ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾವಣಗೆರೆ: ಕಂದಾಯ ಇಲಾಖೆ 3ಅಧಿಕಾರಿಗಳು ಎಸಿಬಿ ಬಲೆಗೆ

By Sachhidananda Acharya
|
Google Oneindia Kannada News

ದಾವಣಗೆರೆ, ಆಗಸ್ಟ್ 18: ಇಲ್ಲಿನ ಹೊನ್ನಾಳಿ ತಾಲೂಕು ಕುಂದೂರು ಗ್ರಾಮ ಲೆಕ್ಕಿಗರ ಕಚೇರಿಯಲ್ಲಿ ಲಂಚ ಸ್ವೀಕರಿಸುವ ವೇಳೆ ಮೂವರು ಅಧಿಕಾರಿಗಳು ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ.

ಕಂದಾಯ ಇಲಾಖೆ ಮೂವರು ಅಧಿಕಾರಿಗಳು ರೈತ ರುದ್ರೇಶ್ ಎಂಬವವರಿಂದ ಖಾತೆ ಬದಲಾವಣೆಗಾಗಿ 30 ಸಾವಿರ ರೂಪಾಯಿ ಲಂಚ ಕೇಳಿದ್ದರು.

Davanagere: ACB trapped 3 officers of Revenue Department

ಕಂದಾಯ ನಿರೀಕ್ಷಕ ಅಜಯ್ ಕುಮಾರ್, ಗ್ರಾಮ ಲೆಕ್ಕಿಗ ಮಲ್ಲಿಕಾರ್ಜುನ್, ಗ್ರಾಮ ಸೇವಕ ವೀರಪ್ಪ ರೈತರಿಂದ ಲಂಚ ಕೇಳಿದ ಅಧಿಕಾರಿಗಳಾಗಿದ್ದಾರೆ.

ಇಂದು ಇವರು ರುದ್ರೇಶ್‌ ರಿಂದ 23 ಸಾವಿರ ಹಣವನ್ನು ಪಡೆಯುವಾಗ ಎಸಿಬಿ ಅಧಿಕಾರಿಗಳಿಗೆ ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಈ ಕುರಿತು ಎಸಿಬಿ ಅಧಿಕಾರಿಗಳು ದಾವಣಗೆರೆ ಜಿಲ್ಲಾ ಎಸಿಬಿ ಠಾಣೆಯಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆ 1988ರ ಅಡಿಯಲ್ಲಿ ಪ್ರಕರಣ ದಾಖಲಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.

English summary
Three officials have fallen into the trap of the Anti Corruption Bureau (ACB) when they receive a bribe in the Kundur revenue department office in Honnali Taluk. The three officials of the revenue department had asked for a bribe of Rs 35,000 by the farmer Rudresh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X