• search
  • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆಯಲ್ಲಿ 79 ವರ್ಷದ ವೃದ್ಧನಿಗೆ ಹನಿಟ್ರ್ಯಾಪ್‌, 15 ಲಕ್ಷ ರೂ. ಬೇಡಿಕೆ, ಕಿಲಾಡಿ ಲೇಡಿ ಅಂದರ್‌

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ನವೆಂಬರ್‌, 08: ಅಲ್ಲಲ್ಲಿ ಹನಿಟ್ರ್ಯಾಪ್‌ ಮಾಡುತ್ತಿರುವ ಪ್ರಕರಣಗಳು ವರದಿ ಆಗುತ್ತಿವೆ. ಆದರೆ 79 ವರ್ಷದ ವೃದ್ಧರೊಬ್ಬರನ್ನು ಮಹಿಳೆಯೊಬ್ಬರು ಹನಿಟ್ರ್ಯಾಪ್‌ಗೆ ಕೆಡವಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

79 ವರ್ಷ ವಯಸ್ಸಿನ ಚಿದಾನಂದಪ್ಪನನ್ನು ಹನಿಟ್ರ್ಯಾಪ್‌ಗೆ ಕೆಡವಲು ಮುಂದಾದ ಜಿ. ಕೆ. ಯಶೋಧ (32) ಮಹಿಳೆ ಇದೀಗ ಪೊಲೀಸರ ಅತಿಥಿ ಆಗಿದ್ದಾಳೆ. ನಗರದ ಶಿವಕುಮಾರ ಸ್ವಾಮಿ ಬಡಾವಣೆಯ 79 ವರ್ಷದ ವೃದ್ಧನ ಬಳಿ ಯಶೋಧ ಸಾಲ ಪಡೆದಿದ್ದಳು‌. ಸ್ವಲ್ಪ ದಿನಗಳ ಬಳಿಕ ಕೊಟ್ಟ ಸಾಲವನ್ನು ಅಜ್ಜ ವಾಪಸ್ ಕೇಳಿದ್ದಾರೆ. ಆಗ ಹಣ ಕೊಡದೇ ಯಶೋಧ ಸತಾಯಿಸುತ್ತಿದ್ದಾಳೆ. ವೃದ್ಧನ ಬಳಿ 85 ಸಾವಿರ ರೂಪಾಯಿ ಪಡೆದು ಇಲ್ಲಸಲ್ಲದ ನೆಪವೊಡ್ಡಿ ತಪ್ಪಿಸಿಕೊಳ್ಳುತ್ತಿದ್ದಳು. ತಾತನ ಕಾಟದಿಂದ ರೋಸಿ ಹೋಗಿದ್ದ ಆಕೆಯು ಒಂದು ಪ್ಲಾನ್ ಮಾಡಿದ್ದಳು. ಅಜ್ಜನಿಗೆ ಹಣ ವಾಪಸ್ ಕೊಡುವುದಾಗಿ ತನ್ನ ಮನೆಗೆ ಕರೆದಿದ್ದಳು. ಈ ವೇಳೆ ಜ್ಯೂಸ್‌ನಲ್ಲಿ ಮತ್ತು ಬರುವ ಔಷಧ ಹಾಕಿ ಹನಿಟ್ರ್ಯಾಪ್‌ಗೆ ಯತ್ನಿಸಿದ್ದಾಳೆ. ಅಜ್ಜನ ಬಟ್ಟೆ ಬಿಚ್ಚಿ ನಗ್ನವಾಗಿದ್ದ ಫೋಟೋ ತೆಗೆದುಕೊಂಡಿದ್ದಳು.

ಬಿಲ್ ಪಾಸ್‌ ಮಾಡಲು ಲಂಚ: ರಾಷ್ಟ್ರಪತಿಗೆ ದಯಾಮರಣ ಅರ್ಜಿ ಸಲ್ಲಿಸಿದ ಹುಬ್ಬಳ್ಳಿ ಗುತ್ತಿಗೆದಾರಬಿಲ್ ಪಾಸ್‌ ಮಾಡಲು ಲಂಚ: ರಾಷ್ಟ್ರಪತಿಗೆ ದಯಾಮರಣ ಅರ್ಜಿ ಸಲ್ಲಿಸಿದ ಹುಬ್ಬಳ್ಳಿ ಗುತ್ತಿಗೆದಾರ

15 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ

ಯಶೋಧ ಅದೇ ನಗ್ನ ಪೋಟೋವನ್ನು ಇಟ್ಟುಕೊಂಡು ಅಜ್ಜನಿಗೆ 15 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಳು.‌ ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಪೋಟೋಗಳನ್ನು ಹಾಕುವ ಬೆದರಿಕೆ ಹಾಕಿದ್ದಳು. ಇದರಿಂದ ಭಯಗೊಂಡು ಅಜ್ಜ ಕೆಟಿಜೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಳಿಕ ಪೊಲೀಸರು ಖತರ್ನಾಕ್‌ ಕಿಲಾಡಿ ಲೇಡಿಯನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.

ಹೆಚ್ಚುತ್ತಲೇ ಇವೆ ಹನಿಟ್ರ್ಯಾಪ್‌ ಪ್ರಕರಣಗಳು

ಟೆಕ್ನಾಲಜಿ ಬೆಳೆಯುತ್ತಿದ್ದಂತೆ ಸೈಬರ್ ಅಪರಾಧಿಗಳು ಹಣ ದೋಚಲು ಒಂದೊಂದು ರೀತಿಯ ಖತರ್ನಾಕ್ ಯೋಜನೆಗಳನ್ನು ರೂಪಿಸುತ್ತಿರುತ್ತಾರೆ. ಇದೀಗ ರಾಜ್ಯದಲ್ಲಿ ಲೈಂಗಿಕ ಹಿಂಸೆ, ಲೈಂಗಿಕ ದೌರ್ಜನ್ಯ, ಆನ್​ಲೈನ್ ಹನಿಟ್ರ್ಯಾಪ್ ಪ್ರಕರಣಗಳು ಹೆಚ್ಚಾಗುತ್ತಿದೆ. ಅನಾಮಧೇಯ ನಂಬರ್‌ನಿಂದ ಕರೆ ಮಾಡುವ ವಂಚಕರು ಅಶ್ಲೀಲ ವಿಡಿಯೋ ತೋರಿಸಿ ಅದನ್ನು ರೆಕಾರ್ಡ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಾರೆ. ಒಂದೊಮ್ಮೆ ನೀವು ಅಂತಹ ಕರೆಗಳನ್ನು ಸ್ವೀಕರಿಸಿದ್ದೇ ಆದಲ್ಲಿ ಆನ್​ಲೈನ್ ಹನಿಟ್ರ್ಯಾಪ್​ಗೆ ಒಳಗಾಗುವುದು ಗ್ಯಾರೆಂಟಿ. ಮೊಬೈಲ್ ತಂತ್ರಜ್ಞಾನ ಅಪ್​ಡೇಟ್ ಆದಂತೆ ಸೈಬರ್ ಅಪರಾಧಿಗಳು ಕೂಡ ಹೆಚ್ಚಾಗುತ್ತಿದ್ದಾರೆ. ಒದೊಂದು ಐಡಿಯಾಗಳನ್ನು ಬಳಸಿ ಹಣ ಸುಲಿಗೆಗೆ ಇಳಿದಿದ್ದಾರೆ. ಈ ಬಗ್ಗೆ ಪೊಲೀಸರು ಜನರಿಗೆ ಜಾಗ್ರತೆ ಮೂಡಿಸುತ್ತಲೇ ಇದ್ದಾರೆ. ಜನರು ಎಷ್ಟೇ ಸುರಕ್ಷಿತವಾಗಿದ್ದರೂ ಕೂಡ ಹನಿಟ್ರ್ಯಾಪ್‌ ಪ್ರಕರಣಗಳಿಗೆ ಮಾತ್ರ ನಿರ್ಬಂಧ ಇಲ್ಲದಂತಾಗಿದೆ.

ಕಡೂರು; ಶಿಕ್ಷಕನ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಿಇಒ ಅಧಿಕಾರಿ ಲೋಕಾಯುಕ್ತ ವಶಕ್ಕೆಕಡೂರು; ಶಿಕ್ಷಕನ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಿಇಒ ಅಧಿಕಾರಿ ಲೋಕಾಯುಕ್ತ ವಶಕ್ಕೆ

English summary
Woman arrested for Honey trapping 79 years old man in Davanagere, 32 year old Yashodha Arrested by davanagere police, Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X