Rudrappa Lamani: ಕಬಡ್ಡಿ ರೈಡಿಂಗ್ ಹೋಗಿ ಮುಗ್ಗರಿಸಿ ಬಿದ್ದ ಉಪಸಭಾಪತಿ ರುದ್ರಪ್ಪ ಲಮಾಣಿ
ದಾವಣಗೆರೆ, ಫೆಬ್ರವರಿ 16: ಜಿಲ್ಲೆಯ ನ್ಯಾಮತಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಉಪ ಸಭಾಪತಿಯಾಗಿರುವ ಕಾಂಗ್ರೆಸ್ ನಾಯಕ ರುದ್ರಪ್ಪ ಲಮಾಣಿ ಅವರು ಕಬಡ್ಡಿ ಆಡಲು ಹೋಗಿ ಆಯತಪ್ಪಿ ಮುಗ್ಗರಿಸಿ ಬಿದ್ದಿದ್ದಾರೆ. ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೆಳಗೆ ಬೀಳುತ್ತಿದ್ದ ಆಟಗಾರರ ಮೇಲೆತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.
ದಾವಣಗೆರೆ ಜಿಲ್ಲೆಯ ನ್ಯಾಮತಿಯಲ್ಲಿ ಎರಡು ದಿನಗಳ ಹಿಂದೆ ಶುಕ್ರವಾರ ಸಂತ ಸೇವಾಲಾಲರ ಜಯಂತ್ಯುತ್ಸವ ಇತ್ತು. ಅದರ ಅಂಗವಾಗಿ ಕಬ್ಬಡ್ಡಿ ಪಂದ್ಯ ಆಯೋಜಿಸಲಾಗಿತ್ತು. ಈ ಪಂದ್ಯಾವಳಿಗಿ ಚಾಲನೆ ನೀಡಲು ಉಪ ಸಭಾಪತಿ ರುದ್ರಪ್ಪ ಲಮಾಣಿ ಮುಂದಾಗಿದ್ದರು.

ಚಾಲನೆಗೆಂದು ರೈಡಿಂಗ್ ಹೋಗಿದ್ದ ರುದ್ರಪ್ಪ ಲಮಾಣಿ ಅವರು ಕ್ರೀಡಾ ಸ್ಪೂರ್ತಿಯಲ್ಲೇ ಆಟವಾಡಲು ಮುಂದಾದರು. ಕಬಡ್ಡಿ, ಕಬಡ್ಡಿ ಎಂದು ಆಟವಾಡುತ್ತಲೇ ಆಯತಪ್ಪಿ ಮುಗ್ಗರಿಸಿ ಬಿದ್ದಿರುವುದು ವಿಡಿಯೋದಲ್ಲಿ ರೇಕಾರ್ಡ್ ಆಗಿದೆ. ಕೂಡಲೇ ಮೇಲೆದ್ದ ಅವರನ್ನು ಕ್ರೀಟಾಪಟುಗಳು, ಅಕ್ಕಪಕ್ಕದವರು ಕೈ ಹಿಡಿದು ಮೇಲಕ್ಕೆತ್ತಿದ್ದಾರೆ. ಬಳಿಕ ಅವರು ಅಲ್ಲಿಂದ ಹೊರ ನಡೆದಿದ್ದಾರೆ.
ರುದ್ರಪ್ಪ ಲಮಾಣಿ ಅವರು, ಸಂತ ಸೇವಾಲಾಲ್ ಅವರ ಜನ್ಮಸ್ಥಾನ ಮಹಾಮಠ ಸಮಿತಿ ಅಧ್ಯಕ್ಷರು ಆಗಿದ್ದಾರೆ. ಅವರನ್ನು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು. ಬಿದ್ದು ಮೇಲೇಳುತ್ತಿದ್ದಂತೆ ಕೊಂಚ ಹೊತ್ತು ಸುಧಾರಿಸಿಕೊಂಡು ಹೊರ ನಡೆದಿದ್ದಾರೆ. ಅದೃಷ್ಟವಶಾತ್ ಏನು ಆಗಿಲ್ಲ. ಅವರ ಆರೋಗ್ಯವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನ್ಯಾಮತಿ ಈ ಘಟನೆ ಬಳಿಕ ಕೊಂಚ ಮೊಣಕಾಲಿಗೆ ಪೆಟ್ಟಾಗಿದೆ ಎನ್ನಲಾಗಿದೆ. ಅದರ ಹೊರತು ಯಾವ ಗಂಭೀರ ಗಾಯಗಳಾಗಿಲ್ಲ. ಶನಿವಾರ ಅವರು ಬೋಗ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಯಾವುದೇ ಸಮಸ್ಯೆ ಆಗಿಲ್ಲ ಎಂದು ಅವರ ಆಪ್ತ ಮೂಲಗಳು ಮಾಹಿತಿ ನೀಡಿವೆ.
ಮಹಾಕುಂಭ ಮೇಳದಲ್ಲಿ ಉಪ ಸಭಾಪತಿ?
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಉಪಸಭಾಪತಿ ರುದ್ರಪ್ಪ ಲಮಾಣಿ ಅವರು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಅವರ ಆಪ್ತರು, ಸಮಿತಿ ಸದ್ಯರು ತೆರಳಿದ್ದು, ಅಲ್ಲಿ ಸಿಕ್ಕಾಪಟ್ಟೆ ಗದ್ದಲ ಇದೆ ಎಂಬ ಕಾರಣಕ್ಕೆ ಬಿಟ್ಟಿದ್ದೆ. ಇದೀಗ ಅಲ್ಲಿ ವಿಐಪಿಗಳಿಗೆ ನೇರವಾಗಿ ತೆರಳಲು, ನೇರವಾಗಿ ತೆರಳಿ ಪುಣ್ಯಸ್ನಾನ ಮಾಡಿಕೊಂಡು ಬರಲು ತಿಳಿಸಿದ್ದಾರೆ. ಹೀಗಾಗಿ ನಾವು ಶೀಗ್ರವೇ ಹೋಗಲಿದ್ದೇವೆ. ಸರ್ಕಾರಕ್ಕೆ ಅನುಮತಿ ಕೇಳಿದ್ದೇವೆ. ಈಗಾಗ ಆಗಿದಿದ್ದರೂ ಮುಂದಿನ ದಿನಗಳಲ್ಲಿ ತ್ರಿವೇಣಿ ಸಂಗಮಕ್ಕೆ ಹೋಗಿ ಬರುತ್ತೇವೆ ಎಂದು ಸ್ವತಃ ಉಪ ಸಭಾಪತಿಗಳು ತಿಳಿಸಿದ್ದಾರೆ.












Click it and Unblock the Notifications