ದಾವಣಗೆರೆ: ಸಹಾಯ ಮಾಡಿದ ತಪ್ಪಿಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಆಪದ್ಭಾಂಧವ

ದಾವಣಗೆರೆ, ಜೂನ್‌, 08: ನಾನು ಕಾಲೇಜು ಸ್ಟೂಡೆಂಟ್. ಅರ್ಜೆಂಟ್ ಕಾಲೇಜ್ ಫೀಸ್ ಕಟ್ಟಬೇಕು. ಬೇರೆಯವರು ನಿಮ್ಮ ಅಕೌಂಟ್‌ಗೆ ಹಣ ಹಾಕುತ್ತಾರೆ. ಆ ಹಣವನ್ನು ಬಿಡಿಸಿಕೊಡಿ ಎಂದುಕೊಂಡು ಬಂದವ ತಂದಿಟ್ಟ ಫಜೀತಿ ಅಂತಿಂಥದ್ದಲ್ಲ. ಹಣ ಬಿಡಿಸಿಕೊಟ್ಟು, ಫೋನ್ ಪೇ ಮಾಡಿದ ತಪ್ಪಿಗೆ ಠಾಣೆ ಮೆಟ್ಟಿಲು ಹತ್ತುವಂತಾಯ್ತು ಆಪದ್ಭಾಂಧವನಿಗೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಎಲ್ಲಿ ಅಂತೀರಾ? ಇಲ್ಲಿದೆ ನೋಡಿ ಮಾಹಿತಿ.

ಕಷ್ಟ ಎಂದರೆ ಮರಗುವ, ವಿದ್ಯಾರ್ಥಿಗಳೆಂದರೆ ಸಹಾಯ ಮಾಡುವ ಮನೋಭಾವ ಹೊಂದಿರುವವರು ಈಗಲೂ ಇದ್ದಾರೆ. ಒಂದು ರೂಪಾಯಿ ಪಡೆಯದೇ, ಕಾಲೇಜು ವಿದ್ಯಾರ್ಥಿಗೆ ಸಹಾಯ ಮಾಡಲು ಹೋಗಿ ಬೇಡದ ಉಸಾಬರಿ ಮೈಮೇಲೆ ಎಳೆದುಕೊಂಡ ಆಪದ್ಭಾಂಧವ ಸ್ಟೋರಿ ಇದು.

Helping to student, Mobile shop owner troubled in Davanagere

ದಾವಣಗೆರೆಯಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ ಕೆ. ಉಮೇಶ್ ಎನ್ನುವವರು ಸಂಕಷ್ಟಕ್ಕೆ ಸಿಲುಕಿದವರಾಗಿದ್ದಾರೆ. ಕೆ.ಉಮೇಶ್ ಬಳಿ ಬಾಲಕೃಷ್ಣ ಎಂಬಾತ ಕಳೆದ ಕೆಲ ದಿನಗಳ ಹಿಂದೆ ನಾನು ಕಾಲೇಜು ವಿದ್ಯಾರ್ಥಿ, ನನ್ನ ಹೆಸರು ಸೋನಾ ನಾಯ್ಕ್ ಎಂದೇಳಿ ಪರಿಚಯಿಸಿಕೊಂಡಿದ್ದಾನೆ. ಅಲ್ಲದೆ ನಿಮ್ಮ ಅಕೌಂಟ್‌ಗೆ 1ಲಕ್ಷದ 47 ಸಾವಿರ ರೂಪಾಯಿ ಹಾಕುತ್ತಾರೆ. ಆ ಹಣವನ್ನು ಬಿಡಿಸಿಕೊಡಿ ಎಂದು ಹೇಳಿದ್ದಾನೆ.

ನಂತರ ಬಾಲಕೃಷ್ಣ ಎಂದು ಪರಿಚಯಿಸಿಕೊಂಡಿದ್ದವನು ಉಮೇಶ್ ಅವರ ಅಕೌಂಟ್‌ಗೆ ಹಣ ಹಾಕಿದ್ದಾನೆ. ಬಳಿಕ ಎಟಿಎಂನಿಂದ 95 ಸಾವಿರ ರೂಪಾಯಿ ಬಿಡಿಸಿಕೊಟ್ಟಿದ್ದಾರೆ. ಈ ಹಣ ತೆಗೆದುಕೊಂಡು ಹೋದ ಸೋನಾ ನಾಯ್ಕ್ ಉಳಿದ ಹಣವನ್ನು ಮಂಜುನಾಥ್ ಎನ್ನುವವರ ಮೊಬೈಲ್ ನಂಬರ್‌ಗೆ ಫೋನ್ ಪೇ ಮಾಡುವಂತೆ ಹೇಳಿದ್ದಾನೆ.

ಫೋನ್ ಪೇ ಮೂಲಕ ಹಣ

ಅದರಂತೆ ಉಮೇಶ್ ಅವರು ಫೋನ್ ಪೇ ಮೂಲಕ 52 ಸಾವಿರ ರೂಪಾಯಿಯನ್ನು ಮಂಜುನಾಥ್ ಅವರಿಗೆ ಕಳುಹಿಸಿದ್ದಾರೆ. ಬಳಿಕ ಬಾಲಕೃಷ್ಣ ಅವರ ಸಂಪರ್ಕಕ್ಕೆ ಸೋನಾ ನಾಯ್ಕ್ ಸಿಕ್ಕಿಲ್ಲ. ಆಗ ತಾನು ಮೋಸ ಹೋಗಿರುವುದಾಗಿ ಚಿತ್ರದುರ್ಗ ನಗರ ಪೊಲೀಸ್ ಠಾಣೆಗೆ ತೆರಳಿ ಬಾಲಕೃಷ್ಣ ದೂರು ನೀಡಿದ್ದಾರೆ. ನಾನು ದಾವಣಗೆರೆಯ ಉಮೇಶ್ ಎಂಬುವವರ ಅಕೌಂಟ್‌ಗೆ ಅಮೌಂಟ್ ಹಾಕಿರುವುದಾಗಿ ಹೇಳಿದ್ದಾನೆ.
ಇಲ್ಲಿಂದ ಮತ್ತೊಂದು ಕಥೆ ಶುರುವಾಗಿ ಉಮೇಶ್ ಪೇಚಿಗೆ ಸಿಲುಕಿದ್ದಾರೆ. ತನ್ನದಲ್ಲದ ತಪ್ಪಿಗೆ ಪೊಲೀಸ್ ಠಾಣೆ ಮೆಟ್ಟಿಲು ಹತ್ತುವಂತಾಯ್ತು. ಪೊಲೀಸರು ದಾಖಲೆ ಪರಿಶೀಲಿಸಿ ವಿಚಾರಣೆಗೆ ಕರೆದಾಗ ಬರುವಂತೆ ಹೇಳಿ ವಾಪಸ್ ಉಮೇಶ್ ಅವರನ್ನು ಕಳುಹಿಸಿಕೊಟ್ಟಿದ್ದಾರೆ.

ಚಿತ್ರದುರ್ಗ ಪೊಲೀಸರ ನೊಟೀಸ್‌ನಲ್ಲಿ ನಲ್ಲೇನಿದೆ.?

ಇನ್ನು ಬಾಲಕೃಷ್ಣ ಎಂಬಾತ ಸೋನಾ ನಾಯ್ಕ್ ಎಂಬಾತನ ಮಾತು ಕೇಳಿ ಉಮೇಶ್ ಅವರ ಅಕೌಂಟ್‌ಗೆ 1 ಲಕ್ಷದ 47 ಸಾವಿರ ರೂಪಾಯಿ ಹಾಕಿದ್ದ. ಆದರೆ ಆಮೇಲೆ ಆಗಿದ್ದೇ ಬೇರೆ. ಮಂಜುನಾಥ್ ಮತ್ತು ಸೋನಾ ನಾಯ್ಕ್ ಇಬ್ಬರೂ ಸಹ ಕೈಗೆ ಸಿಕ್ಕಿಲ್ಲ. ಫೋನ್ ಮಾಡಿದರೆ ಸ್ವಿಚ್ ಆಫ್. ಬಾಲಕೃಷ್ಣ ಎಂಬುವವರಿಗೆ ಸೋನಾ ನಾಯ್ಕ್ ಸೈಟ್ ಇದೆ, ಇದಕ್ಕೆ ಮುಂಗಡ ಹಣ ಹಾಕಿ ಎಂದು ಹೇಳಿ ಹಣ ಪಡೆದಿದ್ದಾನೆ. ಹಣ ಕೈಗೆ ಸಿಕ್ಕ ಬಳಿಕ ಸೋನಾ ನಾಯ್ಕ್ ಎಸ್ಕೇಪ್ ಆಗಿದ್ದಾನೆ ಎಂದು ಹೇಳಲಾಗುತ್ತಿದೆ.

ಚಿತ್ರದುರ್ಗ ನಗರ ಪೊಲೀಸ್ ಠಾಣೆಯ ಸಹಾಯಕ ಉಪ ನಿರೀಕ್ಷಕರು ಕೆ. ಉಮೇಶ್ ಅವರಿಗೆ ನೊಟೀಸ್ ಕಳುಹಿಸಿದ್ದಾರೆ. ಈ ಮೂಲಕ ನಿಮಗೆ ತಿಳಿಯಪಡಿಸುವುದೇನೆಂದರೆ ನಿಮ್ಮ ವಿರುದ್ಧ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಡಿಪಿ ನಂ. 47/ 2023, ಸೆಕ್ಷನ್ ಅಡಿ ದೂರು ದಾಖಲಾಗಿದೆ. ಸದರಿ ದೂರು ಅರ್ಜಿಯ ವಿಚಾರಣೆಯ ಸಲುವಾಗಿ ನೀವು ನೊಟೀಸ್ ತಲುಪಿದ ಕೂಡಲೇ ಠಾಣೆಯಲ್ಲಿ ತನಿಖಾಧಿಕಾರಿಯವರ ಮುಂದೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ ಎಂದು ತಿಳಿಸಲಾಗಿದೆ.

ಠಾಣೆಗೆ ಹೋಗಿ ಬಂದ ಉಮೇಶ್

ಈ ನೊಟೀಸ್ ಬರುತ್ತಿದ್ದಂತೆ ಕೆ.ಉಮೇಶ್ ಅವರು ಬಡಾವಣೆ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಅಲ್ಲಿ ನಡೆದ ಘಟನೆ, ಎಟಿಎಂನಿಂದ ಹಣ ಬಿಡಿಸಿಕೊಂಡು ಬಂದಿದ್ದ ದಾಖಲೆ, ಫೋನ್ ಪೇ ಮಾಡಿದ್ದ ಸ್ಕ್ರೀನ್ ಶಾಟ್ ನೀಡಿದ್ದಾರೆ. ಇದರಲ್ಲಿ ನನ್ನ ಪಾತ್ರವೇನೂ ಇಲ್ಲ. ನಾನು ಬಾಲಕೃಷ್ಣ ಎಂಬಾತನಿಗೆ ಕರೆಯೇ ಮಾಡಿಲ್ಲ, ಮೆಸೇಜ್ ಮಾಡಿಲ್ಲ. ಸೋನಾ ನಾಯ್ಕ್ ಹೇಳಿದ ಎಂದು ಅವರು ಅಮೌಂಟ್ ಹಾಕಿದ್ದಾರೆ ಎಂದು ಸವಿವರವಾಗಿ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ಅಂಥದ್ದೇನೂ ಕೇಸ್ ಅಲ್ಲ ಇದು. ವಿಚಾರಣೆಗೆ ಕರೆದರೆ ಹೋಗಿ ಬನ್ನಿ ಎಂದು ಪೊಲೀಸರು ಹೇಳಿಕಳುಹಿಸಿದ್ದಾರೆ.

ಸಹಾಯ ಮಾಡುವ ಮುನ್ನ ಎಚ್ಚರ

ಒಟ್ಟಿನಲ್ಲಿ ಕಾಲೇಜು ವಿದ್ಯಾರ್ಥಿಯೆಂಬ ಮಾನವೀಯ ನೆಲೆಯಲ್ಲಿ ಸಹಾಯ ಮಾಡಲು ಹೋಗಿ ಹಣವನ್ನೂ ಬಿಡಿಸಿಕೊಟ್ಟು ಮಾಡದ ತಪ್ಪಿಗೆ ಪೊಲೀಸ್ ಠಾಣೆ ಮೆಟ್ಟಿಲು ಹತ್ತುವಂತಾಗಿದ್ದು ಮಾತ್ರ ವಿಪರ್ಯಾಸವೇ ಸರಿ. ಹಾಗಾಗಿ, ಹಣಕಾಸಿನ ವಿಚಾರ ಸೇರಿದಂತೆ ಬೇರೆಯವರಿಗೆ ಮೊಬೈಲ್ ಕೊಡುವಾಗ ಎಚ್ಚರ ವಹಿಸುವುದು ಒಳಿತು.

ನಿಮಗೆ ಪೋನ್ ಪೇ ಮಾಡಿಸುತ್ತೇನೆ ಹಣ ಕೊಡಿ ಎಂದು ಪೋನ್ ಪೇ ಮೂಲಕ ಹಣ ಹಾಕಿಸಿ ಪಡೆದು ಹೋದವನು ಒಬ್ಬ. ಇತ್ತ ನನಗೆ ಮೋಸ ಮಾಡಿದ್ದಾರೆ ಎಂದು ದೂರು ಕೊಟ್ಟವನೊಬ್ಬ. ಸರ್ ಕಾಲೇಜು ಫೀಸ್ ಕಟ್ಟಬೇಕು ನಮ್ಮ ಅಣ್ಣಾ ಪೋನ್‌ ಪೇ ಮಾಡುತ್ತಾರೆ, ಹಣ ನೀಡಿ ಎಂದ. ಪೋನ್‌ ಪೇ ಮುಖಾಂತರ ಹಣ ಬಂದಿದೆ ಎಂದು ಖಚಿತವಾದ ಮೇಲೆ ಎಟಿಎಂನಲ್ಲಿ ಆತನಿಗೆ ಹಣ ಬಿಡಿಸಿ ಕೊಟ್ಟರು. ಇದೀಗ ಒಬ್ಬ ವ್ಯಕ್ತಿ ನನಗೆ ಮೋಸ ಮಾಡಿದ್ದಾರೆ ಅಂತಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

ಕಷ್ಟದ ಸಮಯದಲ್ಲಿ ಎಟಿಎಂಗೆ ಹೋಗಿ ಹಣ ಬಿಡಿಸಿಕೊಟ್ಟ ಅಮಾಯಕ ಅಂಗಡಿ ಮಾಲೀಕನಿಗೆ ಪೊಲೀಸ್ ‌ಇಲಾಖೆಯಿಂದ‌‌‌ ವಿಚಾರಣೆಗೆ ಹಾಜರಾಗಲು ನೋಟಿಸ್ ಬಂದಿದೆ. ಆದ್ದರಿಂದ ಅಪರಿಚಿತ ವ್ಯಕ್ತಿಗಳು ನಿಮ್ಮ ಬಳಿ ನಿಮಗೆ ಪೋನ್‌ ಪೇ ಮಾಡುತ್ತಾರೆ. ನಮಗೆ ಹಣ‌ ನೀಡಿ ಎಂದರೆ ನೀವು ಯಾವುದೇ ಕಾರಣಕ್ಕೂ ಸ್ಪಂದಿಸಬೇಡಿ ಎಂದು ಸಾಮಾಜಿಕ ಕಾರ್ಯಕರ್ತ ಎಂ. ಜಿ. ಶ್ರೀಕಾಂತ್ ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+