ನೀರಾವರಿ ಯೋಜನೆಗೆ 1 ಲಕ್ಷ ಕೋಟಿ: ಬಿಎಸ್ ವೈ ಭರವಸೆ
ದಾವಣಗೆರೆ, ಜನವರಿ31 : ಅವಕಾಶ ದೊರೆತರೆ ನೀರಾವರಿ ಯೋಜನೆಗೆ 1 ಲಕ್ಷ ಕೋಟಿ ಹಣ ಮೀಸಲಿಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಭರವಸೆ ನೀಡಿದರು.
ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಕಾರ್ಯಕ್ರಮ ಮಾತನಾಡಿದ ಅವರು, ಒಳ್ಳೆಯ ಅವಕಾಶ ಲಭ್ಯವಾದರೆ ನೀರಾವರಿಗೆ ಹಣ ತೆಗೆದಿಡುತ್ತೇನೆ. ರೈತರಿಗೆ ನೀರು ಕೊಡುವುದು, ವೈಜ್ಞಾನಿಕ ಬೆಲೆ ನೀಡುವುದು ನನ್ನ ಕರ್ತವ್ಯ. ಜನರ ನೋವುಗಳನ್ನು ಅರಿಯಲು 85 ದಿನ ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ ಎಂದರು.
ಎಲ್ಲ ವಿಧಾನಸಭಾ ಕ್ಷೇತ್ರದ ಸಮಸ್ಯೆ ಅರಿತುಕೊಂಡಿದ್ದೇನೆ ಸ್ವಾತಂತ್ರ್ಯ ಬಂದು 70 ವರ್ಷವಾದರೂ ರೈತರು ಸ್ವಾಭಿಮಾನಿಯಾಗಿ ಬದುಕೋಕೆ ಸಾಧ್ಯವಾಗುತ್ತಿಲ್ಲ. ನೀರಾವರಿಗೆ ಹೆಚ್ಚಿನ ಒತ್ತು ಕೊಟ್ಟು ರೈತರಿಗೆ ನೆಮ್ಮದಿಗೆ ಬದುಕು ರೂಪಿಸಲು ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದೇನೆ ಮುಂದೆ ಅವಕಾಶ ಸಿಕ್ಕರೆ ನೀರಾವರಿ ಯೋಜನೆಗೆ 1 ಲಕ್ಷ ಕೋಟಿ ಹಣ ಮೀಸಲಿಡುತ್ತೇನೆ ಎಂದು ಭರವಸೆ ನೀಡಿದರು.

ತರಳಬಾಳು ಜಗದ್ಗುರು ಮತ್ತು ಪ್ರಧಾನಿ ಮೋದಿ ಅವರನ್ನು ಮುಖಾಮುಖಿ ಮಾಡಿಸಿ ಸಂವಾದ ಮಾಡಿಸುವೆ ತರಳಬಾಳು ಜಗದ್ಗುರುಗಳು ಮೋದಿ ಪರಸ್ಪರ ಚರ್ಚಿಸಿದರೆ ಮೋದಿ ಅವರ ದೂರದೃಷ್ಟಿ ಗೊತ್ತಾಗುತ್ತದೆ. ರೈತರ ಪರ ಕೆಲ್ಸಾ ಮಾಡಲು ಅನುಕೂಲವಾಗುತ್ತದೆ ಎಂದರು.












Click it and Unblock the Notifications