ಗೆಲುವಿಗೆ ಅಜ್ಜಿ ಹೆಸರಾದರೆ, ಮೊಮ್ಮಗ ಹೋದಲ್ಲೆಲ್ಲ ಸೋಲಿನ ಕೆಸರು: ಈಶು

Posted By: ದಾವಣಗೆರೆ ಪ್ರತಿನಿಧಿ
Subscribe to Oneindia Kannada
   ದಾವಣಗೆರೆಯಲ್ಲಿ ರಾಹುಲ್ ಗಾಂಧಿಯನ್ನ ಛೇಡಿಸಿದ ಕೆ ಎಸ್ ಈಶ್ವರಪ್ಪ | Oneindia Kannada

   ದಾವಣಗೆರೆ, ಮಾರ್ಚ್ 14 : 'ಇಂದಿರಾ ಗಾಂಧಿ ಕಾಲದಲ್ಲಿ ಎಂಎಲ್‌ಎ, ಎಂಪಿಗಳು ಹೋಗಿ ಟಿಕೆಟ್ ತಂದರೆ ಗೆಲ್ಲುತ್ತಿದ್ದರು. ಈಗ ರಾಹುಲ್ ಗಾಂಧಿ ಪ್ರಚಾರಕ್ಕೆ ಕರೆತಂದು ಸೋಲು ಅನುಭವಿಸುತ್ತಿದ್ದಾರೆ' ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.

   ದಾವಣಗೆರೆಯ ಎವಿಕೆ ರಸ್ತೆಯಲ್ಲಿನ ಅಕ್ಕ ಮಹಾದೇವಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಹಿಂದುಳಿದ ವರ್ಗದ ಸಮಾವೇಶವನ್ನು ಉದ್ಘಾಟಿಸಿ ಈಶ್ವರಪ್ಪ ಮಾತನಾಡಿದರು.

   ರಾಹುಲ್ ಗಾಂಧಿ 'ಅಪ್ರೆಂಟಿಸ್‌ಶಿಪ್' ಅವಧಿ ಇನ್ನೂ ಮುಗಿದಿಲ್ವಾ?

   'ಮೊದಲು ಇಂದಿರಾ ಗಾಂಧಿ ಅವರು ಇದ್ದಾಗ 18 ರಾಜ್ಯಗಳಲ್ಲಿ ಕಾಂಗ್ರೆಸ್ ಆಡಳಿತವಿತ್ತು. ಈಗ ರಾಹುಲ್ ಗಾಂಧಿ ಪ್ರಚಾರಕ್ಕೆ ಹೋದ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೋಲು ಕಟ್ಟಿಟ್ಟ ಬುತ್ತಿಯಾಗಿದೆ' ಎಂದು ಲೇವಡಿ ಮಾಡಿದರು.

   K.S.Eshwarappa,

   'ಬಿಜೆಪಿ 21 ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದೆ. ಮುಂದಿನ ಚುನಾವಣೆಯಲ್ಲಿ ಕರ್ನಾಟಕವನ್ನು ಕಾಂಗ್ರೆಸ್ ಮುಕ್ತವಾಗಿ ಮಾಡುತ್ತೇವೆ' ಎಂದು ಈಶ್ವರಪ್ಪ ಹೇಳಿದರು.

   ಮಾ. 20ರಿಂದ ವಿಶೇಷ ಬಸ್ ನಲ್ಲಿ ರಾಹುಲ್ ಗಾಂಧಿ ಕರಾವಳಿ ಪ್ರವಾಸ

   'ಆರ್‌ಎಸ್‌ಎಸ್ ಬ್ಯಾನ್ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಇಂದಿರಾ ಗಾಂಧಿ, ಅವರ ಅಪ್ಪ ನೆಹರೂ ಕೈಯಲ್ಲಿ ಆರ್‌ಎಸ್ಎಸ್‌, ಬಿಜೆಪಿ ಮುಟ್ಟಲು ಸಾಧ್ಯವಾಗಿಲ್ಲ. ನೀನು ಯಾವ ದಾಸ?' ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

   ಕಾಂಗ್ರೆಸ್‌ಗೆ ಅನಾರೋಗ್ಯ : ಇಂದು ನಡೆಯಬೇಕಿದ್ದ ಸಚಿವ ಸಂಪುಟ ಸಭೆಯನ್ನು ಸಿದ್ದರಾಮಯ್ಯ ಅವರ ಅನಾರೋಗ್ಯದ ಹಿನ್ನಲೆಯಲ್ಲಿ ಮುಂದೂಡಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಈಶ್ವರಪ್ಪ, 'ಸಿದ್ದರಾಮಯ್ಯ ಮಾತ್ರವಲ್ಲ ಇಡೀ ಕಾಂಗ್ರೆಸ್ ಪಕ್ಷಕ್ಕೆ ಅನಾರೋಗ್ಯ ಉಂಟಾಗಿದೆ' ಎಂದರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   BJP leader KS Eshwarappa make fun of Congress president Rahul Gandhi and said, If Rahul Gandi made election campaign in Karnataka, BJP will win elections.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ