ಹರಿಹರದಲ್ಲಿ ಬೆಂಕಿಯ ರೌದ್ರನರ್ತನ: ಸುಟ್ಟು ಕರಕಲಾದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು
ದಾವಣಗೆರೆ, ನವೆಂಬರ್ 27: ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಹರಿಹರ ನಗರದ ಶಿವಮೊಗ್ಗ ರಸ್ತೆಯಲ್ಲಿನ ಬೊಂಗಾಳೆ ಸರ್ಕಲ್ ಬಳಿಯ ವಾಣಿಜ್ಯ ಮಳಿಗೆಗಳು ಹೊತ್ತಿ ಉರಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಫ್ಲೋರಿಂಗ್, ಫರ್ನಿಷಿಂಗ್ ವಸ್ತುಗಳು ಅಗ್ನಿಗೆ ಆಹುತಿಯಾಗಿವೆ. ಹರಿಹರ ನಗರದಲ್ಲಿರುವ ಶಿವಮೊಗ್ಗ ರಸ್ತೆಯ ನವರತ್ನ ಜ್ಯೂವೆಲರ್ಸ್ ಎದುರು ಈ ಘಟನೆ ನಡೆದಿದೆ.

ಮಿಠಾಯಿ ಮಂಜುನಾಥ ಮಾಲೀಕತ್ವದ ವಾಣಿಜ್ಯ ಸಂಕೀರ್ಣ ಇದಾಗಿದ್ದು, ಪ್ರಭಾಕರ್ ಫ್ಲೋರಿಂಗ್ ಫರ್ನಿಷಿಂಗ್, ಪ್ರಶಾಂತ ಜ್ಯೂವೆಲರ್ಸ್, ಮಮತಾ ವಾಚ್ ಸೆಂಟರ್ ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿಯ ಕೆನ್ನಾಲಿಗೆಗೆ 25 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ ಎಂದು ಅಂದಾಜಿಸಲಾಗಿದೆ.

ಹರಿಹರ, ಕುಮಾರಪಟ್ಟಣ ಹಾಗೂ ದಾವಣಗೆರೆಯ 6 ಅಗ್ನಿಶಾಮಕ ವಾಹನ ಹಾಗೂ ಸಿಬ್ಬಂದಿ ಬೆಂಕಿ ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ. ಹರಿಹರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.












Click it and Unblock the Notifications