ಮಗನೇ ಸುರಕ್ಷಿತವಾಗಿ ಬಾ: ಹೊನ್ನಾಳಿಯಲ್ಲಿ ಶಾಸಕ ರೇಣುಕಾಚಾರ್ಯ ಕಣ್ಣೀರು

ದಾವಣಗೆರೆ, ನವೆಂಬರ್‌, 02: ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್‌ ನಾಪತ್ತೆ ಆಗಿದ್ದಾನೆ. ಮಗ ಚಂದ್ರಶೇಖರ್‌ನನ್ನು ನೆನೆದು ರೇಣುಕಾಚಾರ್ಯ ಕಣ್ಣೀರಿಟ್ಟಿದ್ದಾರೆ.

ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯರ ಸಹೋದರನ ಮಗ ನಾಪತ್ತೆಯಾಗಿದ್ದು, ಭಾರಿ ಅನುಮಾನ ಮೂಡಿಸಿದೆ. ರೇಣುಕಾಚಾರ್ಯರ ಸಹೋದರನ ಮಗ 27 ವರ್ಷದ ಚಂದ್ರಶೇಖರ್ ನಾಪತ್ತೆಯಾದವರಾಗಿದ್ದಾರೆ. ಇದರಿಂದ ಇಡೀ ಕುಟುಂಬವೇ ಆಘಾತಕ್ಕೊಳಗಾಗಿದೆ. ಚಂದ್ರಶೇಖರ್, ವಿನಯ್ ಗುರೂಜಿ ಭೇಟಿಯಾಗಲು ಭಾನುವಾರ ಗೌರಿಗದ್ದೆಗೆ ತೆರಳಿದ್ದರು. ವಿನಯ್ ಗುರೂಜಿ ಭೇಟಿಯಾದ ಬಳಿಕ ಹೊನ್ನಾಳಿಗೆ ಸಂಜೆ ಹಿಂದಿರುಗಿದ್ದಾರೆ. ಆದರೆ ಹೊನ್ನಾಳಿಯಿಂದ ಮನೆಗೆ ಚಂದ್ರಶೇಖರ್ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಇಡೀ ಕುಟುಂಬ ಚಂದ್ರಶೇಖರ್ ಹುಡುಕಾಟದಲ್ಲಿದೆ. ಪೊಲೀಸರಿಗೆ ಕೊಟ್ಟ ದೂರಿನಲ್ಲೂ ನಾಪತ್ತೆ ಅಂತಾ ಅಷ್ಟೇ ಉಲ್ಲೇಖಿಸಲಾಗಿದೆ. ಚಂದ್ರಶೇಖರ್‌ಗಾಗಿ ಹೊನ್ನಾಳಿ ಪೊಲೀಸರು ತೀವ್ರ ಶೋಧಕಾರ್ಯ ಮುಂದುವರೆಸಿದ್ದಾರೆ. ಇನ್ನು ಸಹೋದರನ ಮಗನನ್ನು ನೆನೆದು ಶಾಸಕ ರೇಣುಕಾಚಾರ್ಯ ಕಣ್ಣೀರಿಟ್ಟಿದ್ದಾರೆ.

ಶಾಸಕ ರೇಣುಕಾಚಾರ್ಯ ಅಣ್ಣನ ಮಗನ ಹುಡುಕಾಟದಲ್ಲಿ ಇದ್ದಾರೆ. ಕಳೆದ ಭಾನುವಾರ ಚಂದ್ರಶೇಖರ್‌ ಶಿವಮೊಗ್ಗದ ಗೌರಿಗದ್ದೆಗೆ ತನ್ನ ಹೊಂಡಾ ಕ್ರೇಟ ಕಾರಿನಲ್ಲಿ ಹೋಗಿ ವಿನಯ್ ಗುರೂಜಿ ಆಶೀರ್ವಾದ ಪಡೆದಿದ್ದರು. ಶಿವಮೊಗ್ಗದಲ್ಲಿ ಸ್ನೇಹಿತರನ್ನು ಮಾತನಾಡಿಸಿ ಸ್ವಲ್ಪ ಕಾಲ ಅವರ ಜೊತೆ ಕಾಲ ಕಳೆದು ಹೊನ್ನಾಳಿಗೆ ಹಿಂದಿರುಗಿದ್ದರು.

ಚಂದ್ರಶೇಖರ್‌ ನೆನೆದು ಶಾಸಕ ಕಣ್ಣೀರು

ಚಂದ್ರಶೇಖರ್‌ ನೆನೆದು ಶಾಸಕ ಕಣ್ಣೀರು

ಮಾಧ್ಯಮಗಳ ಜೊತೆ ಮಾತನಾಡುತ್ತಲೇ ಶಾಸಕ ರೇಣುಕಾಚಾರ್ಯ ಚಂದ್ರಶೇಖರ್‌ನನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಪುತ್ರ ಚಂದ್ರಶೇಖರ್ ತುಂಬಾ ಸೌಮ್ಯ ಸ್ವಭಾವದವನಾಗಿದ್ದನು. ಯಾವತ್ತೂ ಒಂದು ಕೆಟ್ಟ ಪದ ಸಹ ಬಳಸದ ಮಗನಾಗಿದ್ದ. ಆದರೆ ಈಗ ಇದ್ದಕ್ಕಿದ್ದಂತೆ ಕಾಣೆ ಆಗಿದ್ದಾನೆ. ಆತನ ಮೊಬೈಲ್​ ಸಹ ಸ್ವಿಚ್‌ ಆಫ್ ಆಗಿದೆ. ಕಾರ್ ಸಹ ಪತ್ತೆಯಾಗಿಲ್ಲ ಎಂದು ಹೇಳುತ್ತಾ ಕಣ್ಣೀರಿಟ್ಟಿದ್ದಾರೆ. ಮಗ ನಾಪತ್ತೆಯಾದ ದುಃಖದಲ್ಲಿಯೇ ಎರಡು ಕಡೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಂದಿದ್ದೇನೆ. ಪೊಲೀಸರು ಸೇರಿದಂತೆ ಆಪ್ತರು ನನಗೆ ಧೈರ್ಯ ಹೇಳುತ್ತಿದ್ದಾರೆ. ಎಲ್ಲರೂ ಮಗನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಮಗನೇ ಮನೆಗೆ ಬಾ ಎಂದು ಮಾಧ್ಯಮಗಳ ಮೂಲಕ ಕೇಳಿಕೊಂಡು ದುಃಖವನ್ನು ವ್ಯಕ್ತಪಡಿಸಿದ್ದಾರೆ.

ಕಣ್ಣೀರಲ್ಲಿ ಕೈತೊಳೆಯುತ್ತಿರುವ ಕುಟುಂಬಸ್ಥರು

ಕಣ್ಣೀರಲ್ಲಿ ಕೈತೊಳೆಯುತ್ತಿರುವ ಕುಟುಂಬಸ್ಥರು

ನಾನು ಚುನಾವಣೆಯಲ್ಲಿ ಸೋತಾಗಲೂ ಇಷ್ಟೊಂದು ನೋವು ಆಗಿರಲಿಲ್ಲ. ಮಗ ಕಾಣಿಸುತ್ತಿಲ್ಲ ಎಂಬ ಸುದ್ದಿ ಕೇಳಿದಾಗಿನಿಂದ ತುಂಬಾ ಆತಂಕ ಉಂಟಾಗುತ್ತಿದೆ. ಯಾವಾಗಲೂ ಸ್ನೇಹಿತರ ಜೊತೆಯಲ್ಲಿಯೇ ಇರುತ್ತಿದ್ದ ಚಂದ್ರಶೇಖರ್ ಭಾನುವಾರ ಮಾತ್ರ ಒಬ್ಬನೇ ಗೌರಿಗದ್ದೆಗೆ ಹೋಗಿದ್ದಾನೆ ಎಂದು ಮಾಹಿತಿ ನೀಡಿದರು.

ಸುಮಾರು ರಾತ್ರಿ 11:30ಕ್ಕೆ ಫೋನ್‌ ಸ್ವಿಚ್‌ ಆಫ್‌

ಸುಮಾರು ರಾತ್ರಿ 11:30ಕ್ಕೆ ಫೋನ್‌ ಸ್ವಿಚ್‌ ಆಫ್‌

ಕ್ರೇಟಾ ಕಾರಿನಲ್ಲಿ ಗೌರಿಗದ್ದೆ ಹೋಗಿದ್ದ ಚಂದ್ರಶೇಖರ್‌ ಅವರು, ಅದೇ ದಿನ ಗೌರಿಗದ್ದೆಯಿಂದ ಹೊನ್ನಾಳಿ ಕಡೆಗೆ ಹಿಂದಿರುಗಿದ್ದರು. ರಾತ್ರಿ 11:30ರ ಸುಮಾರಿಗೆ ಆತನ ಫೋನ್‌ ಸ್ವಿಚ್‌ ಆಫ್‌ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸೋಮವಾರ ಬೆಳಗ್ಗೆ 6:48ಕ್ಕೆ ಮೊಬೈಲ್‌ ಕೊನೆಯದಾಗಿ ಲೋಕೆಶನ್‌ ತೋರಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಚಂದ್ರಶೇಖರ್‌ ಪತ್ತೆಗೆ ಮುಂದುವರಿದ ಶೋಧ

ಚಂದ್ರಶೇಖರ್‌ ಪತ್ತೆಗೆ ಮುಂದುವರಿದ ಶೋಧ

ಸಹೋದರನ ಮಗ ಎಂದರೆ ರೇಣುಕಾಚಾರ್ಯಗೆ ತುಂಬಾನೆ ಅಚ್ಚುಮೆಚ್ಚು. ಇತ್ತೀಚೆಗೆ ರೇಣುಕಾಚಾರ್ಯರ ಜೊತೆ ಚಂದ್ರಶೇಖರ್‌ ಸಕ್ರಿಯವಾಗಿ ಕ್ಷೇತ್ರದಲ್ಲಿ ಓಡಾಡಿಕೊಂಡು ಇರುವ ಫೋಟೋಗಳು ವೈರಲ್‌ ಆಗಿದ್ದವು. ತನ್ನ ಕ್ಷೇತ್ರದ ಪ್ರತಿಯೊಂದು ಹಳ್ಳಿಗೆ ಭೇಟಿ ನೀಡುತ್ತಿದ್ದ ಚಂದ್ರಶೇಖರ್‌ ಇದೀಗ ಇದ್ದಕ್ಕಿದ್ದಂತೆ ನಾಪತ್ತೆ ಆಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಲ್ಲದೇ ಚಂದ್ರಶೇಖರ್‌ ನಾಪತ್ತೆಯಾದ ವಿಷಯ ತಿಳಿಯುತ್ತಿದ್ದಂತೆ ಕುಟುಂಬದವರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತಂಡ ರಚಿಸಿಕೊಂಡು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಹಲವೆಡೆ ತೀವ್ರ ಶೋಧ ಕಾರ್ಯ ಮುಂದುವರೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+