ವಿಷ್ಣು ವೇಷ ಹಾಕಿ 51 ಕೆ.ಜಿ. ಕೇಕ್ ಕತ್ತರಿಸಿದ ವಿಷ್ಣುವರ್ಧನ್ ಅಭಿಮಾನಿ

ದಾವಣಗೆರೆ, ಸೆಪ್ಟೆಂಬರ್ 18: ದಿವಂಗತ ನಟ ವಿಷ್ಣುವರ್ಧನ್ ಅವರ ಹುಟ್ಟುಹಬ್ಬವನ್ನು ರಾಜ್ಯದೆಲ್ಲೆಡೆ ಅಭಿಮಾನಿಗಳು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಅದೇ ರೀತಿ ದಾವಣಗೆರೆಯಲ್ಲೂ ಅಭಿಮಾನಿಯೊಬ್ಬರು ತಮ್ಮದೇ ರೀತಿಯಲ್ಲಿ ತನ್ನ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸಿ ಗಮನ ಸೆಳೆದಿದ್ದಾರೆ.

ನಟ ವಿಷ್ಣುವರ್ಧನ್ ಅವರ ಕಟ್ಟಾ ಅಭಿಮಾನಿ ದಾವಣಗೆರೆಯ ಲೋಕೇಶ್ ಈ ಬಾರಿ ಭಿನ್ನವಾಗಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ವಿಷ್ಣುವರ್ಧನ್ ಅವರ ಪಾತ್ರವೊಂದರ ಉಡುಪು ಧರಿಸಿ, 51 ಕೆ.ಜಿಯ ಕೇಕ್ ಕತ್ತರಿಸುವ ಮೂಲಕ ಆಚರಿಸಿದ್ದಾರೆ.

Fan Celebrated Vishnuvardhan Birthday By Cutting 51kg Cake In Davanagere

ನಗರದ ಕೆಎಸ್ಆರ್ ಟಿಸಿ ಮುಂಭಾಗದ ಭರತ್ ಡಾಬಾದಲ್ಲಿ ಬೀಡಾ ಸ್ಟಾಲ್ ಹಾಕಿಕೊಂಡು ಜೀವನ ನಡೆಸುತ್ತಿರುವ ಲೋಕೇಶ್, ಪ್ರತಿನಿತ್ಯವೂ ಸಾಹಸ ಸಿಂಹ ವಿಷ್ಣು ಅವರ ಪಾತ್ರದ ವೇಷಭೂಷಣ ಹಾಕಿಕೊಂಡು ಗ್ರಾಹಕರನ್ನು ಆಕರ್ಷಿಸುತ್ತಿದ್ದರು. ಇಂದು ಬೃಹತ್ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಜೊತೆಗೆ ವಿಷ್ಣುವರ್ಧನ್ ಅವರ ಹಾಡಿಗೆ ಹೆಜ್ಜೆ ಹಾಕಿ ಸಂತಸಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+