ಮದುವೆಯಾದ ನಾಲ್ಕೇ ದಿನದಲ್ಲಿ ನವದಂಪತಿ ಸೇರಿ ಮೂವರ ಆತ್ಮಹತ್ಯೆ

ದಾವಣಗೆರೆಯಲ್ಲಿ ಮದುವೆಯಾದ ನಾಲ್ಕೇ ದಿನದೊಳಗೆ ನವದಂಪತಿಯೂ ಸೇರಿದಂತೆ ಮೂರು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದು ಮಾತ್ರ ಗೊತ್ತಿಲ್ಲ

ದಾವಣಗೆರೆ, ಮೇ 25: ಸಂಭ್ರಮ ಪಡಬೇಕಾದ ಸಮಯದಲ್ಲಿ ಸಾವಿನ ಸೂತಕದಲ್ಲಿ ದಿನ ಕಳೆಯಬೇಕಾದ ಸನ್ನಿವೇಶ ದಾವಣಗೆರೆ ಜಿಲ್ಲೆಯ ಗುಡಾಳು ಗ್ರಾಮದಲ್ಲಿ ನಡೆದಿದೆ. ಅವರಿಬ್ಬರಿಗೆ ಮೂರು ದಿನದ ಹಿಂದಷ್ಟೇ ಮದುವೆಯಾಗಿತ್ತು. ಆದರೆ ಅದೇನಾಯಿತೋ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾವಿನ ಸರಣಿ ಅಲ್ಲಿಗೇ ನಿಂತಿಲ್ಲ. ನಲವತ್ತು ವರ್ಷದ ನಟರಾಜ್ ಹಾಗೂ ಇಪ್ಪತ್ನಾಲ್ಕು ವರ್ಷದ ಪಲ್ಲವಿ ಆತ್ಮಹತ್ಯೆ ಮಾಡಿಕೊಂಡ ದಂಪತಿ. ನಟರಾಜ್ ಗೆ ಇದು ಎರಡನೇ ಮದುವೆಯಾಗಿತ್ತು. ಹದಿನೈದು ವರ್ಷದ ಒಬ್ಬ ಮಗ ಕೂಡ ಇದ್ದ. ಇವರಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನೋಡಿದ ನಂತರ ಆತ (ಪ್ರದೀಪ್) ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ.[ತೀರಿಕೊಂಡ ತಾಯಿಯ ಎದೆಹಾಲು ಕುಡಿಯಲು ಯತ್ನಿಸುತ್ತಿದ್ದ ಮಗು]

 Including newly wed 3 person commits suicide in Davanagere

ನಟರಾಜ್ ಗೆ ಅದಾಗಲೇ ಮದುವೆಯಾಗಿತ್ತು ಎಂಬ ಕಾರಣದಿಂದಲೇ ಯುವತಿಯ ಮನೆ ಕಡೆಯವರು ಕಿರುಕುಳ ನೀಡುತ್ತಿದ್ದರು. ಆದ್ದರಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಸ್ಥಳೀಯರ ಆರೋಪವಾಗಿದೆ. ಆದರೂ ಮದುವೆಯಾದ ನಾಲ್ಕು ದಿನದೊಳಗೆ ಒಂದೇ ಮನೆಯಲ್ಲಿ ಮೂರು ಸಾವು, ಅದೂ ಆತ್ಮಹತ್ಯೆ ಮಾಡಿಕೊಂಡಿರುವುದು ತೀರಾ ಖೇದಕರ ಘಟನೆ.[ಮುಂಬೈನಲ್ಲಿ ಮದುವೆ ನೋಡಿ, ಮನುಷ್ಯತ್ವ ಅಂದರೆ ಇದೇ ಅಲ್ಲವೆ?]

ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ, ಪರಿಶೀಲನೆ ನಡೆಸಿದ್ದಾರೆ. ದೂರು ದಾಖಲು ಮಾಡಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+