ತುಂಗಾ ನಾಲೆ ಬಳಿ ರೇಣುಕಾಚಾರ್ಯ ಸಹೋದರನ ಪುತ್ರ ಶವವಾಗಿ ಪತ್ತೆ
ದಾವಣಗೆರೆ, ನವೆಂಬರ್, 03: ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್‌ನ ಕಾರು ಹೊನ್ನಾಳಿ -ನ್ಯಾಮತಿ ನಡುವೆ ಬರುವ ತುಂಗಾ ಮೇಲ್ದಂಡೆ ನಾಲೆ ಬಳಿ ಪತ್ತೆ ಆಗಿದೆ. ಕಾರಿನ ಜೊತೆಗೆ ಚಂದ್ರಶೇಖರ್ ಶವವೂ ಕೂಡ ಪತ್ತೆ ಆಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಸ್ಥಳಕ್ಕೆ ಶಾಸಕ ಎಂ. ಪಿ. ರೇಣುಕಾಚಾರ್ಯ ಆಗಮಿಸಿದ್ದು, ಚಂದ್ರಶೇಖರ್‌ನನ್ನು ನೆನೆದು ಗೋಳಾಡುತ್ತಿದ್ದಾರೆ.
ಸೇತುವೆಯ ತಡೆಗೋಡೆ ಬಳಿ ಶವ ಪತ್ತೆಯಾಗಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನೂರಾರು ಜನರು ಆಗಮಿಸಿದ್ದಾರೆ. ಪೊಲೀಸರು ಸಹ ಸ್ಥಳಕ್ಕೆ ಆಗಮಿಸಿ ತನಿಖೆ ಚುರುಕುಗೊಳಿಸಿದ್ದಾರೆ. ಕಳೆದ ಭಾನುವಾರ ರಾತ್ರಿ ನಿಗೂಢ ರೀತಿಯಲ್ಲಿ ಕಣ್ಮರೆ ಆಗಿದ್ದ ಚಂದ್ರಶೇಖರ್ ಇದೀಗ ಶವವಾಗಿ ಪತ್ತೆ ಆಗಿದ್ದಾರೆ. ಈಗಾಗಲೇ ಪೊಲೀಸರು ಚಂದ್ರಶೇಖರ್ ಸ್ನೇಹಿತ ಶಿವಮೊಗ್ಗ ಮೂಲದ ಕಿರಣ್ ಎಂಬಾತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಕಡದಕಟ್ಟೆ ಬಳಿ ಜನರು ಜಮಾಯಿಸಿದ್ದು, ರೇಣುಕಾಚಾರ್ಯ ಆಕ್ರಂದನ ಮುಗಿಲುಮುಟ್ಟಿದೆ.
{photo-feature}












Click it and Unblock the Notifications