ದಾವಣಗೆರೆ : ಹೊನ್ನಾಳಿಯಲ್ಲಿ ಆನೆ ಪ್ರತ್ಯಕ್ಷ, ಒಬ್ಬರಿಗೆ ಗಾಯ
ದಾವಣಗೆರೆ, ಡಿಸೆಂಬರ್. 10 : ಹೊನ್ನಾಳಿ ತಾಲೂಕಿನ ಚೀಲೂರು ಬಳಿ ಕಾಡಾನೆಗಳು ಪ್ರತ್ಯಕ್ಷವಾಗಿವೆ. ಇಂದು ಬೆಳಗ್ಗೆ ಆನೆಗಳ ದಾಳಿಯಿಂದ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೆಂಗಟ್ಟೆ ಗ್ರಾಮದ ಈಶ್ವರ ನಾಯ್ಕ್ ಅವರು ಆನೆ ದಾಳಿಯಿಂದ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹರಮಘಟ್ಟ ಕಡೆಗೆ ಆನೆಗಳು ಬರುತ್ತಿವೆ ಎಂಬ ಮಾಹಿತಿ ಲಭ್ಯವಾಗಿದ್ದು, ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿಗಳು ಸೂಕ್ತ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ.
ಈ ವಾರದಲ್ಲಿ ಇದು ಎರಡನೇ ಆನೆ ದಾಳಿಯ ಪ್ರಕರಣವಾಗಿದೆ. ಡಿ.5ರಂದು ಚಿತ್ರದುರ್ಗದ ಚಳ್ಳಕೆರೆಯ ತಿಮ್ಮಪ್ಪಯ್ಯನಹಳ್ಳಿ ಬಳಿಯ ಹೊಲದಲ್ಲಿ ಆನೆಗಳು ಪ್ರತ್ಯಕ್ಷವಾಗಿದ್ದವು, ಬೆಳೆಗಳನ್ನು ನಾಶ ಮಾಡಿದ್ದವು.












Click it and Unblock the Notifications