Lok Sabha Election: ದಾವಣಗೆರೆಯಲ್ಲಿ ಹಳೆಯ ರಾಜಕೀಯ ಕುಟುಂಬಗಳ ಮಹಿಳಾ ಮಣಿಗಳ ಸ್ಪರ್ಧೆ: ಕುತೂಹಲ ಹೆಚ್ಚಿಸಿದೆ ಸ್ಪರ್ಧೆ
ಕರ್ನಾಟಕ ಲೋಕಸಭಾ ಚುನಾಣೆಯಲ್ಲಿ ಹಲವು ಕ್ಷೇತ್ರಗಳು ಮತದಾರರ ಚಿತ್ತ ಕದ್ದಿವೆ. ಅದರಲ್ಲಿ ದಾವರಣಗೆರೆ ಲೋಕಸಭಾ ಕ್ಷೇತ್ರ ಸಹ ಒಂದು. ಈ ಕ್ಷೇತ್ರದಲ್ಲಿ ಎರಡು ಹಳೆಯ ರಾಜಕೀಯ ಕುಟುಂಬಗಳ ಹೊಸ ಮುಖಗಳ ನಡುವೆ ಸ್ಪರ್ಧೆ ನಡೆಯಲಿದೆ. ಹೀಗಾಗಿ ಬಹಳ ಕುತೂಹಲ ಮೂಡಿಸಿದೆ. ಈ ಕ್ಷೇತ್ರದಲ್ಲಿ ಸತತ ಆರು ಬಾರಿ ಡಾ.ಜಿಎಂ ಸಿದ್ಧೇಶ್ವರ್ ಸಂಸದರಾಗಿ ಆಯ್ಕೆ ಆಗಿದ್ದಾರೆ. 1999ರಿಂದ ಇವರು ಸತತ ಡಬಲ್ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಮಣೆ ಹಾಕಿದರೆ, ಬಿಜೆಪಿ ಹಾಲಿ ಸಂಸದ ಡಾ.ಜಿಎಂ ಸಿದ್ಧೇಶ್ವರ್ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್ ಅವರಿಗೆ ಅವಕಾಶ ನೀಡಿದೆ. ದಾವಣಗರೆಯಲ್ಲಿ ಮೇ 7ರಂದು ಚುನಾವಣೆಗಳು ನಡೆಯಲಿದ್ದು, ಪ್ರಚಾರದ ಭರಾಟೆ ಜೋರಾಗಿದೆ. ಉಭಯ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ.

ಅಂದು ಕರ್ನಾಟಕದ ಕೈಗಾರಿಕಾ ಹಬ್ ಮತ್ತು ಮ್ಯಾಂಚೆಸ್ಟರ್ ಎಂದು ಕರೆಯಲಾಗುತ್ತಿದ್ದ ಕ್ಷೇತ್ರದಲ್ಲಿ ಆಂಜನೇಯ ಕಾಟನ್ ಮಿಲ್ ಸೇರಿದಂತೆ ಜಿಲ್ಲೆಯ ಬಹುತೇಕ ಕೈಗಾರಿಕೆಗಳು ಇಲ್ಲಿನ ಮುಚ್ಚಿರುವುದರಿಂದ ಉದ್ಯೋಗ ಅರಸಿ ಇಲ್ಲಿನ ಜನರು ಬೇರೆ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ.
ದಾವಣಗೆರೆಗೆ ಏನು ಬೇಕು?
ಮತದಾರ ತಮ್ಮ ಸಂಸದರಿಂದ ವಿಮಾನ ನಿಲ್ದಾಣ, ಸಾಫ್ಟ್‌ವೇರ್ ಪಾರ್ಕ್, ವಿಶೇಷ ಆರ್ಥಿಕ ವಲಯಗಳನ್ನು ರಚಿಸುವುದು, ಆರೋಗ್ಯ ಸೌಲಭ್ಯಗಳನ್ನು ಸುಧಾರಿಸುವುದು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕಾದ ಅನಿವಾರ್ಯತೆ ಇದೆ.
ಯಾವ ಪಂಗಡ ಮತ ಎಷ್ಟಿದೆ?
ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಮಾಯಕೊಂಡ, ಚನ್ನಗಿರಿ, ಜಗಳೂರು, ಹರಿಹರ, ಹರಪನಹಳ್ಳಿ, ಮತ್ತು ಹೊನ್ನಾಳಿ ವಿಧಾನಸಭಾ ಕ್ಷೇತ್ರಗಳನ್ನು ಈ ಲೋಕಸಭಾ ಕ್ಷೇತ್ರವು ಹೊಂದಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಹರಿಹರ ಹೊರತುಪಡಿಸಿ ಉಳಿದ ಎಲ್ಲ ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. ಈ ಅಂಶಗಳೇ ಕಾಂಗ್ರೆಸ್‌ಗೆ ಬಲ ತುಂಬಿವೆ. ಈ ಕ್ಷೇತ್ರದಲ್ಲಿ ವೀರಶೈವ-ಲಿಂಗಾಯತರು ಮತ್ತು ಕುರುಬರು ಸಂಖ್ಯೆ ಸಮನಾಗಿದೆ. ವಾಲ್ಮೀಕಿ ನಾಯಕರು, ಮುಸ್ಲಿಮರು, ದಲಿತರು, ಉಪ್ಪಾರರು, ದೇವಾಂಗಗಳು ಮತಗಳು ಸಹ ಈ ಕ್ಷೇತ್ರದಲ್ಲಿವೆ.

ಬಿಜೆಪಿ ಅಭ್ಯರ್ಥಿ ಗಾಯತ್ರಿ ಅವರಿಗೆ ತಮ್ಮ ಪತಿ ಮಾಡಿರುವ ಕೆಸಲ ಹಾಗೂ ಮೋದಿ ಕೆಲಸದಿಂದಲೇ ಚುನಾವಣೆ ಗೆಲ್ಲುವ ಉತ್ಸಾಹವಿದೆ. 2014ರಲ್ಲಿ ಬಿಜೆಪಿ ಅಭ್ಯರ್ಥಿ 17602 ಮತಗಳ ಅಂತರದಿಂದ ಎಸ್‌ಎಸ್ ಮಲ್ಲಿಕಾರ್ಜುನ್ ಅವರನ್ನು ಮಣಿಸಿದ್ದರು. 2019ರಲ್ಲಿ ಮೋದಿ ಅಲೆ ಜೋರಾಗಿತ್ತು. ಆಗ ಸಿದ್ಧೇಶ್ವರ್ ಅವರ ಗೆಲುವಿನ ಅಂತರ ಸಹ ಹೆಚ್ಚಾಯಿತು.
ಬಂಡಾಯದ ಬಿಸಿ
ಎರಡೂ ಪಕ್ಷಗಳಿಗೂ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ಪಾಳಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗ ಜಿ.ಬಿ.ವಿನಯ್ ಕುಮಾರ್ ಅವರು ಟಿಕೆಟ್‌ಗಾಗಿ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಸ್ವಾಮಿಜಿ ಹಾಗೂ ಸಚಿವರ ಮಧ್ಯಸ್ಥಿಕೆಯಿಂದ ಇವರು ಕೊಂಚ ತಣ್ಣಗಾಗಿದ್ದರು. ಆದರೆ ಇವರು ತಮ್ಮ ನಡೆಯನ್ನು ಇನ್ನು ಬಹಿರಂಗ ಪಡಿಸಿಲ್ಲ.
ಬಿಜೆಪಿ ಪಾಳಯದಲ್ಲಿ ಹಾಲಿ ಸಂಸದ ಸಿದ್ದೇಶ್ವರ ಕುಟುಂಬದವರನ್ನು ಕಣಕ್ಕಿಳಿಸಿದ್ದು ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಆದರೆ, ಪಕ್ಷವು ಸಂಸದ ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಅವರನ್ನು ಕಣಕ್ಕಿಳಿಸಿದೆ. ಇದು ಮಾಜಿ ಸಚಿವ ಎಸ್‌ಎ ರವೀಂದ್ರನಾಥ್ ಮತ್ತು ಎಂಪಿ ರೇಣುಕಾಚಾರ್ಯ ಬಂಡಾಯ ಏಳಲು ಕಾರಣವಾಯಿತು. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಈ ಬಂಡಾಯವನ್ನು ಶಮನ ಮಾಡುವಲ್ಲಿ ಶ್ರಮಿಸಿದರು.
ಟಿಕೆಟ್‌ಗಾಗಿ ಫೈಟ್ ನಡೆದು ಈಗ ಉಭಯ ಪಕ್ಷಗಳ ಅಭ್ಯರ್ಥಿಗಳು ತಮ್ಮ ತಮ್ಮ ಕುಟುಂಬಸ್ಥರಿಗೆ ಟಿಕೆಟ್ ಪಡೆಯುವಲ್ಲಿ ಸೋಲರಾಗಿದ್ದಾರೆ. ಮತದಾರ ಯಾರ ಕೈ ಹಿಡಿಯುತ್ತಾನೆ ಕಾದು ನೋಡಬೇಕಿದೆ.












Click it and Unblock the Notifications