ನೋ ಕೊರೊನಾ: ಕಂಟೈನ್‍ಮೆಂಟ್ ವಲಯಗಳ ಡಿನೋಟಿಫಿಕೇಷನ್
ದಾವಣಗೆರೆ, ಏಪ್ರಿಲ್ 27: ದಾವಣಗೆರೆ ನಗರದಲ್ಲಿ ವರದಿಯಾಗಿದ್ದ ಎರಡು ಕೊರೊನಾ ಪಾಸಿಟಿವ್ ಪ್ರಕರಣಗಳ ಪ್ರದೇಶಗಳಾದ ನಿಜಲಿಂಗಪ್ಪ ಬಡಾವಣೆ ಮತ್ತು ಜಿಎಂಐಟಿ ಅತಿಥಿ ಗೃಹ ಪ್ರದೇಶಗಳನ್ನು ಕಂಟೈನ್‍ಮೆಂಟ್ ವಲಯಗಳೆಂದು ಘೋಷಿಸಿ ಕ್ರಮ ಕೈಗೊಳ್ಳಲಾಗಿತ್ತು. ಇದೀಗ 28 ದಿನಗಳಿಂದ ಯಾವುದೇ ಹೊಸ ಕೊರೊನಾ ಪ್ರಕರಣ ದಾಖಲಾಗದ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣೆ ಕಾಯ್ದೆ 2005 ರ ಅಧಿಕೃತ ಜ್ಞಾಪನೆ ಅನ್ವಯ ಈ ಎರಡು ಕಂಟೈನ್‍ಮೆಂಟ್ ವಲಯಗಳನ್ನು ಡಿನೋಟಿಪಿಫೈ ಮಾಡಲಾಗಿದೆ.
ಮಾ.26 ರ ಮಧ್ಯರಾತ್ರಿಯಿಂದ ಕೋವಿಡ್ ಪಾಸಿಟಿವ್ ಆಗಿದ್ದ ರೋಗಿ ಸಂಖ್ಯೆ 63 ನೆಲೆಸಿದ್ದ ನಿಜಲಿಂಗಪ್ಪ ಬಡಾವಣೆಯ ಪೂರ್ವಕ್ಕೆ: ನಿಜಲಿಂಗಪ್ಪ ಬಡಾವಣೆ 2ನೇ ಕ್ರಾಸ್, 1ನೇ ಮೈನ್‍ನಿಂದ 2 ನೇ ಮೈನ್. ಪಶ್ಚಿಮಕ್ಕೆ ನಿಜಲಿಂಗಪ್ಪ ಬಡಾವಣೆಯ 6ನೇ ಕ್ರಾಸ್, 1ನೇ ಮೈನ್‍ನಿಂದ 2ನೇ ಮೈನ್. ಉತ್ತರಕ್ಕೆ : ಅಮೃತ ವಿದ್ಯಾಲಯ ಶಾಲೆ.
ದಕ್ಷಿಣಕ್ಕೆ : ನಿಜಲಿಂಗಪ್ಪ ಬಡಾವಣೆ 2ನೇ ಮೈನ್ ರಸ್ತೆ. ಹಾಗೂ ಈ ಬಡಾವಣೆಯ ಎಲ್ಲೆಯಲ್ಲಿರುವ ಪೂರ್ವಕ್ಕೆ ಆಂಜನೇಯ ಮಿಲ್, ಪಶ್ಚಿಮಕ್ಕೆ ಸಾಲೆಕಟ್ಟೆ ಗ್ರಾಮ, ಉತ್ತರಕ್ಕೆ ಬಸವನಹಟ್ಟಿ ಗ್ರಾಮ ಮತ್ತು ದಕ್ಷಿಣಕ್ಕೆ ಬಿಸಲೇರಿ ಗ್ರಾಮ. 266 ವಸತಿಗಳು, 1037 ಜನಸಂಖ್ಯೆ ಹಾಗೂ ಈ ಬಡಾವಣೆಯ ಬಫರ್ ಜೋನ್ 5 ಕಿ ಮೀ ಪರಿದಿಯ ಕಂಟೈನ್‍ಮೆಂಟ್ ವಲಯವನ್ನು ನಿಯಮಾನುಸಾರ ಡಿನೋಟಿಫೈ ಮಾಡಲಾಗಿದೆ.

ಮಾ.27 ರ ಮಧ್ಯರಾತ್ರಿಯಿಂದ ಕೋವಿಡ್ ಪಾಸಿಟಿವ್ ಆಗಿದ್ದ ರೋಗಿ ಸಂಖ್ಯೆ 75 ನೆಲೆಸಿದ್ದ ಜಿಎಂಐಟಿ ಅತಿಥಿಗೃಹದ ಪೂರ್ವಕ್ಕೆ ಕರೂರ್ ಗ್ರಾಮ ಸರ್ವೇ ನಂ 18, ಪಶ್ಚಿಮಕ್ಕೆ ದೊಡ್ಡಬಾತಿ ಸರ್ವೇ ನಂ 18, ಉತ್ತರಕ್ಕೆ ಕರೂರು ಗ್ರಾಮ ಸರ್ವೇ ನಂ 145, ದಕ್ಷಿಣಕ್ಕೆ ಪಿ.ಬಿ.ರಸ್ತೆ. ಹಾಗೂ ಈ ಅತಿಥಿಗೃಹದ ಎಲ್ಲೆಯಲ್ಲಿರುವ ಪೂರ್ವಕ್ಕೆ ಅವರಗೆರೆ ಗ್ರಾಮ, ಪಶ್ಚಿಮಕ್ಕೆ ಹಳೇ ಬಾತಿ ಗ್ರಾಮ, ಉತ್ತರಕ್ಕೆ ಯರಗುಂಟೆ ಗ್ರಾಮ ಮತ್ತು ದಕ್ಷಿಣಕ್ಕೆ ನಾಗನೂರು ಗ್ರಾಮ.
ಈ ಅತಿಥಿಗೃಹ ವ್ಯಾಪ್ತಿಯಲ್ಲಿದ್ದ 11 ಜನಸಂಖ್ಯೆ ಹಾಗೂ 5 ಕಿ.ಮೀ ಪರಿಧಿಯ ಕಂಟೈನ್‍ಮೆಂಟ್ ವಲಯವನ್ನು ನಿಯಮಾನುಸಾರ ಡಿನೋಟಿಫೈ ಮಾಡಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶಿಸಿದ್ದಾರೆ.












Click it and Unblock the Notifications