್. ವಾದ ಮಂಡಿಸಿದ್ದರು.

English summary
District Consumer commission has imposed 5000 Rs fine to pantaloons for charged 7 rupees for carry-bag without customer permission in Davanagere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X