ಅತಿವೃಷ್ಟಿ, ಜೀವಹಾನಿಗೆ 24 ಗಂಟೆಯೊಳಗೆ ಪರಿಹಾರ: ದಾವಣಗೆರೆ ಡಿಸಿ ಬೀಳಗಿ ಭರವಸೆ
ದಾವಣಗೆರೆ, ಜೂ. 2 : ಅತಿವೃಷ್ಟಿ ಸಂದರ್ಭಗಳಲ್ಲಿ ಜೀವಹಾನಿ, ಮಳೆಹಾನಿ ಹಾಗೂ ಜಾನುವಾರುಗಳ ಹಾನಿಗಳಿಗೆ ಸಂಬಂಧಿಸಿದಂತೆ ಘಟನೆ ವರದಿಯಾದ 24 ಗಂಟೆಯೊಳಗೆ ಪರಿಹಾರ ನೀಡಿ. ಆ ನಂತರ ದಾಖಲೆಗಳನ್ನು ಪಡೆದುಕೊಳ್ಳಿ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈಗಾಗಲೇ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಈ ಕುರಿತು ಸೂಚನೆ ನೀಡಿದ್ದು, ಅವಘಡಗಳು ಸಂಭವಿದಂತಹ ಸಂದರ್ಭಗಳಲ್ಲಿ ಸಂತ್ರಸ್ತರಿಗೆ ತಕ್ಷಣದ ಪರಿಹಾರದ ಅವಶ್ಯಕತೆ ಇರುತ್ತದೆ. ಹಾಗಾಗಿ ಪರಿಹಾರ ನೀಡುವ ಮೂಲಕ ಅವರ ನೋವಿಗೆ ಸ್ಪಂದಿಸಲು ತಿಳಿಸಿದ್ದು ಅದರಂತೆ ಎಲ್ಲಾ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕೆಂದರು.

ಎಲ್ಲಾ ಸಿದ್ಧತೆಗಳನ್ನು ಮುಂಚಿತವಾಗಿಯೇ ಮಾಡಿಟ್ಟುಕೊಳ್ಳಿ
ಈ ಬಾರಿ ವಾಡಿಕೆಗಿಂತ ಅತಿ ಹೆಚ್ಚು ಮಳೆಯಾಗುತ್ತಿದ್ದು, ಈ ಬಾರಿಯ ಹಿಂಗಾರು ಮಳೆಯಿಂದ ಆಗಬಹುದಾದ ಅವಘಡ ಹಾನಿಗಳ ಬಗೆಗೆ ಜಾಗರೂಕರಾಗಿರಬೇಕು, ಹಿಂದಿನ 3 ವರ್ಷಗಳ ಪ್ರವಾಹ ಪರಿಸ್ಥಿತಿಯನ್ನು ನಿರ್ವಹಿಸಿದ ಅನುಭವ ನಮ್ಮಲ್ಲಿದೆ. ಹಾಗಾಗಿ ಉಂಟಾಗಬಹುದಾದ ಪ್ರವಾಹ ಪರಿಸ್ಥಿತಿಯನ್ನೆದುರಿಸಲು ಸಿದ್ದರಾಗಿರಬೇಕು. ಮಳೆಹಾನಿ ಪ್ರದೇಶಗಳಲ್ಲಿ ಸ್ಥಾಪಿಸುವ ಕಾಳಜಿ ಕೇಂದ್ರಗಳಲ್ಲಿ ಆರೋಗ್ಯ ತಪಾಸಣೆಯ ವ್ಯವಸ್ಥೆ ಮಾಡಬೇಕು, ಹಿಂದಿನ 5 ವರ್ಷಗಳಲ್ಲಿ ಗ್ರಾಮ ಹಾಗೂ ನಗರಗಳಲ್ಲಿ ನೀರು ತುಂಬಿ ಸಮಸ್ಯೆಯಾಗುತ್ತಿದ್ದ ಪ್ರದೇಶಗಳನ್ನು ಗುರುತಿಸಿ ಸರಿಪಡಿಸಬೇಕು. ನದಿಪಾತ್ರದಲ್ಲಿ ಪ್ರತಿ ಮೂರು ಗಂಟೆಗಳಿಗೊಮ್ಮೆ ನೀರಿನ ಮಟ್ಟ ಒಳಹರಿವು ಹಾಗೂ ಹೊರಹರಿವು ಮಾಹಿತಿ ಕಲೆಹಾಕಬೇಕು. ಹರಿಹರ ಹಾಗೂ ಹೊನ್ನಾಳಿ ಪಟ್ಟಣದ ಕೆಲ ಪ್ರದೇಶಗಳು ಮುಳುಗಡೆಗೆ ಒಳಗಾಗುವ ಕಡೆಗಳಲ್ಲಿ ಮುಂಜಾಗ್ರತೆಯಿಂದ ಎಲ್ಲಾ ಸಿದ್ಧತೆಗಳನ್ನು ಮುಂಚಿತವಾಗಿಯೇ ಮಾಡಿಟ್ಟುಕೊಳ್ಳಿ ಎಂದರು.
ಜಿಲ್ಲೆಯಲ್ಲಿ ನಾಲ್ಕೈದು ಅತಿ ದೊಡ್ಡ ದೊಡ್ಡ ಹಳ್ಳಿಗಳಿದ್ದು, ಯಾವ ಯಾವ ಹಳ್ಳಗಳು ತುಂಬಿ ಹರಿದರೆ ಎಲ್ಲಿ ಎಲ್ಲಿ ಹಾನಿಯಾಗುತ್ತದೆ ಎಂಬನಿಖರವಾದ ಮಾಹಿತಿ ನೀಡಿ, ಹಾಗೂ ಅದರಿಂದ ಸಂಭವಿಸಬಹುದಾದ ತೊಂದರೆಗಳನ್ನು ಗ್ರಹಿಸಿ ಈ ಮುಂಚೆ ಕಾಳಜಿ ಕೇಂದ್ರಗಳು ಎಲ್ಲೆಲ್ಲಿ ತೆರೆದಿತ್ತು ಹಾಗೂ ಈಗ ಎಲ್ಲೆಲ್ಲಿ ಕಾಳಜಿ ಕೇಂದ್ರ ತೆರೆಯಬೇಕು ಎಂಬುದರ ಕಾರ್ಯಯೋಜನೆ ರೂಪಿಸಬೇಕು ಎಂದು ಹೇಳಿದರು.

ಎಲ್ಲ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲಿಯೇ ಇರಬೇಕು: ಡಿಸಿ ಸೂಚನೆ
ಮಳೆ ನೀರು ಸಲೀಸಾಗಿ ಹರಿಯುವಂತೆ ವ್ಯವಸ್ಥೆ ಮಾಡಬೇಕು. ವಿದ್ಯುತ್ ಕಂಬಗಳು, ಬೀದಿ ದೀಪಗಳ ಅರ್ಥಿಂಗ್ ವ್ಯವಸ್ಥೆ ಸರಿಯಾಗಿ ಮಾಡಿ ಯಾವುದೇ ರೀತಿಯ ವಿದ್ಯುತ್ ಅವಘಡ ಸಂಭವಿಸಿದಂತೆ ನಿಗಾವಹಿಸಬೇಕು. ಮಳೆಗಾಲದಲ್ಲಿ ಜಾನುವಾರುಗಳಿಗೆ ಅನೇಕ ರೋಗ ಲಕ್ಷಣಗಳು ಹರಡುವ ಸಂಭವವಿರುತ್ತದೆ. ಅದು ಹಾಗಾಗಿ ಮುಂಜಾಗ್ರತಾ ಕ್ರಮಗಳನ್ನು ಮಾಡಿಕೊಳ್ಳಿ ಎಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದರು. ಮಳೆಯ ಪ್ರಮಾಣ, ಹಾನಿ ವಿವರ ಹಾಗೂ ನದಿ ನೀರಿನ ಮಟ್ಟದ ವರದಿಯನ್ನು ಪ್ರತಿನಿತ್ಯವೂ ಎ.ಸಿ ಕಚೇರಿಯ ಮೂಲಕ ಛಾಯಾಚಿತ್ರದ ಸಮೇತ ವರದಿ ಕಳಿಸಬೇಕು. ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕರು ಹಾಗೂ ತಹಶೀಲ್ದಾರರು ಒಳಗೊಂಡಂತೆ ಎಲ್ಲ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲಿಯೇ ಇರಬೇಕು. ಯಾರು ಕೂಡ ರಜೆ ಹಾಕುವಂತಿಲ್ಲ ಎಂದು ಸೂಚಿಸಿದರು.
ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಮುನ್ನೆಚ್ಚರಿಕೆಯಿಂದ ಎಲ್ಲ ತಾಲ್ಲೂಕು ವೈದ್ಯಾಧಿಕಾರಿಗಳೊಂದಿಗೆ ಆರೋಗ್ಯ ಸಭೆ ನಡೆಸಿ ಸೂಕ್ತಕ್ರಮ ಕೈಗೊಳ್ಳಿ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

ರಸಗೊಬ್ಬರಗಳಿಗೆ ಸರ್ಕಾರ ನಿಯೋಜಿಸಿದ ದರಕ್ಕಿಂತ ಜಾಸ್ತಿ ಮಾಡಿದರೆ ಪರವಾನಿಗೆ ರದ್ದು
ನಗರದ ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಸಭೆಯ ಕೃಷಿ ಇಲಾಖೆ ಜಂಟಿನಿರ್ದೇಶಕರು ಮಾತನಾಡಿದ ಅವರು ರಸಗೊಬ್ಬರ ಹಾಗೂ ಬಿತ್ತನೆ ಬೀಜ ಮಾರಾಟ ಕೇಂದ್ರಗಳಿಗೆ ಭೇಟಿ ನೀಡಬೇಕು, ರಸಗೊಬ್ಬರಗಳಿಗೆ ಸರ್ಕಾರ ನಿಯೋಜಿಸಿದ ದರಕ್ಕಿಂತ ಜಾಸ್ತಿ ದರಕ್ಕೆ ಮಾರಿದರೆ ರೈತರಿಂದ ಮಾಹಿತಿ ಪಡೆದು ಮಾರಾಟಗಾರರ ಪರವಾನಿಗೆಯನ್ನು ರದ್ದು ಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
2007 ರಲ್ಲಿ ರಸಗೊಬ್ಬರ ವಿಷಯಕ್ಕೆ ಸಂಬಂಧಿಸಿದಂತೆ ಹಾಹಾಕಾರ ಉಂಟಾಗಿ ಗೋಲಿಬಾರ್ ನಂತಹ ಪ್ರಕರಣಗಳು ನಡೆದಿರುವ ಉದಾಹರಣೆಗಳಿವೆ ಎಂದರು. ಕಂದಾಯ ಸಚಿವರ ಆದೇಶದ ಮೇರೆಗೆ ಜಿಲ್ಲೆಯ ಹರಿಹರ ಹಾಗೂ ಹೊನ್ನಾಳಿ ತಾಲ್ಲೂಕಿಗೆ ಅಗ್ನಿಶಾಮಕ ಇಲಾಖೆಗೆ ಎರಡು ಬೋಟ್ ಹಾಗೂ ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದಂತೆ ಎಲ್ಲಾ ಉಪಕರಣಗಳನ್ನು ತರಿಸಲು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು. ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ್ ಮುಜ್ಜಿ ಮಾತನಾಡಿ , 2019 ಕ್ಕೆ ಹೋಲಿಸಿದರೆ ಸ್ಮಾರ್ಟ್ ಸಿಟಿ ಹಾಗೂ ಕಾರ್ಪೊರೇಷನ್ ವತಿಯಿಂದ ಆಗಿರುವ ಕಾಮಗಾರಿಗಳಿಂದ ಈಗ ಎಲ್ಲಿಯೂ ನೀರು ಮನೆಗಳಿಗೆ ನುಗ್ಗುತ್ತಿಲ್ಲ ಎಂದು ಮಾಹಿತಿ ನೀಡಿದರು.

ರೈತರಿಗೆ ಬಿತ್ತನೆ ಬೀಜದ ತೊಂದರೆಯಾಗದಿರಲಿ
ಬಿತ್ತನೆ ಬೀಜಕ್ಕೆ ಸಂಬಂಧಿಸಿದಂತೆ ಶ್ರೀನಿವಾಸ್ ಚಿಂತಾಲ್ ಮಾಹಿತಿ ನೀಡಿ, 1.36 ಲಕ್ಷ ಹೆಕ್ಟೇರ್ ಗೆ ಬೇಕಾಗುವ ಮೆಕ್ಕೆಜೋಳ ಬಿತ್ತನೆ ಬೀಜಗಳು ಲಭ್ಯವಿದ್ದು, ರೈತರು ಮೆಕ್ಕೆಜೋಳದ ಜೊತೆಗೆ ತೊಗರಿ ಬೆಳೆಯನ್ನು ಆಂತರ ಬೇಸಾಯದಲ್ಲಿ ಬೆಳೆಯಲು ರೈತರಿಗೆ ಮಾಹಿತಿ ನೀಡಲಾಗಿದೆ. ಜಿಲ್ಲೆಯಲ್ಲಿ ಬೆದ್ದಲು ಜಮೀನಿನಲ್ಲಿ ಸೋಯಾಬೀನ್ ಬೆಳೆಯನ್ನು ಬೆಳೆಯುವ ಮೂಲಕ ಹೊಸ ಪದ್ಧತಿಗಳು ಆವಿಷ್ಕಾರವಾಗಬೇಕು ಎಂಬ ಕಾರಣಕ್ಕೆ ಸೋಯಾಬೀನ್ ಬೆಳೆಯಲು ರೈತರನ್ನು ಪ್ರೋತ್ಸಾಹಿಸಲಾಗಿದೆ. ಇದರಿಂದ ರೈತರು ಅಭಿವೃದ್ಧಿ ಕಾಣಬಹುದು. ರೈತರಿಗೆ ಬಿತ್ತನೆ ಬೀಜದ ತೊಂದರೆ ಆಗದಂತೆ ನೋಡಿಕೊಳ್ಳಲಾಗಿದೆ. ಕಳಪೆ ಬೀಜ ಮಾರಾಟ ಮಾಡುವ ಏಜೆನ್ಸಿಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
(ಒನ್ಇಂಡಿಯಾ ಸುದ್ದಿ)
-
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ












Click it and Unblock the Notifications