ಹೊನ್ನಾಳಿಯ ರೇಣುಕಾಚಾರ್ಯರ ಕಚೇರಿಯಲ್ಲಿ ಕೊಳೆಯುತ್ತಿದೆ ಲೋಡುಗಟ್ಟಲೆ ಪರಿಹಾರ ಸಾಮಗ್ರಿ

ದಾವಣಗೆರೆ, ಡಿಸೆಂಬರ್ 16: ರಾಜ್ಯದಲ್ಲಿ ಕೆಲವೇ ತಿಂಗಳುಗಳ ಹಿಂದೆ ಸಂಭವಿಸಿದ ಪ್ರವಾಹದಿಂದಾಗಿ ತತ್ತರಿಸಿದ ಜನರ ಚಿತ್ರ ಇನ್ನೂ ಕಣ್ಣಿಂದ ಮಾಸಿಲ್ಲ. ಭಾರೀ ಮಳೆಗೆ ಸಿಲುಕಿ, ಪ್ರವಾಹ ಉಂಟಾಗಿ ಜನರು ಅನುಭವಿಸಿದ ಸಂಕಷ್ಟಗಳೂ ಮರೆಯುವಂತಿಲ್ಲ. ದಾವಣಗೆರೆಯಲ್ಲೂ ತುಂಗಾ ನದಿ ಉಕ್ಕಿ ಹರಿದು ಜನರು ಕಷ್ಟಕ್ಕೆ ಒಳಗಾದರು. ಈ ಜನರ ನೋವಿಗೆ ಸ್ಪಂದಿಸಿ ಆ ಸಂದರ್ಭ ರಾಜ್ಯದ ಎಲ್ಲೆಡೆಯಿಂದಲೂ ನೆರವು ಹರಿದುಬಂದಿತು.

ಆದರೆ ಈ ನೆರವು ಎಷ್ಟರ ಮಟ್ಟಕ್ಕೆ ಸಾರ್ಥಕವಾಯಿತು? ನಿಜವಾಗಿಯೂ ನೆರವು ನೀಡಲೆಂದು ಕಳಿಸಿದ ವಸ್ತುಗಳು ಸಂತ್ರಸ್ತರನ್ನು ತಲುಪಿದವೇ? ದಾವಣಗೆರೆಯಲ್ಲಿ ಶಾಸಕರ ಜನ ಸಂಪರ್ಕ ಕಚೇರಿಯನ್ನು ನೋಡಿದರೆ ಈ ಪ್ರಶ್ನೆಗೆ ಉತ್ತರ ಸಿಗಬಹುದು.

 ಜನ ಸಂಪರ್ಕ ಕೇಂದ್ರದಲ್ಲಿ ಲೋಡ್ ಗಟ್ಟಲೆ ಸಾಮಗ್ರಿ

ಜನ ಸಂಪರ್ಕ ಕೇಂದ್ರದಲ್ಲಿ ಲೋಡ್ ಗಟ್ಟಲೆ ಸಾಮಗ್ರಿ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸುತ್ತಮುತ್ತ ನಾಲ್ಕೈದು ತಿಂಗಳ ಹಿಂದೆ ಹೊನ್ನಾಳಿ ಸೇರಿದಂತೆ ಹಲವು ಕಡೆ ತುಂಗಭದ್ರಾ ನದಿಯ ನೀರು ಹೆಚ್ಚಾಗಿ ಪ್ರವಾಹ ಸಂಭವಿಸಿತ್ತು. ಇದರಿಂದ ಹಲವು ಗ್ರಾಮದ ಜನರು ನಿರಾಶ್ರಿತರಾದರು. ಆ ಜನರಿಗೆ ಹಲವು ಕಡೆಯಿಂದ ಸಾಮಗ್ರಿಗಳನ್ನು ಹಾಗೂ ದವಸ ಧಾನ್ಯಗಳನ್ನು ನೀಡಿದ್ದರು.‌ ಆದರೆ ಶಾಸಕ ರೇಣುಕಾಚಾರ್ಯ ಅವರಿಗೆ ಒಪ್ಪಿಸಿದ ಸಾಮಗ್ರಿಗಳನ್ನು ನಿರಾಶ್ರಿತರಿಗೆ ಒಪ್ಪಿಸಿದೆ ಶಾಸಕರ ಜನ ಸಂಪರ್ಕ ಕೇಂದ್ರದಲ್ಲಿ ಸಂಗ್ರಹಿಸಿಟ್ಟಿದ್ದಾರೆ.

 ನಾಶವಾಗುತ್ತಿದೆ ಕ್ವಿಂಟಾಲ್ ಗಟ್ಟಲೆ ಪರಿಹಾರ ಸಾಮಗ್ರಿ

ನಾಶವಾಗುತ್ತಿದೆ ಕ್ವಿಂಟಾಲ್ ಗಟ್ಟಲೆ ಪರಿಹಾರ ಸಾಮಗ್ರಿ

ಸಂತ್ರಸ್ತರಿಗೆ ಈ ಸಾಮಗ್ರಿಗಳನ್ನು ತಲುಪಿಸದೆ ಕ್ವಿಂಟಾಲ್ ಗಟ್ಟಲೆ ದವಸ ಧಾನ್ಯಗಳು ಹಾಳಾಗಿವೆ. ಹೀಗೆ ವ್ಯರ್ಥವಾಗಿ ಧಾನ್ಯಗಳನ್ನು ಸಂಗ್ರಹಿಸಿಟ್ಟು, ತಮಗೂ ಕೊಡದೇ ಕೊಳೆಯುವಂತೆ ಮಾಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

 ಘಟನೆಗೆ ರೇಣುಕಾಚಾರ್ಯ ಸ್ಪಷ್ಟನೆ

ಘಟನೆಗೆ ರೇಣುಕಾಚಾರ್ಯ ಸ್ಪಷ್ಟನೆ

ಜನ ಸಂಪರ್ಕ ಕೆಂದ್ರದಲ್ಲಿ ದವಸ ಧಾನ್ಯಗಳನ್ನು ಸಂಗ್ರಹಿಸಿಟ್ಟಿರುವ ವಿಚಾರ ಬೆಳಕಿಗೆ ಬರುತ್ತಿದ್ದಮತೆ, ಘಟನಾ ಸ್ಥಳಕ್ಕೆ ಶಾಸಕ ರೇಣುಕಾಚಾರ್ಯ ಬಂದು ಪರಿಶೀಲಿಸಿದರು. "ಹೊನ್ನಾಳಿಯಲ್ಲಿರುವ ನನ್ನ ಕಚೇರಿಗೆ ಇದೂವರೆಗೂ ನಾನು ಕಾಲಿಟ್ಟಿಲ್ಲ. 46 ಲಕ್ಷವನ್ನು ಹಣ ಸಿಎಂ ಪರಿಹಾರ ನಿಧಿಗೆ ನೀಡಲಾಗಿದೆ‌. ರೈತರು ಕೊಟ್ಟ ಹಣ ಬ್ಯಾಂಕಿಗೆ ಹೋಗಿದೆ. 7000 ಬಟ್ಟೆ, 35 ಸಾವಿರ ಕ್ವಿಂಟಾಲ್ ಅಕ್ಕಿಯನ್ನು ತಹಶೀಲ್ದಾರರಿಗೆ ನೀಡಲಾಗಿದೆ. ತಹಶೀಲ್ದಾರ್ ಡಿಸಿ ಜನರಿಗೆ ತಲುಪಿಸುವುದಾಗಿ ಹೇಳಿದ್ದರು.‌

 ಇನ್ನೊಂದು ವಾರದಲ್ಲಿ ತಲುಪಿಸುವ ಭರವಸೆ

ಇನ್ನೊಂದು ವಾರದಲ್ಲಿ ತಲುಪಿಸುವ ಭರವಸೆ

ಇಷ್ಟು ತಿಂಗಳಾದರೂ ಈ ಸಾಮಗ್ರಿಗಳು ಜನರಿಗೆ ತಲುಪಿಲ್ಲ. ಆದರೆ "ಈ ಸಾಮಗ್ರಿಗಳನ್ನು ಜನರಿಗೆ ತಲುಪಿಸುವಲ್ಲಿ ವಿಳಂಬವಾಗಿದೆ. ಈ ಬಗ್ಗೆ ಕಾಂಗ್ರೆಸ್ ನವರು ದೂರು‌ ನೀಡಿದ್ದಾರೆ. ಯಾವುದೇ ಸಾಮಗ್ರಿಗಳು ದುರ್ಬಳಕೆ ಆಗಿಲ್ಲ. ಇದು ಅಧಿಕಾರಿಗಳ ವಿಳಂಬ ಅಲ್ಲ, ನನ್ನ ವಿಳಂಬ" ಎಂದಿದ್ದಾರೆ ರೇಣುಕಾಚಾರ್ಯ. ಇನ್ನೊಂದು ವಾರದಲ್ಲಿ ಸಾಮಗ್ರಿಗಳನ್ನು ಸಂತ್ರಸ್ತರಿಗೆ ವಿತರಣೆ ಮಾಡುತ್ತೇನೆ. ಯಾವುದೇ ವಸ್ತುಗಳು ಹಾಳಾಗಿಲ್ಲ. ಸಂತ್ರಸ್ತರಿಗೆ ಕೊಡುವಂತಹ ಪ್ರಯತ್ನ ಮಾಡುತ್ತೇವೆ ಎಂದು ರೇಣುಕಾಚಾರ್ಯ ಸ್ಪಷ್ಟೀಕರಣ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+