ವಿಡಿಯೋ: ತಂದೆ ಚಿಕಿತ್ಸೆಗೆ ಸಹಾಯ ಮಾಡಿ ಎಂದು ಮನವಿ ಮಾಡಿದ ಮಗಳು

ದಾವಣಗೆರೆ, ಏಪ್ರಿಲ್ 15: ತಂದೆಯ ಚಿಕಿತ್ಸೆಗೆ ಔಷಧಿ ಸಿಗದೆ ಪರದಾಡುತ್ತಿದ್ದು, ಮಗಳು ಸಹಾಯ ಕೋರಿ ಮುಖ್ಯಮಂತ್ರಿಗಳಿಗೆ ವಿಡಿಯೋ ಮೂಲಕ ಮನವಿ ಮಾಡಿರುವ ಘಟನೆ ಹೊನ್ನಾಳಿ ತಾಲ್ಲೂಕಿನ ಮಲೆಕುಂಬಳೂರು ಗ್ರಾಮದಲ್ಲಿ ನಡೆದಿದೆ.

ನಿಖಿತಾ ಎಂಬ ಯುವತಿಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾಳೆ. ಈಕೆಯ ತಂದೆ ಹನುಮಂತಪ್ಪಗೆ ಪ್ಯಾಂಕ್ರಿಯಾಸ್ ಕ್ಯಾನ್ಸರ್ ಬಂದಿದ್ದು. ಉಡುಪಿಯ ಮಣಿಪಾಲ್ ಆಸ್ಪತ್ರೆಯಲ್ಲಿ ಡಿಸೆಂಬರ್ 25 ಕ್ಕೆ ಥೆರಪಿ ಮಾಡಿಸಿದ್ದರು.

ಎರಡನೇ ಥೆರಪಿ ಮಾರ್ಚ್ 25ಕ್ಕೆ ಮಾಡಿಸಬೇಕಿತ್ತು. ಆದರೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಂಬೈನಿಂದ ಬರಬೇಕಿದ್ದ ಔಷಧಿ ಸಿಗುತ್ತಿಲ್ಲ ಎಂದು ವೈದ್ಯರು ಹೇಳಿದ್ದಾರೆ.

Daughter Requested Via Video To Chief Ministers For Her Father Treatment In Honnali

ಆದರೆ ನೋವಿನಿಂದ ನರಳಾಡುತ್ತಿದ್ದ ತಂದೆಯನ್ನು ನೋಡಿ ಮರುಕಪಡುತ್ತಿರುವ ನಿಖಿತಾ, ಔಷಧಿ ತರಿಸಲು ಸಹಾಯ ಮಾಡಿ ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾಳೆ.

ನಮ್ಮ ತಂದೆಯಂತೆ ಹಲವಾರು ಜನರು ನೋವು ಅನುಭವಿಸುತ್ತಿದ್ದಾರೆ. ಅಂತವರಿಗೆ ಔಷಧಿ ತರಿಸಲು ಸಹಾಯಮಾಡಿ ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+