ದಾವಣಗೆರೆ: ಮಕ್ಕಳಲ್ಲಿ ಐ ವೈರಸ್ ಸೋಂಕು.!, ರೋಗ ಲಕ್ಷಣಗಳು & ವೈದ್ಯರ ಸಲಹೆಗಳೇನು?
ದಾವಣಗೆರೆ, ಜುಲೈ, 23: ದಾವಣಗೆರೆ ಜಿಲ್ಲೆಯಲ್ಲಿ ಐ ವೈರಸ್ ಸೋಂಕಿಗೆ ತುತ್ತಾಗುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಲಿದ್ದು, ಇದರಿಂದ ಮಕ್ಕಳ ಪೋಷಕರು ಆತಂಕಕ್ಕೆ ಒಳಗಾಗಿದ್ದರು. ನಂತರ ವೈದ್ಯರೊಬ್ಬರು ಈ ರೋಗದಿಂದ ಪಾರಾಗಲು ಕೆಲವು ಸಲಹೆಗಳನ್ನು ನೀಡಿ ಮಕ್ಕಳ ಪೋಷಕರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದಾರೆ.
ಇಡೀ ಪ್ರಪಂಚ ನೋಡಲು ನೇತ್ರ ಅವಶ್ಯಕವಾಗಿದೆ. ಕಣ್ಣು ಇಲ್ಲ ಅಂದರೆ ಈ ಪ್ರಪಂಚವನ್ನೇ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಮಕ್ಕಳ ಕಣ್ಣಿಗೆ ಏನಾದರೂ ಆದರೆ ಪೋಷಕರು ಭಯ ಬೀಳುವುದು ಸಹಜವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಸಾವಿರಾರು ಮಕ್ಕಳಿಗೆ ಕಣ್ಣು ಬೇನೆ ಅಥವಾ ಐ ವೈರಸ್ ಕಾಡಲಾರಂಭಿಸಿದೆ.

ಜಿಟಿ ಜಿಟಿ ಮಳೆ ಸುರಿಯುತ್ತಿರುವ ಹಿನ್ನೆಲೆ ದಾವಣಗೆರೆ ಜಿಲ್ಲೆ ಈ ಬಾರಿ ಥೇಟ್ ಮಲೆನಾಡಿನಂತಾಗಿದೆ. ಪರಿಣಾಮ ಜಿಲ್ಲೆಯ ಬಹುತೇಕ ಮಂದಿಗೆ ಚಳಿ, ಜ್ವರ, ಶೀತ, ಕೆಮ್ಮು, ತಲೆನೋವು ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಈಗ ಮಕ್ಕಳಲ್ಲಿ ಕಾಣಿಸಿಕೊಂಡಿರುವ ಕಣ್ಣಿನ ಬೇನೆ ಪೋಷಕರನ್ನು ತಲ್ಲಣಗೊಳ್ಳುವಂತೆ ಮಾಡಿದೆ.
ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬಂದಿರುವ ಕಣ್ಣು ಬೇನೆ ಅಥವಾ ಐ ವೈರಸ್‌ನಿಂದ ಪೋಷಕರು ಆತಂಕಕ್ಕೆ ಒಳಗಾಗಿದ್ದರು. ಅಲ್ಲದೆ ಎದ್ನೋ ಬಿದ್ನೋ ಎಂಬಂತೆ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಇನ್ನು ಮಳೆಗಾಲದ ವೇಳೆ ಸಾಮಾನ್ಯವಾಗಿ ಕಂಡುಬರುವ ಮದ್ರಾಸ್ ಐ ರೀತಿಯಾದ ಒಂದು ವೈರಸ್ ಇದಾಗಿದ್ದು, ಜಿಲ್ಲೆಯಲ್ಲಿ ಸಾವಿರಾರು ಮಕ್ಕಳಲ್ಲಿ ಈ ಬೇನೆ ಕಂಡುಬಂದಿದೆ.
ರೋಗ ಹರಡಲು ಕಾರಣವೇನು?
ಮಕ್ಕಳನ್ನು ಶಾಲೆಗೆ ಕಳುಹಿಸುವುದರಿಂದ ಆಗಾಗ್ಗೆ ಕಣ್ಣು ಮುಟ್ಟಿಕೊಳ್ಳುತ್ತಾರೆ. ಜೊತೆಗೆ ಎಲ್ಲಾ ಮಕ್ಕಳ ಜೊತೆ ಆಟವಾಡುತ್ತಾರೆ. ಇಲ್ಲಿ ಅಂತರ ಕಡಿಮೆ ಇರುತ್ತದೆ. ಮಕ್ಕಳು ಸ್ವಲ್ಪ ಕಣ್ಣು ನೋವಾದರೂ ಉಜ್ಜಿಕೊಳ್ಳುತ್ತಾರೆ. ವಾತಾವರಣವೂ ತಂಪಾಗಿರುವ ಕಾರಣಕ್ಕೆ ವೇಗವಾಗಿ ಈ ಸೋಂಕು ಹರಡುತ್ತಿದೆ.
ದೃಷ್ಟಿ ತಜ್ಞರು ಹೇಳಿದ್ದೇನು?
ದೃಷ್ಟಿ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ಹೆಚ್. ಎಂ. ರವೀಂದ್ರನಾಥ್ ಮಾತನಾಡಿ, ಈಗಾಗಲೇ 450 ರಿಂದ 500 ಮಕ್ಕಳನ್ನು ನೋಡಿದ್ದೇನೆ. ಮಕ್ಕಳ ಕಣ್ಣಿನ ಭಾವು ಹೆಚ್ಚಾಗಿರುವ ಕಾರಣ ಪೋಷಕರು ಆತಂಕಕ್ಕೆ ಒಳಗಾಗಿದ್ದರು. ಅಲ್ಲದೆ ಮಕ್ಕಳಲ್ಲಿ ಶೀತ, ಜ್ವರ, ಸ್ವಲ್ಪ ಕೆಮ್ಮು, ತಲೆನೋವು, ಮೈ ಕೈ ಸುಸ್ತು ಎಂದು ಹೇಳಿದ್ದಾರೆ. ಆದರೆ ಅವರಿಗೆ ಏನೂ ತೊಂದರೆ ಇಲ್ಲ ಎಂದು ವೃದ್ಯರು ಸ್ಪಷ್ಟಪಡಿಸಿದ್ದಾರೆ.
ಮಕ್ಕಳ ಪೋಷಕರಿಗೆ ಧೈರ್ಯ ತುಂಬಿದ ವೈದ್ಯರು
ಮಳೆಗಾಲದ ವೇಳೆ ಸಾಮಾನ್ಯವಾಗಿ ಹರಡುವ ವೈರಸ್ ಇದಾಗಿದೆ. ಮದ್ರಾಸ್ ಐ ನಂತೆ ಪರಿಣಾಮಕಾರಿಯಾಗಿಲ್ಲ. ಆದ್ದರಿಂದ ಯಾವುದೇ ಸಮಸ್ಯೆಯೂ ಆಗುವುದಿಲ್ಲ. ಪೋಷಕರು ಹೆದರುವ ಅವಶ್ಯಕೆ ಇಲ್ಲ. ಇದೊಂದು ವೈರಸ್, ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈಗ ತಂಪು ವಾತಾವರಣ ಹೆಚ್ಚಾಗಿರುವ ಕಾರಣ ಈ ವೇಳೆ ವೈರಸ್ ಹೆಚ್ಚಾಗಿ ಹರಡುತ್ತದೆ ಅಷ್ಟೇ. ಇದರಿಂದ ಯಾವ ತೊಂದರೆಯೂ ಇಲ್ಲ ಎಂದು ಹೇಳಿದ್ದಾರೆ.
ಆದರೆ ಈಗ ಕಾಣಿಸಿಕೊಂಡಿರುವ ವೈರಸ್ ಮೈಲ್ಡ್ ಆಗಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗುವ ಅವಶ್ಯಕತೆ ಇಲ್ಲ. ನಾನು ಸಹ 450 ರಿಂದ 500 ಮಕ್ಕಳನ್ನು ನೋಡಿದ್ದೇನೆ. ಹಾಗೆಯೇ ಪೋಷಕರು ಯಾವುದೇ ರೀತಿಯ ಆತಂಕ, ಭಯ ಪಡಬಾರದು ಎಂದು ಧೈರ್ಯ ತುಂಬಿದ್ದೇನೆ ಎಂದರು.
ಮಕ್ಕಳ ತಜ್ಞ ವೈದ್ಯರು ಹೇಳಿದ್ದೇನು?
ಮಕ್ಕಳ ಕಣ್ಣಿನಲ್ಲಿ ಪಿಸಿರು ಬರುತ್ತದೆ. ಇದು ಸ್ವಲ್ಪ ನೋವು ಆಗುತ್ತದೆ. ಮಳೆ ಹೆಚ್ಚಿರುವುದರಿಂದ ಈ ವಾತಾವರಣಕ್ಕೆ ಹೆಚ್ಚು ಈ ವೈರಸ್ ಹರಡುತ್ತದೆ. ಇದರಿಂದ ವೈರಲ್ ಫೀವರ್ ಬರುತ್ತಿದೆ ಅಷ್ಟೇ. ಜೊತೆಗೆ ಮೈಕೈ ನೋವು, ತಲೆನೋವು, ಶೀತ, ಸ್ವಲ್ಪ ಕೆಮ್ಮು ಬರುತ್ತಿದೆ. ಆಮೇಲೆ ಕಣ್ಣಿನ ಬೇನೆ ಶುರುವಾಗುತ್ತದೆ ಎಂದು ತಿಳಿಸಿದ್ದಾರೆ.
ರೋಗದ ಗುಣ ಲಕ್ಷಣಗಳೇನು?
1. ಕಣ್ಣಿನಲ್ಲಿ ಪಿಸುರು ಬರುವುದು.
2. ಕಣ್ಣು ಊದಿಕೊಲ್ಲೂವುದು.
3. ಮೂರರಿಂದ ಐದು ದಿನ ಇರುತ್ತದೆ
4. ಐದು ದಿನಗಳ ಬಳಿಕ ಸರಿ ಹೋಗುತ್ತದೆ.
5. ಇದು ಕಣ್ಣಿನ ತುರಿಕೆ ಅಲ್ಲ
6. ಕಣ್ಣು ಕೆಂಪಗಾಗುತ್ತದೆ.
ರೋಗದಿಂದ ಪಾರಾಗಲು ಏನು ಮಾಡಬೇಕು?
1. ಮೇಲಿಂದ ಮೇಲೆ ಕೈ ತೊಳೆಯಬೇಕು.
2. ಕಣ್ಣು ಆಗಾಗ್ಗೆ ಮುಟ್ಟುಕೊಳ್ಳಬಾರದು.
3. ಸ್ಯಾನಿಟೈಸರ್ ಬಳಕೆ ಮಾಡುವುದು ಒಳ್ಳೆಯದು
4. ಫಿಲ್ಟರ್ (ಶುದ್ಧ) ನೀರನ್ನೇ ಬಳಸಬೇಕು.
5. ಸೋಂಕಿತ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ
6. ಕಣ್ಣುಗಳನ್ನು ಮುಟ್ಟಿದಾಗ - ಮುಟ್ಟುವ ಮುನ್ನ ಕೈತೊಳೆದುಕೊಳ್ಳಬೇಕು
7. ಐ ಡ್ರಾಪ್ಸ್, ಬೆಡ್ ಶೀಟ್, ಟವೆಲ್, ಸೌಂದರ್ಯವರ್ಧಕ, ಮೊಬೈಲ್ ಪೋನ್ ಪ್ರತ್ಯೇಕವಾಗಿ ಬಳಸಿ
8. ಕಣ್ಣು ಒರೆಸಲು ಕರವಸ್ತ್ರಗಳ ಬದಲಿಗೆ ಟಿಶ್ಯೂ ಪೇಪರ್ ಬಳಸಿದರೆ ಉತ್ತಮ
ವೈದ್ಯರು ನೀಡುವ ಸಲಹೆ ಏನು?
ನಗರದ ನಾನಾ ಆಸ್ಪತ್ರೆಗಳಲ್ಲಿ ಕೆಲ ದಿನಗಳಿಂದ ನೂರಾರು ಮಕ್ಕಳನ್ನು ಕಣ್ಣಿನ ಬೇನೆ ಚಿಕಿತ್ಸೆಗಾಗಿ ಕರೆತರುತ್ತಿದ್ದಾರೆ. ದಿನೇ ದಿನೇ ಆಸ್ಪತ್ರೆಗೆ ಕರೆದುಕೊಂಡು ಬರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕೆಲವೆಡೆ ಹಿರಿಯರಲ್ಲಿಯೂ ಇದು ಕಾಣಿಸಿಕೊಂಡಿದೆ. ಜೊತೆಗೆ ಹಾಸ್ಟೆಲ್‌ಗಳಲ್ಲಿ ಓದುತ್ತಿರುವ ಮಕ್ಕಳಲ್ಲಿ ಬೇಗನೇ ಕಣ್ಣಿನ ಬೇನೆ ಕಾಣಿಸಿಕೊಳ್ಳುತ್ತಿದೆ. ಊಟ, ಕೊಠಡಿಗಳಲ್ಲಿ ಮೂರರಿಂದ ನಾಲ್ಕು ವಿದ್ಯಾರ್ಥಿಗಳು ಇರುವುದರಿಂದ ಬೇಗನೇ ಒಬ್ಬರಿಂದ ಒಬ್ಬರಿಗೆ ಸೋಂಕು ತಗುಲುತ್ತಿದೆ.
ಸಾಮಾನ್ಯವಾಗಿ ಮಳೆಗಾಲದಲ್ಲಿ ಕಣ್ಣಿನ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಬಿಸಿಲಿನಲ್ಲಿ ಒಂದು ರೀತಿಯ ಸಮಸ್ಯೆಯಾದರೆ, ಮಳೆಗಾಲದಲ್ಲಿ ಒಂದು ರೀತಿಯ ಸಮಸ್ಯೆ ಕಾಡುತ್ತದೆ. ಕಣ್ಣಿನ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ಕೆಲವೊಂದು ಬ್ಯಾಕ್ಟೀರಿಯಾ ಹಾಗೂ ವೈರಾಣುಗಳು ಹೆಚ್ಚು ಕ್ರಿಯಾಶೀಲ ಆಗಿರುತ್ತವೆ. ಕಣ್ಣು ಕೆಂಪಾಗುವುದು ಸಹ ಕಂಡು ಬರುತ್ತದೆ.
ಪೋಷಕರು ಏನು ಹೇಳುತ್ತಾರೆ?
ನಗರದ ಹಲವು ಶಾಲಾ-ಕಾಲೇಜುಗಳಲ್ಲಿ ಓದುತ್ತಿರುವ ಮಕ್ಕಳಲ್ಲಿ ಕಣ್ಣಿನ ಬೇನೆ ಕಾಣಿಸಿಕೊಂಡಿದೆ ಎಂಬ ಮಾಹಿತಿ ಕೇಳುತ್ತಿದ್ದಂತೆ ಆತಂಕ ಶುರುವಾಗಿತ್ತು. ಆದರೆ ಮಕ್ಕಳು ಸುಸ್ತಾಗುತ್ತದೆ ಎನ್ನುತ್ತಾರೆ. ಕೆಲ ಮಕ್ಕಳ ಕಣ್ಣು ಊದಿಕೊಂಡಿವೆ. ಇದು ಆತಂಕಕ್ಕೂ ಕಾರಣ ಆಗಿತ್ತು. ಸಾವಿರಾರು ಮಕ್ಕಳಿಗೆ ಈ ಸೋಂಕು ತಗುಲಿದ್ದು, ವೈದ್ಯರ ಬಳಿ ತೋರಿಸಿದ ಬಳಿಕ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದೇವೆ ಎಂದು ಪೋಷಕರು ಹೇಳುತ್ತಿದ್ದಾರೆ.
-
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು -
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಶುಷ್ಕ ಹವೆ, ಮುಂದುವರಿದ ಚಂಡಮಾರುತ ಪ್ರಸರಣ ಮಳೆ ನಿರೀಕ್ಷೆ -
Shiva Rajkumar: ಹೆಣ್ಣು ಮಕ್ಕಳು, ನಟಿಯರ ಗೌರವಕ್ಕೆ ಚ್ಯುತಿ ತರಬೇಡಿ ಎಂದ ಶಿವಣ್ಣ: ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ -
ರಾಜ್ಯಸಭೆಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್: ಮಲ್ಲಿಕಾರ್ಜುನ ಖರ್ಗೆ, ಎಚ್ಡಿ ದೇವೇಗೌಡ ರಾಜ್ಯಸಭಾ ಅವಧಿ ಶೀಘ್ರ ಮುಕ್ತಾಯ -
ಮ್ಯಾಕ್ಸ್ವೆಲ್, ಗೇಲ್ ರೆಕಾರ್ಡ್ ಬ್ರೇಕ್: ವಿಶ್ವದಾಖಲೆ ಮಾಡಿದ ಫಿನ್ ಅಲೆನ್ಗೆ ಸಚಿನ್ ತೆಂಡೂಲ್ಕರ್ ವಿಶೇಷ ಸಂದೇಶ -
Petrol - Diesel: ಪೆಟ್ರೋಲ್ - ಡೀಸೆಲ್ ಖರೀದಿಗೆ ಮುಗಿ ಬಿದ್ದ ಜನ ವಿಡಿಯೋ ವೈರಲ್: ಕೇಂದ್ರ ಸರ್ಕಾರ ಹೇಳಿದ್ದೇನು -
ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್-ಸಾನಿಯಾ ಚಾಂದೋಕ್ ಅದ್ಧೂರಿ ವಿವಾಹ -
Gold Rate March 05: ಮಧ್ಯಪ್ರಾಚ್ಯ ಯುದ್ಧದ ನಡುವೆ ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಇಳಿಕೆ: ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka School Fee: ಪ್ರೈವೇಟ್ ಸ್ಕೂಲ್ ಫೀ ಮತ್ತೆ ದುಬಾರಿ: ಶುಲ್ಕ ಹೆಚ್ಚಿಸಲು ಸಜ್ಜಾದ ಖಾಸಗಿ ಶಾಲೆಗಳು, ಪೋಷಕರಲ್ಲಿ ಆತಂಕ -
''ತೆರಿಗೆ ಹೇರುವ ರಾಮಯ್ಯನಿಂದ ರಾಜ್ಯದಲ್ಲಿ 1.15 ಲಕ್ಷ ಕೋಟಿ ಸಾಲದ ಬಜೆಟ್ ಮಂಡನೆ'' -
ಕೈಚೆಲ್ಲಿ ನಿಂತ ಸಿಂಗಂ ಪೊಲೀಸರು, ದೈನೇಸಿ ಸ್ಥಿತಿಗೆ ಜನಸಾಮಾನ್ಯರು: ಪುಂಡರಿಗೆ ಹೆದರಿದ ಬೆಂಗಳೂರು - ರವಿಕೃಷ್ಣಾ ರೆಡ್ಡಿ ಬರಹ -
KEA: ಯುಜಿಸಿಇಟಿ-ಪಿಜಿನೀಟ್ ಅಭ್ಯರ್ಥಿಗಳ ಗಮನಕ್ಕೆ, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ












Click it and Unblock the Notifications