ದಾವಣಗೆರೆ ಟಿವಿ ಸ್ಟೇಷನ್ ಕೆರೆಗೆ ಯಾರ ಹೆಸರಿಡಬೇಕು?

Posted By: Gururaj
Subscribe to Oneindia Kannada

ದಾವಣಗೆರೆ, ಫೆಬ್ರವರಿ 08 : ದಾವಣಗೆರೆ ಎಂದಾಗ ನೆನಪಿಗೆ ಬರುವುದು ಬೆಣ್ಣೆದೋಸೆ, ರಾಜಕೀಯವಾಗಿ ಡಾ.ಶಾಮನೂರು ಶಿವಶಂಕರಪ್ಪ ಅವರ ಕುಟುಂಬ.

ಹೌದು, ದಾವಣಗೆರೆ ನಗರದಲ್ಲಿ ಬಹುತೇಕ ಸರ್ಕಾರಿ ಕಟ್ಟಡ, ಬಸ್ ನಿಲ್ದಾಣ, ರಸ್ತೆ ಸೇರಿದಂತೆ ವಿವಿಧ ಜಾಗಗಳಿಗೆ ಶಾಮನೂರು ಶಿವಶಂಕಪ್ಪ ಹಾಗೂ ಅವರ ಪುತ್ರ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.

ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ವಿರುದ್ಧ ಯಾರಿಗೆ ಜಯ?

ಈ ಹಿಂದೆ ಐತಿಹಾಸಿಕ ಕುಂದುವಾಡ ಕೆರೆಗೆ ಎಸ್.ಎಸ್.ಮಲ್ಲಿಕಾರ್ಜು ಹೆಸರಿನಲ್ಲಿ 'ಮಲ್ಲಿಕಾರ್ಜುನ ಸಾಗರ' ಅಂತ ನಾಮಕರಣ ಮಾಡಲಾಗಿತ್ತು. ಆದರೆ, ಈಗ ನಗರದ ಟಿವಿ ಸ್ಟೇಷನ್ ಕೆರೆಗೆ ಶಾಮನೂರು ಶಿವಶಂಕರಪ್ಪ ಅವರ ಹೆಸರಿಡಲು ಮಹಾನಗರ ಪಾಲಿಕೆ ಮುಂದಾಗಿದೆ.

BJP opposes Shamanur Shivashankarappa name for lake

ಮಹಾನಗರ ಪಾಲಿಕೆಯ ಈ ನಿರ್ಧಾರಕ್ಕೆ ರಾಜಕೀಯ ಪಕ್ಷಗಳು ಸೇರಿದಂತೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಕೆರೆಯಲ್ಲಿ ಹೆಚ್ಚಿನ ನೀರು ಸಂಗ್ರಹ ಮಾಡುತ್ತೇವೆ ಎಂದು ಅಲ್ಲಿನ ಮಣ್ಣನ್ನು ಕದ್ದು ತಮ್ಮ ಕಾಲೇಜಿಗೆ ಹಾಕಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

'ಕೆರೆ ಅಭಿವೃದ್ದಿಯಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆಸಿರುವ ಶಾಮನೂರು ಶಿವಶಂಕರಪ್ಪ ಹೆಸರಿಡಲು ಮಹಾನಗರ ಪಾಲಿಕೆ ಸದಸ್ಯರು ನಿರ್ಣಯ ಕೊಂಡಿದ್ದಾರೆ. ಊರು ಕೊಳ್ಳೆ ಹೊಡೆದವರ ಹೆಸರು ಯಾವುದೇ ಕಾರಣಕ್ಕೂ ಇಡಬಾರದು, ಊರಿನ ಅಭಿವೃದ್ಧಿಗಾಗಿ ಶ್ರಮಿಸಿದವರ ಹೆಸರಿಡಬೇಕು' ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಒತ್ತಾಯಿಸಿದ್ದಾರೆ.

ಕ್ಷೇತ್ರ ಪರಿಚಯ : ಐತಿಹಾಸಿಕ ಹಿನ್ನಲೆ ಹೊಂದಿರುವ ಹೊನ್ನಾಳಿ

ನಗರಾಭಿವೃದ್ಧಿ ಮಾಡುವುದು ಜನಪ್ರತಿನಿಧಿಗಳ ಕರ್ತವ್ಯ. ಆದರೆ, ಯಾರೋ ಒಬ್ಬರು ಕೆರೆ ಅಭಿವೃದ್ಧಿ ಮಾಡಿದರೂ, ಊರು ಅಭಿವೃದ್ಧಿ ಮಾಡಿದರೂ ಅಂತ ಅವರ ಹೆಸರು ನಾಮಕರಣ ಮಾಡಿದರೆ, ಐದು ವರ್ಷಕ್ಕೊಮ್ಮೆ ಒಬ್ಬೊಬ್ಬರ ಹೆಸರಿಡಬೇಕಾಗತ್ತೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Davanagere district BJP unit opposed to name city's Tv station lake as Shamanur Shivashankarappa. Davanagere city corporation decided to name city's lake.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ