Get Updates
Get notified of breaking news, exclusive insights, and must-see stories!

ಮತದಾರರ ಸ್ವಾಗತಕ್ಕೆ ಸಿದ್ಧವಾದ ಲಂಬಾಣಿ, ಯಾದವ ಸಂಪ್ರದಾಯದ ಸಾಂಪ್ರದಾಯಿಕ ಮತಗಟ್ಟೆಗಳು

ದಾವಣಗೆರೆ, ಮೇ. 07: ದೇಶಾದ್ಯಂತ 18 ನೇ ಲೋಕಸಭಾ ಚುನಾವಣೆ ನಡೆಯುತ್ತಿದ್ದು ಪ್ರಜಾಪ್ರಭುತ್ವದ ಮತದಾನ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ದಾವಣಗೆರೆ ಜಿಲ್ಲೆಯಾದ್ಯಂತ 63 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಿ ಮತದಾರರನ್ನು ಆಕರ್ಷಿಸಲಾಗುತ್ತಿದೆ.

ವಿಶೇಷ ಮತಗಟ್ಟೆಗಳಲ್ಲಿ ಮಹಿಳಾ ಸಿಬ್ಬಂದಿಯಿಂದಲೇ ನಿರ್ವಹಿಸಲ್ಪಡುವ ಸಖಿ ಮತಗಟ್ಟೆ ಕೂಡ ಇದೆ. ಜಿಲ್ಲೆಯಲ್ಲಿ 35 ಸಖಿ ಮತಗಟ್ಟೆಗಳು, ಧ್ಯೇಯ ಆಧಾರಿತ ಮತಗಟ್ಟೆಗಳಲ್ಲಿ ಅಡಿಕೆ, ಕೃಷಿ, ವೀಳ್ಲೆದೆಲೆ, ಸಂಚಾರ ನಿಯಂತ್ರಣ, ಜಲಸಂರಕ್ಷಣೆ, ಸ್ಕೌಟ್ ಅಂಡ್ ಗೈಡ್ಸ್, ಅರಣ್ಯ, ಅಂಗನವಾಡಿ, ಸಾಂಪ್ರದಾಯಿಕ ಮತಗಟ್ಟೆಗಳಲ್ಲಿ ಪರಿಸರ ಸ್ನೇಹಿ, ಲಂಬಾಣಿ ಸಂಸ್ಕೃತಿ, ಯಾದವ ಸಂಪ್ರದಾಯ, ಹಕ್ಕಿಪಿಕ್ಕಿ ಸಂಪ್ರದಾಯ ಸೇರಿದಂತೆ ಜನಜೀವನದ ಬಗ್ಗೆ ಗಮನ ಸೆಳೆಯುವ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಯುವಕರಿಂದ ನಿರ್ವಹಿಸಲ್ಪಡುವ ಯುವ ಮತಗಟ್ಟೆಗಳು, ವಿಶೇಷಚೇತನರಿಂದ ನಿರ್ವಹಿಸಲ್ಪಡುವ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

Lok Sabha Election 2024 Traditional polling booths to welcome voters

ಸಾಂಪ್ರದಾಯಿಕ ಮತಗಟ್ಟೆಗಳು

ದಾವಣಗೆರೆ ದಕ್ಷಿಣ ಕ್ಷೇತ್ರದ ಮತಗಟ್ಟೆ 169 ಜಾಲಿನಗರದ ಜನತಾ ವಿದ್ಯಾಲಯದಲ್ಲಿ ಪರಿಸರ ಸ್ನೇಹಿ ಮತಗಟ್ಟೆಗೆ ಒತ್ತು ನೀಡಲಾಗಿದೆ. ಇಲ್ಲಿ ಬಿಸಿಲಿಗೆ ತಂಪಾಗಿರಲು ಮಣ್ಣಿನಿಂದ ಮಾಡಿದ ಮನೆ, ಛಾವಣಿ ಮೇಲೆ ತೆಂಗಿನ ಗರಿ, ಮಣ್ಣಿನಿಂದ ಮಡಿಕೆ ತಯಾರಿಸುವ ಟಿಗರಿ, ಉಪಯೋಗಿಸುವ ಮಡಿಕೆಗಳ ಪ್ರದರ್ಶನ, ಬಾವಿಯ ಸಂರಕ್ಷಣೆ, ಪಕ್ಷಿಗಳಿಗೆ ನೀರುಣಿಸುವುದು, ಪ್ಲಾಸ್ಟಿಕ್ ಬದಲಾಗಿ ಬಿದಿರಿನಿಂದ ತಯಾರಿಸಿದ ಬೀಸಣಿಕೆ, ಬುಟ್ಟಿಗಳ ಉಪಯೋಗ, ಪ್ಲಾಸ್ಟಿಕ್ ಬ್ಯಾಗ್ ಬದಲಾಗಿ ಬಟ್ಟೆ ಬ್ಯಾಗ್‌ಗಳ ಉಪಯೋಗ ಮಾಡುವ ಮೂಲಕ ಪರಿಸರ ಸಂರಕ್ಷಣೆ ವಿಷಯಾಧಾರಿತ ಮತಗಟ್ಟೆಯಾಗಿದೆ. ಇದನ್ನು ಚಿತ್ರಕಲಾ ಪರಿಷತ್ ಕಲಾವಿದರು ನಿರ್ಮಾಣ ಮಾಡಿದ್ದಾರೆ.

ಗಮನ ಸೆಳೆಯುತ್ತಿವೆ ಸಖಿ ಮತಗಟ್ಟೆಗಳು

ದಾವಣಗೆರೆ ಉತ್ತರದ ಎಂ.ಸಿ.ಸಿ. ಬಿ.ಬ್ಲಾಕ್‌ನಲ್ಲಿನ ಮತಗಟ್ಟೆ 208 ರಲ್ಲಿ ಸಖಿ ಮತಗಟ್ಟೆಯನ್ನು ಸ್ಥಾಪಿಸಿದ್ದು ಇಲ್ಲಿ ಪಿಆರ್‍ಓ, ಎಪಿಆರ್‍ಓ, ಮತಗಟ್ಟೆ ಸಿಬ್ಬಂದಿ ಮಹಿಳೆಯರೇ ಆಗಿರುತ್ತಾರೆ. ಇಲ್ಲಿ 656 ಪುರುಷ, 671 ಮಹಿಳಾ ಮತದಾರರು ಸೇರಿ 1327 ಮತದಾರರಿದ್ದಾರೆ. ದಾವಣಗೆರೆ ಉತ್ತರದ ಬೇತೂರು ಗ್ರಾಮ ಪಂಚಾಯತ್‍ನಲ್ಲಿನ 23 ರ ಸಖಿ ಮತಗಟ್ಟೆಯಲ್ಲಿ 564 ಪುರುಷ, 593 ಮಹಿಳಾ ಮತದಾರರು ಸೇರಿ 1157 ಮತದಾರರಿದ್ದಾರೆ.

Lok Sabha Election 2024 Traditional polling booths to welcome voters

ವಿಶೇಷ ಮತಗಟ್ಟೆಗಳ ವಿವರ

ಜಗಳೂರು ತಾಲೂಕಿನ ಮುಸ್ಟೂರು 238 ನೇ ಮತಗಟ್ಟೆಯಲ್ಲಿ ಧ್ಯೇಯ ಮಾದರಿ ಜಲಾನಯನ ಪ್ರಾತ್ಯಕ್ಷಿತೆ, ಮಳೆ ನೀರು ಸಂರಕ್ಷಣೆ ಮಾಡುವ ಬಗ್ಗೆ ವಿವರಿಸಲಾಗಿದೆ. ದಾವಣಗೆರೆ ದಕ್ಷಿಣದ ಮತಗಟ್ಟೆ 139 ರಲ್ಲಿ ಜಯದೇವ ಹಾಸ್ಟೆಲ್ ಆನಗೋಡು ಮಠ ನರ್ಸರಿ ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೃಷಿ ಆಧಾರಿತ ಮತಗಟ್ಟೆ ಸ್ಥಾಪಿಸಲಾಗಿದೆ. ಇಲ್ಲಿ ಮೆಕ್ಕೆಜೋಳದ ಸ್ವಾಗತ ಕಮಾನು ನಿರ್ಮಾಣ, ಕೃಷಿ ಮಾಹಿತಿಯುಳ್ಳ ಫಲಕಗಳ ಅನಾವರಣ ಮಾಡಲಾಗಿದೆ.

ಹೊನ್ನಾಳಿ ತಾಲೂಕಿನ ಆಂಜನೇಯಪುರದಲ್ಲಿ ಲಂಬಾಣಿ ಸಾಂಪ್ರದಾಯಿಕ ಮತಗಟ್ಟೆ, ಚನ್ನಗಿರಿ ತಾಲೂಕಿನ ಅಸ್ತಾಪನಹಳ್ಳಿಯಲ್ಲಿ ಹಕ್ಕಿಪಿಕ್ಕಿ ಜನಾಂಗದ ಮತಗಟ್ಟೆ, ದಾವಣಗೆರೆ ನಗರದ ನೀರಾವರಿ ಇಲಾಖೆ ಮತಗಟ್ಟೆ 201 ರಲ್ಲಿ ಸಂಚಾರಿ ನಿಯಮಗಳ ಜಾಗೃತಿಯುಳ್ಳ ಮತಗಟ್ಟೆ, ಹರಿಹರ ವೀಳ್ಲೆದೆಲೆ, ಚನ್ನಗಿರಿ ಪಟ್ಟಣ ಅಡಿಕೆ ಬೆಳೆ ಕುರಿತಂತೆ ಮತಗಟ್ಟೆಗಳನ್ನು ಮತದಾರರನ್ನು ಸೆಳೆಯಲು ವಿಶೇಷವಾಗಿ ನಿರ್ಮಾಣ ಮಾಡಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+