Layout: ದಾವಣಗೆರೆ ಬಳಿ 200 ಎಕರೆಯಲ್ಲಿ ಹೊಸ ಲೇಔಟ್‌ ನಿರ್ಮಾಣ; ಉದ್ದೇಶ ಹಾಗೂ ಯಾರಿಗೆಲ್ಲ ಪ್ರಯೋಜನ?

ದಾವಣಗೆರೆ, ಸೆಪ್ಟೆಂಬರ್ 12: ದಾವಣಗೆರೆ ಮತ್ತು ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಮೂಲಕ ವಸತಿ ರಹಿತರಿಗೆ ಹಾಗೂ ಮಧ್ಯಮ ವರ್ಗದ ಜನರಿಗೆ ಸ್ವಂತ ಮನೆ ನಿರ್ಮಿಸಿಕೊಳ್ಳಲು ನೆರವಾಗುವ ನಿಟ್ಟಿನಲ್ಲಿ ನೂತನ ಬಡಾವಣೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಧೂಡ ಸಭೆಯಲ್ಲಿ ಈ ಕುರಿತು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

200 ಎಕರೆಯಲ್ಲಿ ಹೊಸ ಲೇಔಟ್ ನಿರ್ಮಾಣ

ಕರೂರು ಸಮೀಪವಿರುವ ದೊಡ್ಡಬಾತಿ ವ್ಯಾಪ್ತಿಯಲ್ಲಿ ಆರಂಭದಲ್ಲಿ 110 ಎಕರೆ ಪ್ರದೇಶದಲ್ಲಿ ಲೇಔಟ್ ಅಭಿವೃದ್ಧಿಪಡಿಸುವ ಪ್ರಸ್ತಪಾಪವನ್ನು ಅಧಿಕಾರಿಗಳು ಮತ್ತು ಧೂಡ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಸಭೆಯಲ್ಲಿ ಇಟ್ಟರು. ಆದರೆ ಸಾರ್ವಜನಿಕರ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ಕೇವಲ 110 ಎಕರೆಗೆ ಸೀಮಿತಗೊಳಿಸದೆ, ಒಟ್ಟು 200 ಎಕರೆಗೆ ವಿಸ್ತರಿಸುವಂತೆ ಸಚಿವ ಎಸ್.ಎಸ್‌.ಮಲ್ಲಿಕಾರ್ಜುನ್ ಅವರು ಸಲಹೆ ನೀಡಿದರು.

Davanagere-Harihar 200-Acre New Layout Planned for Housing Sites Near Doddabathi close to Karuru

ಇದರಿಂದಾಗಿ ಹೆಚ್ಚು ಜನರಿಗೆ ನಿವೇಶನ ದೊರೆಯಲಿದ್ದು, ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಆದ್ಯತೆ ಮೇರೆಗೆ ನಿವೇಶನ ಹಂಚಿಕೆ ಮಾಡಲು ಸಾಧ್ಯವಾಗಲಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಶೀಘ್ರವೇ ಸರ್ಕಾರಕ್ಕೆ ಸಮಗ್ರ ಪ್ರಸ್ತಾವನೆ ಸಲ್ಲಿಸಿ ಅಗತ್ಯ ಅನುಮೋದನೆ ಪಡೆದುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ರೈತರಿಗೆ ಅನುಕೂಲವಾಗುವ ಮಾದರಿ ಜಾರಿ?

ಈಗ ಪ್ರಸ್ತುತ ರಾಜ್ಯದಲ್ಲಿ ಭೂಮಿ ಸ್ವಾಧೀನಕ್ಕೆ ಸಂಬಂಧಿಸಿದಂತೆ '50:50 ಲೇಔಟ್ ಅಭಿವೃದ್ಧಿ ಮಾದರಿ' ಚಾಲ್ತಿಯಲ್ಲಿದೆ. ಅಂದರೆ ಭೂಮಿ ನೀಡುವ ರೈತರಿಗೆ ಶೇಕಡಾ 50ರಷ್ಟು ಅಭಿವೃದ್ಧಿಪಡಿಸಿದ ನಿವೇಶನಗಳನ್ನು ನೀಡಲಾಗುತ್ತದೆ. ಆದರೆ ಭೂಮಿ ಬಿಟ್ಟುಕೊಡುವ ರೈತರಿಗೆ ಮತ್ತಷ್ಟು ಹೆಚ್ಚಿನ ಸೌಲಭ್ಯ ಹಾಗೂ ಲಾಭ ತಲುಪಿಸುವ ಉದ್ದೇಶದಿಂದ ಧೂಡ ವ್ಯಾಪ್ತಿಯಲ್ಲಿ '60:40 ಮಾದರಿ' ಜಾರಿಗೆ ತರಲು ಸಚಿವರು ಇಂಗಿತ ವ್ಯಕ್ತಪಡಿಸಿದರು.

ಅಂದರೆ ಶೇಕಡಾ 60ರಷ್ಟು ಪಾಲು ರೈತರಿಗೆ ದೊರೆಯುವಂತೆ ನಿಯಮ ರೂಪಿಸಲು ಯೋಜಿಸಲಾಗಿದ್ದು, ಈ ಹೊಸ ಮಾದರಿಯನ್ನು ಅಂಗೀಕರಿಸುವಂತೆ ಕೋರಿ ಸರ್ಕಾರಕ್ಕೆ ತಕ್ಷಣ ಪ್ರಸ್ತಾವನೆ ರವಾನಿಸಲು ತಿಳಿಸಲಾಯಿತು. ಧೂಡ ಸಂಸ್ಥೆಗೆ ಪ್ರಸ್ತುತ ಕೇವಲ 25 ಲಕ್ಷ ರೂಪಾಯಿ ಮೌಲ್ಯದವರೆಗೆ ಮಾತ್ರ ಟೆಂಡರ್ ಪ್ರಕ್ರಿಯೆ ನಡೆಸುವ ಅಧಿಕಾರವಿದೆ.

ಇದರಿಂದಾಗಿ ದೊಡ್ಡ ಮಟ್ಟದ ಮೂಲಸೌಕರ್ಯ ಕಾಮಗಾರಿಗಳು ಹಾಗೂ ಬಡಾವಣೆ ಅಭಿವೃದ್ಧಿ ಕೆಲಸಗಳು ವಿಳಂಬವಾಗುತ್ತಿವೆ. ಈ ಸಮಸ್ಯೆಗಳನ್ನು ನಿವಾರಣೆ ಮಾಡಲು ಟೆಂಡರ್ ಕರೆಯುವ ಹಣಕಾಸಿನ ಮಿತಿಯನ್ನು 5 ಕೋಟಿ ರೂಪಾಯಿವರೆಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಸೂಕ್ತ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ರವಾನಿಸಿ ಶೀಘ್ರವೇ ಅನುಮತಿ ಪಡೆಯಲು ಸೂಚನೆ ನೀಡಿದರು.

ಸಮಸ್ಯೆಗಳ ನಿವಾರಣೆ ಮತ್ತು ಸಿಬ್ಬಂದಿ ಬಲವರ್ಧನೆ

ಮಂಡಕ್ಕಿ ಬಟ್ಟಿ ಪ್ರದೇಶದಲ್ಲಿ ನಿವೇಶನ ಪಡೆದ ಹಲವು ಫಲಾನುಭವಿಗಳು ಕೇವಲ ಆರಂಭಿಕ ಠೇವಣಿ ಮೊತ್ತ ಪಾವತಿಸಿದ್ದು, ಬಾಕಿ ಹಣ ನೀಡಿಲ್ಲ ಎಂಬ ವಿಷಯ ಸಭೆಯಲ್ಲಿ ಚರ್ಚೆಗೆ ಬಂತು. ಬಾಕಿ ಪಾವತಿಸದ ಕಾರಣ ಅವರಿಗೆ ಕ್ರಯಪತ್ರ ಮಾಡಿಕೊಡಲು ತಾಂತ್ರಿಕ ತೊಂದರೆ ಎದುರಾಗಿದೆ. ಇದನ್ನು ವಿಶೇಶ ಪ್ರಕರಣವೆಂದು ಪರಿಗಣಿಸಿ ಫಲಾನುಭವಿಗಳಿಗೆ ಕ್ರಯಪತ್ರ ನೀಡಲು ಅವಕಾಶ ಮಾಡಿಕೊಡುವಂತೆ ಸರ್ಕಾರಕ್ಕೆ ಪತ್ರ ಬರೆಯಲು ಸಚಿವರು ಸಲಹೆ ನೀಡಿದರು. ಈ ಸಭೆಯು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ಶುಕ್ರವಾರ (ಸೆಪ್ಟೆಂಬರ್ 12) ನಡೆಯಿತು.

ಇದರ ಜತೆಗೆ ಪ್ರಾಧಿಕಾರದಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಕೆಲಸ ಕಾರ್ಯಗಳಿಗೆ ಅಡಚಣೆಯಾಗುತ್ತಿದ್ದು, ಹೆಚ್ಚುವರಿ ಸಿಬ್ಬಂದಿ ನೇಮಕಾತಿಗೂ ಸರ್ಕಾರದ ಮಟ್ಟದಲ್ಲಿ ಪತ್ರ ವ್ಯವಹಾರ ನಡೆಸಲು ತೀರ್ಮಾನಿಸಲಾಯಿತು. ಈ ಮಹತ್ವದ ಸಭೆಯಲ್ಲಿ ಧೂಡ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಧೂಡ ಆಯುಕ್ತೆ ರೇಣುಕಾ ಹಾಗೂ ಶಾಸಕ ಸಮರ್ಥ್ ಶಾಮನೂರು ಸೇರಿದಂತೆ ಮತ್ತಿರರು ಭಾಗಿಯಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+