ನೌಕಾದಳಕ್ಕೆ ಆಯ್ಕೆಯಾದ ಕರ್ನಾಟಕದ ಏಕೈಕ ಅಭ್ಯರ್ಥಿ: ಈಕೆ ಕಥೆ ಎಂತವರಿಗೂ ಸ್ಫೂರ್ತಿ!
ದಾವಣಗೆರೆ, ಮೇ 29: ಮನೆಯಲ್ಲಿ ಕಿತ್ತು ತಿನ್ನುವ ಬಡತನ. ತನ್ನ ಗಂಡನನ್ನು ಅಪಘಾತದಲ್ಲಿ ಕಳೆದುಕೊಂಡರೂ ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರನ ಓದಿಸುವ ತಾಯಿ ಕನಸು. ಆದರೆ, ಮನೆಯಲ್ಲಿ ದುಡಿಯುವುದು ಈ ತಾಯಿ ಮಾತ್ರ. ಬೇರೆ ಯಾರ ಆಸರೆ ಇಲ್ಲದೇ, ಅಂಗನವಾಡಿಯಲ್ಲಿ ಆಯಾ ಕೆಲಸ ಮಾಡಿಕೊಂಡು ಮಕ್ಕಳನ್ನು ದಡ ಸೇರಿಸುವ ಆ ತಾಯಿಯ ಕನಸು ನನಸಾಗುವ ಸಮಯ ಹತ್ತಿರವಾಗುತ್ತಿದೆ. ಬಡತನದ ಬೇಗೆಯ ನಡುವೆ ಈಕೆಯ ಮಗಳು ಮಾಡಿರುವ ಸಾಧನೆ ಕರುನಾಡು ಮೆಚ್ಚುವಂತದ್ದು.
ಇಂಥ ಸಾಧನೆ ಮಾಡಿರುವುದು ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ಮಂಟಪ ಮೆಟ್ಟಿಲು ಹೊಳೆ ರಸ್ತೆಯ ಶಿಬಾರ ಸರ್ಕಲ್‌ನ ಎಸ್ಎಸ್‌ಕೆ ಕಲ್ಯಾಣ ಮಂಟಪದ ಬಳಿ ವಾಸ ಇರುವ ದಿವಂಗತ ಮಂಜುನಾಥ್ ಹಾಗೂ ಲತಾ ದಂಪತಿಯ ಎರಡನೇ ಪುತ್ರಿ ವೈ. ಎಂ. ಭೂಮಿಕಾ. ಕರ್ನಾಟಕದ ಹರಿಹರದಿಂದ ವೈ. ಎಂ. ಭೂಮಿಕಾ ಭಾರತೀಯ ನೌಕಾದಳಕ್ಕೆ ಆಯ್ಕೆಯಾಗಿರುವ ಏಕೈಕ ಅಭ್ಯರ್ಥಿಯಾಗಿದ್ದಾರೆ.

ನೌಕಾದಳಕ್ಕೆ ಆಯ್ಕೆಯಾದವರ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ಈ ಪೈಕಿ ಕರ್ನಾಟಕದಿಂದ ಆಯ್ಕೆಯಾಗಿರುವ ಭೂಮಿಕಾ ಹರಿಹರ, ದಾವಣಗೆರೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಕೀರ್ತಿ ತಂದು ಎಲ್ಲರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಈಕೆಯ ಸಾಧನೆ ಹಿಂದಿನ ಪ್ರೇರಕ ಶಕ್ತಿ ಅಂದರೆ ಈಕೆ ತಾಯಿ ಲತಾ.
ಬಡತನದಲ್ಲೇ ಮಕ್ಕಳ ಭವಿಷ್ಯ ರೂಪಿಸಿದ ತಾಯಿ
ಕಳೆದ ಆರು ವರ್ಷಗಳ ಹಿಂದೆ ಮಂಜುನಾಥ್ ಅವರು, ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಕಾಕೊಳ ಗ್ರಾಮದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದರು. ಆಗ ಮೂವರು ಮಕ್ಕಳ ಜೊತೆ ಲತಾ ಅವರು ದಿಕ್ಕೆಟ್ಟು ಕುಳಿತಿದ್ದರು. ಮನೆಯಲ್ಲಿ ಬಡತನ ಸುಡುತ್ತಿದ್ದರೂ ಇದಕ್ಕೆ ಪ್ರತಿರೋಧವೆಂಬಂತೆ ನಿಂತು ತನ್ನ ದುಡಿಮೆಯಲ್ಲಿ ಮಕ್ಕಳ ಬದುಕು ರೂಪಿಸಬೇಕು ಎಂಬ ಪಣತೊಟ್ಟರು. ಅಂಗನವಾಡಿಯಲ್ಲಿ ಆಯಾ ಕೆಲಸ ಮಾಡುತ್ತಿದ್ದರೂ, ಬರುತ್ತಿದ್ದ ಆದಾಯವೂ ಕಡಿಮೆ.

ಈ ಆದಾಯದಲ್ಲಿ ಮನೆ ನಡೆಯಬೇಕು, ಮಕ್ಕಳ ಓದು, ಬಟ್ಟೆ, ಪಠ್ಯಪುಸ್ತಕ ಸೇರಿದಂತೆ ಇತರೆ ಖರ್ಚು ಹೊಂದಿಸುವುದು ತುಂಬಾನೇ ಕಷ್ಟವಾಗಿತ್ತು. ಆದರೂ ಎದೆಗುಂದದೇ ಮಕ್ಕಳ ಬದುಕಿಗೆ ತಮ್ಮ ಜೀವನ ಮುಡುಪಾಗಿಟ್ಟಿದ್ದರು. ಈಗ ಮಗಳ ಸಾಧನೆ ತಾಯಿಯ ಕಷ್ಟವೆಲ್ಲಾ ನಿವಾರಣೆಯಾಗುವ ಕಾಲ ಸನ್ನಿಹಿತವಾಗುತ್ತಿದೆ.
ಭೂಮಿಕಾ ಬಾಲ್ಯ ಜೀವನ
ಭೂಮಿಕಾ ಬಾಲ್ಯ ಎಲ್ಲರಂತಿಲ್ಲ. ಒಂದೆಡೆ ತಂದೆ ಕಳೆದುಕೊಂಡ ನೋವು, ಮತ್ತೊಂದೆಡೆ ತಾಯಿಯೇ ಆಶಾಗೋಪುರ. ಅಮ್ಮನೇ ಎಲ್ಲವೂ. ಆಕೆ ಕಷ್ಟವನ್ನು ಕಣ್ಣಾರೆ ಕಂಡಾಕೆ. ಜೀವನದಲ್ಲಿ ಏನನ್ನಾದರೂ ಸಾಧಿಸಿ ತಾಯಿಯ ಕಣ್ಣೀರು, ಬಡತನದ ಬದುಕು ಬದಲಾಯಿಸಬೇಕೆಂಬ ಹಠ ತೊಟ್ಟವರು. ದಾವಣಗೆರೆಯಲ್ಲಿ 1 ಹಾಗೂ 2 ನೇ ತರಗತಿಯನ್ನು ರಶ್ಮಿ ಶಾಲೆಯಲ್ಲಿ ಓದಿದ ಈಕೆ ಹಾಸ್ಟೆಲ್‌ನಲ್ಲಿದ್ದರು. 3 ರಿಂದ 7ನೇ ತರಗತಿಯವರೆಗೆ ಹರಿಹರ ಜಿ ಹೆಚ್ ಪಿ ಎಸ್ ಶಾಲೆಯಲ್ಲಿ ಅಭ್ಯಾಸ ಮಾಡಿದ ಭೂಮಿಕಾ, 8ರಿಂದ 10ನೇ ತರಗತಿಯವರೆಗೆ ಸುತ್ತೂರಿನ ಜೆಎಸ್‌ಎಸ್ ಶಾಲೆಯಲ್ಲಿ ಓದಿದರು.

ಮೈಸೂರಿನ ದೊಡ್ಡಕಾನ್ಯ ಮೊರಾರ್ಜಿ ದೇಸಾಯಿ ರೆಸಿಡೆನ್ಶಿಯಲ್ ವಿದ್ಯಾರ್ಥಿನಿಯರ ಕಾಲೇಜು ಹಾಗೂ ಬೆಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಫಾರ್ಮಸಿ ಅಭ್ಯಾಸ ಮಾಡಿದರು. ಆ ಬಳಿಕ ಭಾರತೀಯ ನೌಕಾದಳಕ್ಕೆ ಅರ್ಜಿ ಆಹ್ವಾಸನಿಸಲಾಗಿತ್ತು.
ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದಿದ್ದ ಭೂಮಿಕಾ ಕರ್ನಾಟಕದಿಂದ ಆಯ್ಕೆಯಾಗಿರುವ ಏಕೈಕ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸದ್ಯಕ್ಕೆ ತರಬೇತಿ ಪಡೆದು ಆ ಬಳಿಕ ಕೆಲಸಕ್ಕೆ ಹೋಗಲಿದ್ದಾರೆ.
ಹರಿಹರ ಪಟ್ಟಣದ ಬಡ ಕುಟುಂಬದಲ್ಲಿ ಜನಿಸಿದ ಭೂಮಿಕಾ ಇಂದು ದೇಶದ ಪ್ರತಿಷ್ಠಿತ ಭಾರತೀಯ ನೌಕಾದಳಕ್ಕೆ ಆಯ್ಕೆಯಾಗುವ ಮೂಲಕ ಬೆಂಕಿಯಲ್ಲಿ ಅರಳಿದ ಹೂವು ಎಂಬಂತೆ ಬಡತನಕ್ಕೆ ಸೆಡ್ಡು ಹೊಡೆದು ಜೀವನದಲ್ಲಿ ಅತ್ಯುನ್ನತ ಹುದ್ದೆ ಅಲಂಕರಿಸಲಿ ಎಂಬುದು ಶಿಕ್ಷಕರು ಹಾಗೂ ಹರಿಹರ ಪಟ್ಟಣದ ಜನರ ಆಶಯವಾಗಿದೆ..
ಪ್ರತಿನಿತ್ಯ 4 ಗಂಟೆಗಳ ಸತತ ಅಭ್ಯಾಸ
ಈ ಬಗ್ಗೆ ಮಾತನಾಡಿದ ಭೂಮಿಕಾ,ಚಭಾರತೀಯ ನೌಕಾದಳಕ್ಕೆ ನಿತ್ಯವೂ ಸಿದ್ಧತೆ ಮಾಡಿಕೊಳ್ಳುತ್ತಿದ್ದೆ. ಬೆಳಗ್ಗೆ ಹಾಗೂ ಸಂಜೆ ಸುಮಾರು ಮೂರರಿಂದ 4 ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದೆ. ಸಾಮಾಜಿಕ ಜಾಲತಾಣ ಬಳಸುತ್ತಿರಲಿಲ್ಲ. ಫೋನ್‌ನಲ್ಲಿ ಹೆಚ್ಚು ಹೊತ್ತು ಸಮಯ ಕಳೆಯುತ್ತಿರಲಿಲ್ಲ. ಓದುತ್ತಿದ್ದೆ, ನೌಕಾದಳಕ್ಕೆ ಸಂಬಂಧಿಸಿದ ಮಾಹಿತಿ ಕಲೆ ಹಾಕಲಷ್ಟೇ ಮೊಬೈಲ್ ಬಳಕೆ ಮಾಡುತ್ತಿದ್ದೆ. ಚಾಟ್ ಕಡಿಮೆ, ವ್ಯಾಟ್ಸಪ್ ಬಳಕೆನೂ ಬಿಟ್ಟುಬಿಟ್ಟಿದ್ದೆ. ಕಷ್ಟಪಟ್ಟು ಓದಿದ ಪರಿಣಾಮ ಈ ಸಾಧನೆ ಸಾಧ್ಯವಾಗಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ












Click it and Unblock the Notifications