Arecanut Price: ಕ್ವಿಂಟಾಲ್ ಅಡಿಕೆ ಧಾರಣೆ ಎಷ್ಟಿದೆ ಗೊತ್ತಾ? ಇಲ್ಲಿದೆ ನವೆಂಬರ್ 22ರ ದರಪಟ್ಟಿ
Arecanut Price: ರಾಜ್ಯದಲ್ಲಿ ಇಳಿಕೆಯತ್ತ ಹೊರಟಿದ್ದ ಅಡಿಕೆ ಧಾರಣೆ ಇದೀಗ ಭರ್ಜರಿ ಸುಧಾರಣೆ ಕಂಡಿದೆ. ಇದರಿಂದ ಬೆಳೆಗಾರರ ಮುಖದಲ್ಲಿ ಮಂದಹಾಸ ಹೆಚ್ಚಾಗಿದೆ. ಹಾಗಾದ್ರೆ, ಇದೀಗ ಪ್ರಸ್ತುತ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಇದೀಗ ಸದ್ಯ ಅಡಿಕೆ ಕೊಯ್ಲಿನ ಸಮಯ ಆಗಿದ್ದು, ಈ ವೇಳೆಯೇ ಅಡಿಕೆ ಧಾರಣೆ ಮತ್ತೆ ಏರಿಕೆಯಾಗಿರುವುದು ಬೆಳೆಗಾರರ ಮುಖದಲ್ಲಿ ಸಂತಹ ಹೆಚ್ಚಾಗಿದೆ. ಅದರಲ್ಲೂ ಚನ್ನಗಿರಿ, ಹೊನ್ನಾಳಿ, ದಾವಣಗೆರೆ ತಾಲೂಕು ಸೇರಿ ಜಿಲ್ಲೆಯ ಹಲವೆಡೆ ಅಡಿಕೆನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಹಾಗಾದ್ರೆ, ಇಂದು (ನವೆಂಬರ್ 22) ದಾವಣಗೆರೆ ಮಾರುಕಟ್ಟೆಯಲ್ಲಿ ದರ ಎಷ್ಟಿದೆ ತಿಳಿಯಿರಿ.

ಅಡಿಕೆ ದಾವಣಗೆರೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಇಂದು (ನವೆಂಬರ್ 22) ರಾಶಿ ಅಡಿಕೆ ಧಾರಣೆ (ಕ್ವಿಂಟಾಲ್‌ಗಳಲ್ಲಿ) ಗರಿಷ್ಠ ದರ 60,555 ರೂಪಾಯಿ, ಕನಿಷ್ಠ ದರ 57,212 ರೂಪಾಯಿ ಇದ್ದು, ಸರಾಸರಿ ಬೆಲೆ 58,699 ರೂಪಾಯಿ ಇದೆ. ಈ ಮೂಲಕ ಇಂದು ಕೂಡ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಯಾವುದೇ ಏರಿಳಿತಗಳು ಆಗಿಲ್ಲ. ಆದರೆ, ಕಳೆದ ಕೆಲ ದಿನಗಳ ಹಿಂದೆ ಇಳಿಕೆಯತ್ತ ಹೊರಟಿದ್ದ ದರ ಇದೀಗ ದೊಡ್ಡ ಮಟ್ಟದಲ್ಲಿ ಸುಧಾರಣೆ ಆಗಿರುವುದು ಬೆಳೆಗಾರರಲ್ಲಿ ಸಂಸತ ಹೆಚ್ಚಿಸಿದೆ.
ಸದ್ಯ ಅಡಿಕೆ ಧಾರಣೆ ಏರುಮುಖ ಮಾಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಭರವಸೆಯಲ್ಲಿ ಬೆಳೆಗಾರರಿದ್ದಾರೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ ಭಾಗದಲ್ಲಿ ಇದೇ ವರ್ಷದ ಅಂದರೆ 2025ರ ಜನವರಿ ಕೊನೆಯಲ್ಲಿ 52,000 ರೂಪಾಯಿ ಒಳಗಡೆ ಇದ್ದ ಕ್ವಿಂಟಾಲ್ ಅಡಿಕೆ ಧಾರಣೆ, ಫೆಬ್ರವರಿಯಲ್ಲಿ ಮತ್ತೆ 53,000 ರೂಪಾಯಿ ಗಡಿ ದಾಟಿತ್ತು.
ಆಗಿನಿಂದಲೂ ಸತತ ಏರಿಕೆ ಆಗುತ್ತಲಿತ್ತು. ಕೊನೆಗೂ ಏಪ್ರಿಲ್ ಅಂತ್ಯದಲ್ಲಿ 60,000 ರೂಪಾಯಿ ಗಡಿ ದಾಟಿತ್ತು. ಅಕ್ಟೋಬರ್ ನಾಲ್ಕನೇ ವಾರದ ಆರಂಭದಲ್ಲಿ 70,000 ರೂಪಾಯಿ ಸಮೀಪದತ್ತ ಬಂದಿತ್ತು. ಇನ್ನೇನು ಕೆಲವೇ ದಿನಗಳಲ್ಲಿ 70,000 ರೂಪಾಯಿ ಮುಟ್ಟುತ್ತದೆ ಅನ್ನುವಷ್ಟರಲ್ಲೇ ಧಾರಣೆ ಇಳಿಮುಖ ಮಾಡಿತ್ತು. ಆದರೆ ಇದೀಗ ಮತ್ತೆ ಏರಿಕೆಯತ್ತ ಹೊರಟಿದ್ದು, ಇದನ್ನು ಗಮನಿಸಿದರೆ ನವೆಂಬವೊಳಗೆ ಇದೇ ದರದತ್ತ ಸಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಮೇ ತಿಂಗಳ ಆರಂಭದಿಂದಲೂ ಜೂನ್ ತಿಂಗಳ ಕೆಲವು ವಾರಗಳವರೆಗೆ ಇಳಿಕೆಯಾಗಿ ಮತ್ತೆ ಏರಿಕೆಯತ್ತ ಸಾಗಿತ್ತು. ಬಳಿಕ ಜೂನ್ ತಿಂಗಳ ಮಧ್ಯದಿಂದಲೂ ಜುಲೈ ಮೊದಲ ವಾರದ ಮಧ್ಯದವರೆಗೂ ಇಳಿಕೆ ಆಗುತ್ತಲೇ ಬಂದಿತ್ತು. ಇನ್ನು 2023ರ ಜುಲೈ ತಿಂಗಳಲ್ಲಿ ಗರಿಷ್ಠ ದರ 57,000 ರೂಪಾಯಿ ಮುಟ್ಟಿತ್ತು. ಕಳೆದ ವರ್ಷ 2024ರ ಮೇ ತಿಂಗಳಿನಲ್ಲಿ ಗರಿಷ್ಠ 55,000 ರೂಪಾಯಿಗೆ ತಲುಪಿತ್ತು.
2025ರ ಜುಲೈ ಮೊದಲ ವಾರದ ಮಧ್ಯದವರೆಗೂ ಇಳಿಕೆಯತ್ತ ಸಾಗುತ್ತಾ ಬಂದಿತ್ತು. ಜುಲೈಗೆ ಹೋಲಿಕೆ ಮಾಡಿದರೆ, ಆಗಸ್ಟ್‌ನಲ್ಲಿ ಧಾರಣೆಯಲ್ಲಿ ತುಸು ಸುಧಾರಣೆ ಕಂಡಿತ್ತು. ಆದರೆ, ಕೊನೆಯಲ್ಲಿ ತುಸು ಇಳಿಕೆಯಾಗಿ ಮತ್ತೆ ಸೆಪ್ಟೆಂಬರ್ ಅಂತ್ಯದಲ್ಲಿ ತುಸು ಏರಿಕೆಯತ್ತ ಹೊರಟ್ಟಿತ್ತು. ಬಳಿಕ ಅಕ್ಟೋಬರ್ ಅಂತ್ಯದವರೆಗೂ ಸತತವಾಗಿ ಏರಿಕೆ ಹಾದಿ ಹಿಡಿದಿತ್ತು. ಬಳಿಕ ಸತತ ಇಳಿಕೆಯ ಹಾದಿ ಹಿಡಿದಿದ್ದು, ಇದೀಗ ನವೆಂಬರ್ ಮಧ್ಯದಿಂದ ಸತತ ಭರ್ಜರಿ ಏರಿಕೆಯತ್ತ ಹೊರಟಿದೆ. ಇದೀಗ ಇಂದು ನಿನ್ನೆಯ ದರವನ್ನೇ ಕಾಯ್ದುಕೊಂಡಿದೆ.












Click it and Unblock the Notifications