PSI Suicide: ತುಮಕೂರು ಲಾಡ್ಜ್‌ನಲ್ಲಿ ದಾವಣಗೆರೆ ಪಿಎಸ್‌ಐ ನೇಣಿಗೆ ಶರಣು

PSI Suicide: ದಾವಣಗೆರೆ ಪಿಎಸ್‌ಐ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿರುವ ತುಮಕೂರಿನ ಲಾಡ್ಜ್‌ವೊಂದರಲ್ಲಿ ಘಟನೆ ನಡೆದಿದೆ. ಹಾಗಾದ್ರೆ ಘಟನೆ ನಡೆದಿದ್ದು ಯಾವಾಗ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ನೇಣಿಗೆ ಶರಣಾದವರನ್ನು ನಾಗರಾಜಪ್ಪ (45) ಎಂದು ಗುರುತಿಸಲಾಗಿದೆ. ಇವರು ತುಮಕೂರು ನಗರದ ದ್ವಾರಕಾ ಹೋಟೆಲ್‍ನಲ್ಲಿ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ಏನೆಂದು ಇನ್ನೂ ತಿಳಿದುಬಂದಿಲ್ಲ.

Davanagere PSI Dies by Suicide in Tumakuru Lodge by Hanging

ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆಯಲ್ಲಿ‌ ನಾಗರಾಜಪ್ಪ ಅವರು ಪಿಎಸ್‍ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು ಜುಲೈ 1ರಂದು ದ್ವಾರಕ ಹೋಟೆಲ್ ಲಾಡ್ಜ್‌ನಲ್ಲಿ ರೂಂ ಬುಕ್ ಮಾಡಿದ್ದರು. ಇಂದು (ಜುಲೈ 6) ಲಾಡ್ಜ್‌ನಲ್ಲಿ ಕೆಟ್ಟ ವಾಸನೆ ಬಂದಿದ್ದು, ಸಿಬ್ಬಂದಿ ತಕ್ಷಣ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ತುಮಕೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದಕ್ಕೆ ನಿಖರ ಕಾರಣ ಏನೆಂದು ತಿಳಿದುಬರಬೇಕಿದೆ.

ದೂರು ದಾಖಲಾಗಿದ್ದು ಯಾವಾಗ?: ಜೂನ್‌ 30ರಂದು ಮನೆಯಿಂದ ಹೊರ ಹೋಗಿದ್ದು, ಕುಟುಂಬಸ್ಥರು ಜುಲೈ 2ರಂದು ಕೆಟಿಜಿ ನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ನಾಗರಾಜಪ್ಪ 1993ರಲ್ಲಿ ಕಾನ್‌ಸ್ಟೇಬಲ್‌ ಆಗಿ ಪೊಲೀಸ್‌ ಇಲಾಖೆ ಸೇರಿದ್ದರು. ಬಳಿಕ ಬಡ್ತಿ ಪಡೆದು ಇನ್‌ಸ್ಪೆಕ್ಟರ್‌ ಆಗಿ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದುಬಂದಿದೆ.

ಆತ್ಮಹತ್ಯೆಗೆ ಶರಣಾಗಿರುವ ನಾಗರಾಜಪ್ಪ ಅವರು ಇನ್ನೇನು ಒಂದೂವರೆ ವರ್ಷದಲ್ಲೇ ಕರ್ತವ್ಯದಿಂದ ನಿವೃತ್ತಿ ಆಗಬೇಕಿತ್ತು. ಆದರೆ, ನಿವೃತ್ತಿ ಜೀವನನ್ನು ಕುಟುಂಬದೊಂದಿಗೆ ಕಳೆಯುವ ಮೊದಲೇ ದುಡುಕಿ ನಿರ್ಧಾರ ಕೈಗೊಂಡಿದ್ದಾರೆ. ಇನ್ನು ಸುಮಾರು ಮೂರು ಪುಟಗಳ ಡೆತ್​ ನೋಟ್ ಬರೆದಿದ್ದು, ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ.

ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ನನ್ನದೇ ನಿರ್ಧಾರ ಎಂದು ಬರೆದಿದ್ದಾರೆ ಎಂದು ತಿಳಿದುಬಂದಿದೆ. ಇದನ್ನು ಬಿಟ್ಟು ಮೂರು ಪುಟಗಳ ಡೆತ್​ನಲ್ಲಿ ಇನ್ನೂ ಏನೆಲ್ಲಾ ಬರೆದಿದ್ದಾರೆ ಎಂದು ಇನ್ನೂ ತಿಳಿದುಬರಬೇಕಿದೆ.

ಪತಿ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಈ ಬಗ್ಗೆ ಮೃತ ಪಿಎಸ್‌​ಐ ನಾಗರಾಜಪ್ಪ ಅವರ ಪತ್ನಿ ಲಲಿತಮ್ಮ ಪ್ರತಿಕ್ರಿಯಿಸಿ, ಮತ್ತೊಂದು ವರ್ಷ ಮಾತ್ರ ಸೇವೆ ಬಾಕಿಯಿತ್ತು. ಆರೋಗ್ಯ ಸಮಸ್ಯೆ ಕಾಡುತ್ತಿತ್ತು.‌ ಸುಗರ್ ಬಿಪಿ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

ಕಳೆದ ವರ್ಷವೇ ಮಗಳ ಮದುವೆ ಆಗಿದೆ.‌ ಮುಂದಿನ ತಿಂಗಳ ಮಗಳ ಹೆರಿಗೆ ದಿನಾಂಕ ವೈದ್ಯರು ಕೊಟ್ಟಿದ್ದರು. ಇಂತಹ ಪರಿಸ್ಥಿತಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಕಷ್ಟ ಇರಲಿಲ್ಲ. ಯಾಕೆ ಆತ್ಮಹತ್ಯೆ ‌ಮಾಡಿಕೊಂಡರು ಎಂಬುದೇ ಗೊತ್ತಾಗುತ್ತಿಲ್ಲ ಎಂದು ಪತ್ನಿ ಕಣ್ಣೀಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+