ರುದ್ರಭೂಮಿಯಲ್ಲಿ ಗುಂಡಿ ತೋಡಿ ಹಣ ಲೂಟಿ, ವೀರಶೈವರು ಸಿಡಿಮಿಡಿ

Posted By:
Subscribe to Oneindia Kannada

ದಾವಣಗೆರೆ, ಆಗಸ್ಟ್ 22: ದಾವಣಗೆರೆಯ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರದ ವೇಳೆಯಲ್ಲಿ ಗುಂಡಿ ತೆಗೆಯಲು ಅಧಿಕ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಸಿಬ್ಬಂದಿಗಳ ವರ್ತನೆಯನ್ನು ಖಂಡಿಸಿ, ವೀರಶೈವ ಮುಖಂಡರು ಮಹಾನಗರ ಪಾಲಿಕೆ ಮಹಾಪೌರರಿಗೆ ಮನವಿ ಸಲ್ಲಿಸಿದರು.
ಒಂದು ಹೆಣದ ಗುಂಡಿ ತೆಗೆಯಲು 4,500 ರು ಗಳನ್ನು ನೀಡಬೇಕು. 2,000 ರು ಅಡ್ವಾನ್ಸ್ ಕೊಟ್ರೆ ಮಾತ್ರ ಗುಂಡಿ ತೆಗೆಯುತ್ತೇನೆ ಎಂದು ಅಲ್ಲಿನ ಕೆಲಸಗಾರರು ಹೇಳುತ್ತಾರೆ. ಇದರಿಂದ ಬಡವರಿಗೆ ತುಂಬ ತೊಂದರೆಯಾಗಲಿದೆ.

Davangere : Lingayat Burial Ground Gravedigger demand Salary hike irks public

ಈ ಬಗ್ಗೆ ಮಹಾನಗರ ಪಾಲಿಕೆ, ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಕೋರಿದ್ದಾರೆ.

ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲಿಲಿಕಾರ್ಜುನ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಜೆ. ಸೋಮನಾಥ್, ಸೋಮಣ್ಣ, ಬಿ ಮಂಜುನಾಥ್, ಅಕ್ಕೆ ಪ್ರಭು, ಅಜ್ಜಂಪುರ ಮೃತ್ಯುಂಜಯ, ಶಾಂತಕುಮಾರ್ ಮುಂತಾದವರು ಇದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Davangere : Lingayat Burial Ground staff and Gravedigger demand more money to their work and action has to be taken soon demanded public and a plea is given to Davanagere City Corporation.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X