ದಾವಣಗೆರೆ ಪಾಲಿಕೆಯಿಂದ ಬಂತು ಖಡಕ್ ಎಚ್ಚರಿಕೆ!
ಮಧ್ಯವರ್ತಿಗಳು ಕಾಳ ಸಂತೆಯಲ್ಲಿ ಕಂಪ್ಯೂಟರ್ ಮುಖಾಂತರ ಎಡಿಟ್ ಮಾಡಿ ಬೇರೆಯವರ ಹೆಸರಿನಲ್ಲಿ ಸುಳ್ಳು ಪ್ರಮಾಣ ಪತ್ರಗಳನ್ನು ನೀಡುತ್ತಿದ್ದಾರೆ. ಈ ಇದೆಲ್ಲವನ್ನು ಪಾಲಿಕೆ ಕಛೇರಿ ಗಮನಿಸುತ್ತಿದ್ದು, ಇಂಥ ಕೃತ್ಯದಲ್ಲಿ ತೊಡಗುದು ಶಿಕ್ಷಾರ್ಹ ಅಪರಾಧ
ದಾವಣಗೆರೆ, ಮಾರ್ಚ್ 24: ಮಹಾನಗರ ಪಾಲಿಕೆಯಿಂದ ಸಾರ್ವಜನಿಕ ಸೇವೆಗಳಾದ ಜನನ-ಮರಣ ಪ್ರಮಾಣ ಪತ್ರ, ಉದ್ದಿಮೆ ಪರವಾನಿಗೆ, ಜಲನಿಧಿ ಹಾಗೂ ಇನ್ನಿತರೆ ಸೇವೆಗಳನ್ನು ಆನ್‌ಲೈನ್ ಮೂಲಕ ನೀಡಲಾಗುತ್ತಿದೆ. ಆದರೆ, ಇತ್ತೀಚೆಗೆ ಪ್ರಮಾಣ ಪತ್ರಗಳ ನಕಲಿ ಹಾವಳಿ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಪಾಲಿಕೆ ಖಡಕ್ ಎಚ್ಚರಿಕೆ ನೀಡಿದೆ.
ಕೆಲವು ಮಧ್ಯವರ್ತಿಗಳು ಕಾಳ ಸಂತೆಯಲ್ಲಿ ಕಂಪ್ಯೂಟರ್ ಮುಖಾಂತರ ಎಡಿಟ್ ಮಾಡಿ ಬೇರೆಯವರ ಹೆಸರಿನಲ್ಲಿ ಸುಳ್ಳು ಪ್ರಮಾಣ ಪತ್ರಗಳನ್ನು ನೀಡುತ್ತಿದ್ದಾರೆ. [ಬೇಸಿಗೆ 2017: ದಾವಣಗೆರೆ 'ಜಲ ಸಿರಿ' ಕಾಣದ ಶ್ರೀಮಂತ ಜಿಲ್ಲೆ]
ಈ ಇದೆಲ್ಲವನ್ನು ಪಾಲಿಕೆ ಕಛೇರಿ ಗಮನಿಸುತ್ತಿದ್ದು, ಇಂಥ ಕೃತ್ಯದಲ್ಲಿ ತೊಡಗುದು ಶಿಕ್ಷಾರ್ಹ ಅಪರಾಧವಾಗುತ್ತದೆ.[ಮದುವೆ ಪ್ರಮಾಣ ಪತ್ರ ಪಡೆಯುವುದು ಹೇಗೆ? ಏಕೆ?]
ಹಾಗೂ ಸದರಿ ಪ್ರಮಾಣ ಪತ್ರಗಳನ್ನು ಪಡೆದವರು ಹಾಗೂ ನೀಡಿದವರು ಸಹ ಐಟಿ ಕಾಯ್ದೆ 2000 ಕಲಂ 66(ಸಿ) ಮತ್ತು 66 (ಡಿ) ಅನ್ವಯ ಅಪರಾಧಿಗಳಾಗುತ್ತಾರೆ.

ಆದ್ದರಿಂದ ಈ ಕಛೇರಿಯಿಂದ ವಾರ್ಡ್‌ವಾರು 41 ಜನ ನೌಕರರನ್ನು ನೋಡಲ್ ಅಧಿಕಾರಿಗಳೆಂದು ನೇಮಕ ಮಾಡಲಾಗಿರುತ್ತದೆ.
ಸದರಿ ನೌಕರರು ತಮಗೆ ನಿಯೋಜಿಸಿದ ವಾರ್ಡ್‌ಗಳಲ್ಲಿರುವ ಯಾವುದೇ ಅಂಗಡಿ/ಮಳಿಗೆ ಇನ್ನಿತರೆ ವಿಷಯಗಳನ್ನು ಪರಿಶೀಲಿಸಲು ಅಧಿಕಾರ ಹೊಂದಿರುತ್ತಾರೆ. [ಜನನ ಪ್ರಮಾಣ ಪತ್ರ ಪಡೆಯುವುದು ಹೇಗೆ?]
ಇಂತಹ ಸುಳ್ಳು ಸರ್ಟಿಫಿಕೇಟ್ ಕಂಡು ಬಂದಲ್ಲಿ ಅಂತಹವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ಮೇಲ್ಕಂಡ ಕಾಯ್ದೆ ಅಡಿಯಲ್ಲಿ ಹಾಕಲಾಗುವುದು ಎಂದು ಪಾಲಿಕೆ ಪ್ರಕಟಣೆ ತಿಳಿಸಿದೆ.












Click it and Unblock the Notifications