ಜೂನ್ 26ಕ್ಕೆ ದಾವಣಗೆರೆಯಲ್ಲಿ ಸಾಹಿತಿ ಎಸ್ ಎಲ್ ಭೈರಪ್ಪ ಜತೆಗೆ ಸಂವಾದ

ದಾವಣಗೆರೆ, ಜೂನ್ 12: ಸಾಹಿತಿ ಎಸ್ ಎಲ್ ಭೈರಪ್ಪ ಅವರ ಅಭಿಮಾನಿಗಳಿಗೆ, ಒಟ್ಟಾರೆ ಸಾಹಿತ್ಯಾಭಿಮಾನಿಗಳಿಗೆ ಇಲ್ಲೊಂದು ಸುದ್ದಿ ಇದೆ. ಜಿಲ್ಲೆ ಸಮಾಚಾರ ಪತ್ರಿಕಾ ಬಳಗವು ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಜೂನ್ ಇಪ್ಪತ್ತಾರರ ಸಂಜೆ 5.30ಕ್ಕೆ ಸಾಹಿತಿ ಎಸ್ ಎಲ್ ಭೈರಪ್ಪ ಅವರ ಜತೆಗೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದೆ.

ಇನ್ನು ಆಸಕ್ತರಿಂದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ಕೂಡ ಏರ್ಪಡಿಸಲಾಗಿದೆ. ಭೈರಪ್ಪ ಅವರ ಒಂದು ಕೃತಿಯನ್ನು ಆಯ್ಕೆ ಮಾಡಿಕೊಂಡು ಪ್ರಬಂಧ ಸಿದ್ಧಪಡಿಸಬಹುದು ಎಂದು ಬಳಗದ ಪ್ರಧಾನ ಕಾರ್ಯದರ್ಶಿ ಸಿ.ಕೆ.ಆನಂದತೀರ್ಥಾಚಾರ್ ತಿಳಿಸಿದ್ದಾರೆ.[ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮಕ್ಕೆ ಭೈರಪ್ಪ ಬರಲಿ: ಪ್ರತಾಪ್ ಸಿಂಹ]

June 26th conversation with writer SL Bhyrappa in Davanagere

ಪ್ರಬಂಧ ಸ್ಪರ್ಧೆಯನ್ನು ಕಾಲೇಜು ಮತ್ತು ಹಿರಿಯ ವಿಭಾಗ ಎಂದು ಎರಡು ಭಾಗಗಳಾಗಿ ಮಾಡಲಾಗಿದ್ದು, ಪ್ರತಿ ವಿಭಾಗಕ್ಕೂ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಗುವುದು ಎಂದು ಬಳಗದ ಸಂಚಾಲಕರಾದ ಸಾಲಿಗ್ರಾಮ ಗಣೇಶ್‌ ಶೆಣೈ ಅವರು ತಿಳಿಸಿದ್ದಾರೆ.[ಉತ್ತರಕಾಂಡ ವಿಮರ್ಶೆಗೆ ವಿಮರ್ಶಕ ಸಿಎನ್ ರಾಮಚಂದ್ರನ್ ಪ್ರತಿಕ್ರಿಯೆ]

ಜೂನ್‌ 17ರೊಳಗೆ ಪ್ರಬಂಧವನ್ನು ಜಿಲ್ಲೆ ಸಮಾಚಾರ ಪತ್ರಿಕಾ ಬಳಗ, ಡಾ.ಎಸ್‌.ಎಲ್‌. ಭೈರಪ್ಪ ಕೃತಿ ಪ್ರಬಂಧ ಸ್ಪರ್ಧೆ, ನಾಯಕರ ಹಾಸ್ಟೆಲ್ ಕಟ್ಟಡ, ಪಿಜೆ ಬಡಾವಣೆ. ದಾವಣಗೆರೆ. -ಈ ವಿಳಾಸಕ್ಕೆ ಕಳುಹಿಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+