ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫ್ಲೈ ಓವರ್ ಗೆ ಸಾವರ್ಕರ್ ಹೆಸರು ವಿರೋಧಿಸಿದ್ದಕ್ಕೆ ಇಂದಿರಾ ಗಾಂಧಿ ಭಾವಚಿತ್ರಕ್ಕೆ ಮಸಿ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜೂನ್ 2: ದಾವಣಗೆರೆ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹಿಂಭಾಗ ಮತ್ತು ಸಿಜಿ ಆಸ್ಪತ್ರೆಯ ಆವರಣದಲ್ಲಿರುವ ಇಂದಿರಾ ಕ್ಯಾಂಟಿನ್ ಹೊರ ಭಾಗದಲ್ಲಿರುವ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಭಾವಚಿತ್ರಕ್ಕೆ ರಾತ್ರಿ ಎಂಜಿನ್‌ ಆಯಿಲ್ ಬಳಿದು ವಿರೂಪಗೊಳಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಅಭಿಮಾನಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.

ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ""ಆಯಿಲ್ ಬಳಿದಿರುವ ಕುರಿತು ಕೆಟಿಜೆ ನಗರ ಮತ್ತು ಬಡಾವಣೆ ಪೊಲೀಸ್ ಠಾಣೆಯಲ್ಲಿ ನವೀನ್‌ ಕುಮಾರ್‌ ದೂರು ದಾಖಲಿಸಿದ್ದರು. ಭಾರತ್‌ ಕಾಲೊನಿಯ ನಾಲ್ಕನೇ ಕ್ರಾಸ್‌ ನಿವಾಸಿ, ಹೋಟೆಲ್‌ ಕಾರ್ಮಿಕ ಉಮೇಶ್‌ ಕತ್ತಿ (36) ಬಂಧಿತ ಆರೋಪಿಯಾಗಿದ್ದು, ಫ್ಲೈ ಓವರ್ ಗೆ ಸಾವರ್ಕರ್ ಇಡುವುದಕ್ಕೆ ವಿರೋಧಿಸಿದ್ದರಿಂದ ಆತ ಈ ಕೆಲಸ ಮಾಡಿದ್ದಾನೆ'' ಎಂದರು.

ಇಂದಿರಾ ಗಾಂಧಿ ಭಾವಚಿತ್ರಕ್ಕೆ ಕಪ್ಪು ಮಸಿ

ಇಂದಿರಾ ಗಾಂಧಿ ಭಾವಚಿತ್ರಕ್ಕೆ ಕಪ್ಪು ಮಸಿ

ಈತ ಇಲ್ಲಿನ ಕೆ.ಎಸ್.ಆರ್.ಟಿಸಿ. ಬಸ್ ನಿಲ್ದಾಣದ ಹಿಂಭಾಗ ಮತ್ತು ಸಿಜಿ ಆಸ್ಪತ್ರೆಯ ಆವರಣದಲ್ಲಿರುವ ಇಂದಿರಾ ಕ್ಯಾಂಟಿನ್ ಹೊರ ಭಾಗದಲ್ಲಿ ಹಾಕಿರುವ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಭಾವಚಿತ್ರಕ್ಕೆ ಕಳೆದ ಮೇ 30 ರಂದು ಮಧ್ಯರಾತ್ರಿ ಕಪ್ಪು ಬಣ್ಣದ ವೇಸ್ಟ್ ಆಯಿಲ್ ತಂದು ಭಾವಚಿತ್ರವನ್ನು ವಿರೂಪಗೊಳಿಸಿದ್ದ.

ದಾವಣಗೆರೆಯಲ್ಲಿ ಇಂದಿರಾಗಾಂಧಿ ಭಾವಚಿತ್ರಕ್ಕೆ ಮಸಿ; ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯದಾವಣಗೆರೆಯಲ್ಲಿ ಇಂದಿರಾಗಾಂಧಿ ಭಾವಚಿತ್ರಕ್ಕೆ ಮಸಿ; ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯ

ಸಿಸಿಟಿವಿ ದೃಶ್ಯಗಳಿಂದ ಕೃತ್ಯ ಎಸಗಿದ ಆರೋಪಿ ಸೆರೆ

ಸಿಸಿಟಿವಿ ದೃಶ್ಯಗಳಿಂದ ಕೃತ್ಯ ಎಸಗಿದ ಆರೋಪಿ ಸೆರೆ

ಈ ಸಂಬಂಧ ಮೇ 31 ರಂದು ಆರೋಪಿಯ ಮೇಲೆ ದೂರು ದಾಖಲಾಗಿತ್ತು. ಈ ಪ್ರಕರಣ ಕೆಟಿಜೆ ನಗರ ಮತ್ತು ಬಡಾವಣೆ ಪೊಲೀಸ್ ಠಾಣೆಯ ವ್ಯಾಪ್ತಿಗೆ ಸಂಬಂಧಿಸಿದ್ದಾಗಿದೆ. ಎಎಸ್ಪಿ ರಾಜೀವ್ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ತಂಡ ತನಿಖೆ ನಡೆಸಿದ್ದು, ಕ್ಯಾಂಟಿನ್ ನಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಗಳಿಂದ ಕೃತ್ಯ ಎಸಗಿದ ಆರೋಪಿ ಸೆರೆ ಸಿಗಲು ಸಹಕಾರಿ ಆಯಿತು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಾವರ್ಕರ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಗಳಿಂದ ಉದ್ವಿಗ್ನ

ಸಾವರ್ಕರ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಗಳಿಂದ ಉದ್ವಿಗ್ನ

ಆರೋಪಿ ಉಮೇಶ್ ಕತ್ತಿ ತನಿಖೆ ವೇಳೆ ತಾನು ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಕಟ್ಟಾ ಅಭಿಮಾನಿಯಾಗಿದ್ದು, ಕೆಲ ದಿನಗಳಿಂದ ಸಾವರ್ಕರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಹಿಂದೂ ವಿರೋಧಿಗಳಿಂದ ಮಾಡಲಾಗುತ್ತಿದ್ದ ಅವಹೇಳನಕಾರಿ ಪೋಸ್ಟ್ ಗಳಿಂದ ಉದ್ವಿಗ್ನಗೊಂಡು ಈ ಕೃತ್ಯ ಎಸಗಿರುವುದಾಗಿ ಬಾಯ್ಬಿಟ್ಟಿದ್ದಾನೆ.

ದಾವಣಗೆರೆಗೆ ಶುಭ ಸುದ್ದಿ: ಶತಕ ದಾಟಿದ ಕೊರೊನಾ ಗುಣಮುಖರ ಸಂಖ್ಯೆದಾವಣಗೆರೆಗೆ ಶುಭ ಸುದ್ದಿ: ಶತಕ ದಾಟಿದ ಕೊರೊನಾ ಗುಣಮುಖರ ಸಂಖ್ಯೆ

ಹರಿಹರ, ದಾವಣಗೆರೆಯ ಠಾಣೆಗಳಲ್ಲಿ ಹಲವು ಕೇಸ್ ಗಳಿವೆ

ಹರಿಹರ, ದಾವಣಗೆರೆಯ ಠಾಣೆಗಳಲ್ಲಿ ಹಲವು ಕೇಸ್ ಗಳಿವೆ

ಈತನಿಗೆ ಯಾರ ಕುಮ್ಮಕ್ಕು ಇಲ್ಲ ಮತ್ತು ಯಾವ ಸಂಘಟನೆಯ ಲಿಂಕ್ ಕೂಡ ಇಲ್ಲ. ಈ ಬಗ್ಗೆ ಮತ್ತಷ್ಟು ಹೆಚ್ಚಿನ‌ ತನಿಖೆ ನಡೆಸಲಾಗುತ್ತಿದೆ. ಜೊತೆಗೆ ಆರೋಪಿಯ ಮೇಲೆ ಈಗಾಗಲೇ ಶಾಂತಿ ಭಂಗ ಮಾಡಿರುವುದು ಸೇರಿದಂತೆ ಹಲವಾರು ಕೇಸುಗಳು ಹರಿಹರ ನಗರ, ದಾವಣಗೆರೆ ಆರ್ಎಂಸಿ ಮತ್ತಿ ಬಸವನಗರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದೆ ಎಂದು ವಿವರಣೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಎಎಸ್ ಪಿ ರಾಜೀವ್, ಡಿವೈಎಸ್ ಪಿ ನಾಗೇಶ್ ಐತಾಳ್, ಡಿಸಿಆರ್ ಬಿ ಡಿವೈಎಸ್ ಪಿ ಬಸವರಾಜ್ ಉಪಸ್ಥಿತರಿದ್ದರು.

English summary
Former PM Indira Gandhi's portrait was distorted with engine oil. A freedom fighter, Veer Savarkar fan, has been arrested in connection with the case, Davanagere District SP Hanumantaraya said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X