ದಾವಣಗೆರೆಯಲ್ಲೂ ಕಂಪಿಸಿತು ಭೂಮಿ
ನಿನ್ನೆ ಬೆಳಗ್ಗೆ 6: 45 ರ ಸಮಯಕ್ಕೆ ಚಿತ್ರದುರ್ಗ ಮತ್ತು ತುಮಕೂರಿನಲ್ಲಿ 10 ಸೆಕೆಂಡ್ ಗಳ ಕಾಲ ಭೂಮಿ ಕಂಪಿಸಿದ ಸುದ್ದಿ ಮರೆಯಾಗುವ ಮೊದಲೇ ದಾವಣಗೆರೆಯಲ್ಲೂ ಭೂಕಂಪ ಸಂಭವಿಸಿದೆ.
ದಾವಣಗೆರೆ, ಏಪ್ರಿಲ್ 3: ದಾವಣಗೆರೆ ಜಿಲ್ಲೆಯ ಗಾಂಧಿನಗರದಲ್ಲಿ ನಿನ್ನೆ ರಾತ್ರಿ (ಏಪ್ರಿಲ್ 2) ಭೂಮಿ ಕಂಪಿಸಿದ ಅನುಭವವಾಗಿದ್ದು, ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.
ನಿನ್ನೆ (ಏಪ್ರಿಲ್ 2) ಬೆಳಗ್ಗೆ 6: 45 ರ ಸಮಯಕ್ಕೆ ಚಿತ್ರದುರ್ಗ ಮತ್ತು ತುಮಕೂರಿನಲ್ಲಿ 10 ಸೆಕೆಂಡ್ ಗಳ ಕಾಲ ಭೂಮಿ ಕಂಪಿಸಿದ ಸುದ್ದಿ ಮರೆಯಾಗುವ ಮೊದಲೇ ದಾವಣಗೆರೆಯಲ್ಲೂ ಭೂಕಂಪ ಸಂಭವಿಸಿದ್ದು, ಯಾವುದೇ ಸಾವು ನೋವು ಕಂಡುಬಂದ ಬಗ್ಗೆ ವರದಿಯಾಗಿಲ್ಲ.

20 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಮನೆಯ ಗೋಡೆ, ಟೈಲ್ಸ್ ಗಳು ಬಿರುಕುಬಿಟ್ಟಿವೆ. ಇದರಿಂದಾಗಿ ಜನರು ಮನೆಯೊಳಗೆ ಹೋಗುವುದಕ್ಕೇ ಹೆದರುತ್ತಿದ್ದಾರೆ. ಭೂಕಂಪದ ತೀವ್ರತೆ ಎಷ್ಟಿತ್ತು ಎಂಬ ಬಗ್ಗೆಯಾಗಲಿ, ಭೂಮಿ ಎಷ್ಟು ಕಾಲ ಕಂಪಿಸಿತ್ತು ಎಂಬ ಬಗ್ಗೆಯಾಗಲಿ ಮಾಹಿತಿ ಲಭ್ಯವಾಗಿಲ್ಲ.












Click it and Unblock the Notifications