ಬೆಣ್ಣೆನಗರಿ ದಾವಣಗೆರೆಯಲ್ಲಿ ಮಾರ್ಚ್ 14ಕ್ಕೆ ಹೋಳಿಹಬ್ಬ ಫಿಕ್ಸ್
ದಾವಣಗೆರೆ, ಮಾರ್ಚ್, 10: ಮುಂಬೈ ಬಿಟ್ಟರೆ, ಬೆಣ್ಣೆನಗರಿ ದಾವಣಗೆರೆಯಲ್ಲೇ ಅದ್ಧೂರಿಯಾಗಿ ಹೋಳಿ ಹಬ್ಬವನ್ನು ಆಚರಣೆ ಮಾಡುತ್ತಾರೆ. ಇನ್ನೂ ಈ ಬಾರಿ ಆಚರಣೆ ಮಾಡಲ್ಲ ಎನ್ನುವ ವದಂತಿಗಳು ಹರಡಿದ್ದವು. ಅದರೆ, ನಿಗದಿತ ದಿನಾಂಕದಂತೆ ಮಾರ್ಚ್ 14ರಂದೇ ರಾಂ ಅಂಡ್ ಕೋ ಸರ್ಕಲ್‌ನ ಗೆಳೆಯರ ಬಳಗದಿಂದ ಆಚರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ರಾಂ ಅಂಡ್ ಕೋ ಸರ್ಕಲ್ ನ ಗೆಳೆಯರ ಬಳಗದಿಂದ ಮಾರ್ಚ್ 14ರಂದು ಹೋಳಿ ಹಬ್ಬ ಆಚರಣೆ ನಡೆಸಲಾಗುವುದು. ಈ ವರ್ಷ ರಾಂ ಅಂಡ್ ಕೋ ವೃತ್ತದಲ್ಲಿ ಹೋಳಿ ಆಚರಣೆ ಮಾಡಲಾಗುತ್ತಿಲ್ಲ ಎಂದು ಕೆಲವರು ಗಾಳಿ ಸುದ್ದಿ ಹರಡಿದ್ದರು. ಈ ರೀತಿಯ ಗಾಳಿ ಸುದ್ದಿಗೆ ಯಾರೂ ಕಿವಿಗೊಡಬೇಡಿ. ಪ್ರತಿ ವರ್ಷದಂತೆ ಈ ಬಾರಿಯೂ ಸಹ ರಾಂ ಅಂಡ್ ಕೋ ಸರ್ಕಲ್‌ನಲ್ಲಿಯೇ ಹೋಳಿ ಹಬ್ಬನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಶ್ರೀ ವರಸಿದ್ಧಿ ವಿನಾಯಕ ಮಹೋತ್ಸವ ಸಮಿತಿ ಅಧ್ಯಕ್ಷ ಕೆ.ನಾಗೇಂದ್ರರೆಡ್ಡಿ ಅವರು ಹೇಳಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 27 ವರ್ಷಗಳಿಂದ ರಾಂ ಅಂಡ್ ಕೋ ವೃತ್ತದಲ್ಲಿ ಹೋಳಿ ಅಚರಣೆ ನಡೆಸಿಕೊಂಡು ಬರಲಾಗುತ್ತಿದೆ. ಈ ವರ್ಷ ಕೂಡ ಹೋಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ಶಾಸಕ ಶಾಮನೂರು ಶಿವಶಂಕರಪ್ಪ ಹೋಳಿಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಮಾರ್ಚ್ 13ರಂದು ಸಂಜೆ 7ಕ್ಕೆ ಕಾಮದಹನ ಮಾಡಲಾಗುವುದು. ಮಾರ್ಚ್ 14ರ ಶುಕ್ರವಾರ ಬೆಳಗ್ಗೆ 7ರಿಂದ ಮಧ್ಯಾಹ್ನ 1ರ ವರೆಗೆ ಹೋಳಿ ಆಚರಣೆ ಮಾಡಲಾಗುತ್ತದೆ. 2,000ಕ್ಕೂ ಅಧಿಕ ಹೆಚ್ವು ಯುವಕ-ಯುವತಿಯರು ಇದರಲ್ಲಿ ಭಾಗಿ ಆಗಲಿದ್ದು, ಯುವತಿಯರಿಗೆ ಪ್ರತಿ ವರ್ಷದಂತೆ ಈ ಬಾರಿಯೂ ಪ್ರತ್ಯೇಕ ಸ್ಥಳಾವಕಾಶ ಮಾಡಿಕೊಡಲಾಗುತ್ತದೆ.
ಇನ್ನು ಈ ಬಾರಿ ಬೆಳಗಾವಿಯಿಂದ ಡಿಜೆ ತರಿಸಲಾಗುವುದು. ಕಾಮದಹನ ಮಾಡುವ ವೇಳೆ ಕಾಮದಹನದ ಹಿಂದಿರುವ ಪುರಾಣ ಕತೆಯನ್ನು ಡಿವಿಡಿ ಮೂಲಕ ಪ್ರಸಾರ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಿದರು. ಇನ್ನು ಈ ದಿನ ಜಿಲ್ಲೆಯ ಹಲವು ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗುತ್ತದೆ.
ಮಾರ್ಚ್-ಏಪ್ರಿಲ್ ರಜೆಗಳು: ಪುಣೆಯಲ್ಲಿ ಮಾರ್ಚ್‌ನಲ್ಲಿ ಹಲವು ಸಾರ್ವಜನಿಕ ರಜಾದಿನಗಳು ಬರಲಿವೆ. ಮಾರ್ಚ್ 13ರಂದು ಹೋಳಿ ಹಬ್ಬ, ಮಾರ್ಚ್ 14ರಂದು ಧುಲಿ ವಂದನಾ ಇರಲಿದ್ದು, ಈ ದಿನಗಳಂದು ಈ ಭಾಗದ ಶಾಲೆಗಳಿಗೆ ರಜೆ ಇರಲಿದೆ. ಮರಾಠಿ ಕ್ಯಾಲೆಂಡರ್ ಪ್ರಕಾರ, ಮಾರ್ಚ್ 17ರಂದು ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ, ಮಾರ್ಚ್ 30 ಗುಡಿ ಪಾಡ್ವಾ ಮತ್ತು ಮಾರ್ಚ್ 31 ರಂಜಾನ್ ಹಿನ್ನೆಲೆ ಶಲಾಗಳಿಗೆ ರಜೆ ಇರಲಿದೆ. ಇನ್ನು ಇಲ್ಲಿ ಹಲವು ಶಾಲೆಗಳಿಗೆ ಶನಿವಾರ ಕೂಡ ರಜೆಗಳು ಇರಲಿವೆ ಎನ್ನುವ ಮಾಹಿತಿ ಇದೆ.
ಮತ್ತೊಂದೆಡೆ ಏಪ್ರಿಲ್ 6ರಂದು ರಾಮನವಮಿ, ಏಪ್ರಿಲ್ 10ರಂದು ಮಹಾವೀರ ಜಯಂತಿ ಮತ್ತು ಏಪ್ರಿಲ್ 18ರಂದು ಗುಡ್ ಫ್ರೈಡೇ ಸೇರಿ ಸರಣಿ ರಜೆಗಳು ಇರಲಿವೆ. ಇದನ್ನು ಹೊರತು ಪಡಿಸಿದರೆ ಭಾನುವಾರದಂದು ಶಾಲೆಗಳಿಗೆ ರಜೆ ಇರಲಿದೆ.












Click it and Unblock the Notifications