ದಾವಣಗೆರೆ: ಕುಡಿತಕ್ಕೆ ಹಣ ನೀಡಲಿಲ್ಲವೆಂದು ಪ್ರೀತಿಸಿ ಮದುವೆಯಾದವಳನ್ನೇ ಕೊಂದ

ದಾವಣಗೆರೆ, ಡಿಸೆಂಬರ್ 28: ಕುಡಿಯಲು ಹಣ ನೀಡಲಿಲ್ಲ ಎಂದು ಕೋ‍ಪಗೊಂಡ ವ್ಯಕ್ತಿಯೊಬ್ಬ ಆತನ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ನಗರದ ವಿಜಯನಗರ ಬಡಾವಣೆಯ ಉಷಾ (38) ಕೊಲೆಯಾದ ಮಹಿಳೆ. ಕೊಲೆಯ ಆರೋಪದ ಮೇಲೆ ಈಕೆಯ ಪತಿ ಜಯಪ್ಪನನ್ನು (38) ಈಗ ಮಹಿಳಾ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇಬ್ಬರೂ ಎರಡು ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದು, ಎರಡು ಮಕ್ಕಳಿದ್ದವು. ಕುಡಿತ ಚಟಕ್ಕೆ ದಾಸನಾಗಿದ್ದ ಈತ ಪ್ರತಿ ದಿವಸ ಕುಡಿದು ಬಂದು ಪತ್ನಿಗೆ ಕಿರುಕುಳ ನೀಡುತ್ತಿದ್ದ. ಅಲ್ಲದೇ ಪತ್ನಿಯ ಶೀಲದ ಬಗ್ಗೆಯೂ ಸಂಶಯಪಡುತ್ತಿದ್ದ ಎನ್ನಲಾಗಿದೆ.

Davnegere: Man Kills His Wife For Not Giving Him Money To Drink

ಉಷಾ ಅವರೇ ದುಡಿದು ಮಕ್ಕಳನ್ನು ಸಾಕುತ್ತಿದ್ದರು. ಕಳೆದ ರಾತ್ರಿ ಕುಡಿದು ಬಂದ ಜಯಪ್ಪ ಪತ್ನಿ ಉಷಾ ಮೇಲೆ ಕೊಡಲಿ ಯಿಂದ ಹಲ್ಲೆ ಮಾಡಿದ್ದಾನೆ. ಪ್ರಜ್ಞೆ ತಪ್ಪಿ ನೆಲಕ್ಕೆ ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಇನ್ನು ಮಹಿಳಾ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು. ಕೊಲೆ ಆರೋಪಿ ಜಯಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+