ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆಯಲ್ಲಿ ಪೋಕ್ಸೋ ಆರೋಪಿಯಿಂದ ಲಂಚ ಸ್ವೀಕಾರ: ಎಸ್‌ಪಿಪಿ ಲೋಕಾಯುಕ್ತ ಬಲೆಗೆ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಫೆಬ್ರವರಿ, 05: ಪೋಕ್ಸೋ ಪ್ರಕರಣದ ಆರೋಪಿಯಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದ ದಾವಣಗೆರೆ ಮಕ್ಕಳ ಸ್ನೇಹಿ‌ ನ್ಯಾಯಾಲಯದ ಎಸ್‌ಪಿಪಿ (ಸ್ಪೆಷಲ್ ಪಬ್ಲಿಕ್ ಪ್ರಾಸ್ಯೂಕ್ಯೂಟರ್) ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಮಕ್ಕಳ ಸ್ನೇಹಿ ನ್ಯಾಯಾಲದ ಸರ್ಕಾರಿ ಅಭಿಯೋಜಕಿ ರೇಖಾ ಕೋಟೆಗೌಡರು ಲೋಕಾಯುಕ್ತ ಬಲೆಗೆ ಬಿದ್ದವರಾಗಿದ್ದಾರೆ. ಕೌಟುಂಬಿಕ ನ್ಯಾಯಾಲಯದಲ್ಲಿ ಸರ್ಕಾರಿ ವಕೀಲರಾಗಿದ್ದ ರೇಖಾ ಕೋಟೆಗೌಡರ್ ಪೋಸ್ಕೋ ಪ್ರಕರಣದ ಆರೋಪಿ ಬಳಿ 3 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಲೋಕಾಯುಕ್ತ ಎಸ್‌ಪಿ ನೇತೃತ್ವದಲ್ಲಿ ದಾಳಿ ನಡೆಸಿದಾಗ ಅವರ ಮನೆಯಲ್ಲಿ 1 ಲಕ್ಷದ 87 ಸಾವಿರ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಸಿಕ್ಕಿಬಿದ್ದಿದ್ದಾರೆ.

ಕಾರ್ಗಲ್: ಲಂಚ ಪಡೆಯುವಾಗ ಲೋಕಾಯುಕ್ತ ದಾಳಿ, ಹಣಕ್ಕೆ ಬೆಂಕಿಯಿಟ್ಟ ಪಟ್ಟಣ ಪಂಚಾಯಿತಿ ಸದಸ್ಯಕಾರ್ಗಲ್: ಲಂಚ ಪಡೆಯುವಾಗ ಲೋಕಾಯುಕ್ತ ದಾಳಿ, ಹಣಕ್ಕೆ ಬೆಂಕಿಯಿಟ್ಟ ಪಟ್ಟಣ ಪಂಚಾಯಿತಿ ಸದಸ್ಯ

ಲಂಚ ಸ್ವೀಕಾರದ ವೇಳೆ ಲೋಕಾಯುಕ್ತ ಬಲೆಗೆ

ಶನಿವಾರ (ಫೆಬ್ರವರಿ 05) ಮಧುಸೂಧನ್ ಕಿತ್ತೂರು ಎಂಬುವರು ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದರು. ಪೋಕ್ಸೋ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದವನಿಂದ ಲಂಚ ಸ್ವೀಕರಿಸುವ ವೇಳೆ ಬಲೆಗೆ ಬಿದ್ದಿದ್ದು, ಲೋಕಾಯುಕ್ತ ಪೊಲೀಸರಿಂದ ಮಕ್ಕಳ ಸ್ನೇಹ ನ್ಯಾಯಾಲಯದಲ್ಲಿ ಪರಿಶೀಲನೆ ನಡೆಸಲಾಗಿದೆ.

Bribe Acceptance by POCSO accused in Davanagere: Lokayukta attack on Special Public Prosecutor

ಅಂಕೋಲಾದಲ್ಲಿ ಲೋಕಾಯುಕ್ತ ದಾಳಿ

ಸರ್ವೆ ಅಧಿಕಾರಿಯೊಬ್ಬ ಜಾಗ ಪೋಡಿ ಮಾಡಿಕೊಡಲು 50 ಸಾವಿರ ರೂಪಾಯಿ ಕೊಡುವಂತೆ ಬೇಡಿಕೆ ಇಟ್ಟಿದ್ದ. ಇದೇ ವೇಳೆಯಲ್ಲಿ ರಮೇಶ್ ಬಳಿ 15 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಸರ್ವೆ ಅಧಿಕಾರಿ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದು, ಆತನನ್ನು ವಶಕ್ಕೆ ಪಡೆದಿರುವ ಘಟನೆ ಇತ್ತೀಚೆಗಷ್ಟೇ ಅಂಕೋಲಾದಲ್ಲಿ ನಡೆದಿತ್ತು.

50 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ

ಸರ್ವೆ ಅಧಿಕಾರಿ ಪುಟ್ಟುಸ್ವಾಮಿ ಸಿಕ್ಕಿಬಿದ್ದ ಆರೋಪಿಯಾಗಿದ್ದಾನೆ. ಅಂಕೋಲಾದ ರಮೇಶ್ ಎಂಬುವವರಿಂದ ಜಮೀನಿನ ಜಾಗವನ್ನು ಪೋಡಿ ಮಾಡಿಕೊಡಲು 50 ಸಾವಿರ ಲಂಚದ ಬೇಡಿಕೆ ಇಟ್ಟು ಈ ಹಿಂದೆ 5 ಸಾವಿರ ಪಡೆದಿದ್ದ ಎನ್ನಲಾಗಿದೆ‌. ಶುಕ್ರವಾರವೂ (ಜನವರಿ 06) ಕೂಡ ಉಳಿದ ಹಣದ ಪೈಕಿ 15 ಸಾವಿರ ಹಣವನ್ನು ಅಂಕೋಲಾ ಬಳಿ ಖಾಸಗಿ ಹೊಟೇಲ್ ಒಂದರಲ್ಲಿ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ದಾಳಿ ನಡೆಸಿದೆ.

Bribe Acceptance by POCSO accused in Davanagere: Lokayukta attack on Special Public Prosecutor

ದಾಳಿ ನಡೆಸಿದ ಡಿ.ವೈ.ಎಸ್.ಪಿ ರಾಜು ನೇತೃತ್ವದ ತಂಡ ಆರೋಪಿಯನ್ನು ನಗದು ಸಹಿತ ವಶಕ್ಕೆ ಪಡೆದಿದೆ. ಬಳಿಕ ಹೊಟೇಲ್‌ನಿಂದ ಅವರನ್ನು ತಹಶೀಲ್ದಾರ್‌ ಕಾರ್ಯಾಲಯದ ಮೇಲ್ಮಹಡಿಯಲ್ಲಿರುವ ಭೂದಾಖಲೆಗಳ ಕಛೇರಿಗೆ ಕರೆತಂದು ವಿಚಾರಣೆ ಮುಂದುವರೆಸಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೆ ಪುಟ್ಟುಸ್ವಾಮಿ ಪದೋನ್ನತಿ ಹೊಂದಿ ಅಂಕೋಲಾಕ್ಕೆ ವರ್ಗಾವಣೆಗೊಂಡಿದ್ದರು ಎಂದು ತಿಳಿದುಬಂದಿದೆ.

English summary
Bribe Acceptance by POCSO accused in Davanagere: Lokayukta attack on Special Public Prosecutor Rekha Kote Gowda, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X