Arecanut price: ಅಕ್ಟೋಬರ್ 6ರಂದು ಅಡಿಕೆ ಧಾರಣೆ ಎಷ್ಟಿದೆ ಗೊತ್ತಾ? ಇಲ್ಲಿದೆ ದರಪಟ್ಟಿ
Arecanut Price: ಆರಕ್ಕೆ ಏರಲಿಲ್ಲ ಮೂರಕ್ಕೆ ಇಳಿಯಲಿಲ್ಲ ಎಂಬ ಮಾತಿನಂತೆ ರಾಜ್ಯದಲ್ಲಿ ಅಡಿಕೆ ಧಾರಣೆ ಕಳೆದ ಒಂದು ವಾರದಿಂದಲೂ ಒಂದೇ ದರವನ್ನು ಕಾಯ್ದುಕೊಂಡಿದೆ. ಸೆಪ್ಟೆಂಬರ್‌ಗೆ ಹೋಲಿಕೆ ಮಾಡಿದ್ರೆ ಅಕ್ಟೋಬರ್ ಭಾರೀ ಏರಿಕೆಯಾಗಿದೆ. ಇದರಿಂದ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದ್ದು, ಮುಂದಿನ ದಿನಗಳಲ್ಲಾದರೂ ಇದಕ್ಕಿಂತಲೂ ಉತ್ತಮ ಬೆಲೆ ಸಿಗುವ ಭರವಸೆಯಲ್ಲಿ ಇದ್ದಾರೆ.
ರಾಜ್ಯದಲ್ಲಿ ಅಡಿಕೆ ಧಾರಣೆ ಇದೀಗ ಸದ್ಯ ಸ್ಥಿರತೆ ಕಾಯ್ದುಕೊಂಡಿದೆ. ಬೆಳಗಾರರಿಗೆ ಸಂತಸದ ವಿಚಾರ ಅಂದ್ರೆ, ಸೆಪ್ಟೆಂಬರ್‌ಗೆ ಹೋಲಿಸಿದ್ರೆ, ಅಕ್ಟೋಬರ್‌ನಲ್ಲಿ ಭರ್ಜರಿ ಏರಿಕೆಯಾಗಿರುವುದು. ಅದರಲ್ಲೂ ಚನ್ನಗಿರಿ, ಹೊನ್ನಾಳಿ, ದಾವಣಗೆರೆ ತಾಲೂಕು ಸೇರಿದಂತೆ ಜಿಲ್ಲೆಯ ಹಲವೆಡೆ ಅಡಿಕೆನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ಭಾಗಗಳ ಜನರು ಸಾಮಾನ್ಯವಾಗಿ ಅಡಿಕೆಯನ್ನು ಶಿವಮೊಗ್ಗ ಮಾರುಕಟ್ಟಗೆ ಹಾಕುತ್ತಾರೆ. ಹಾಗಾದ್ರೆ ಇಂದು (ಅಕ್ಟೋಬರ್ 6) ದರ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ತಿಳಿಯಿರಿ.

ಅಡಿಕೆ ದಾವಣಗೆರೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಜಿಲ್ಲೆಯಲ್ಲಿ ಇಂದು (ಅಕ್ಟೋಬರ್ 6) ಕ್ವಿಂಟಾಲ್ ಅಡಿಕೆ ಗರಿಷ್ಠ ದರ 64,329 ರೂಪಾಯಿಗೆ ಇದೆ. ಕಳೆದ ಒಂದು ವಾರದಿಂದಲೂ ಇದೇ ದರ ಕಾಯ್ದುಕೊಂಡು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಏರಿಕೆ ಆಗುವ ಭರವಸೆಯಲ್ಲಿ ಬೆಳೆಗಾರರಿದ್ದಾರೆ.
ಪ್ರಸ್ತುತ ಅಡಿಕೆ ಧಾರಣೆ (ಕ್ವಿಂಟಾಲ್‌ಗಳಲ್ಲಿ) ಗರಿಷ್ಠ ದರ 64,329 ರೂಪಾಯಿ, ಕನಿಷ್ಠ ದರ 51,000 ರೂಪಾಯಿ ಇದ್ದು, ಸರಾಸರಿ ಬೆಲೆ 64,099 ರೂಪಾಯಿ ಇದೆ. ಕಳೆದ ಕೆಲ ತಿಂಗಳುಗಳ ಹಿಂದೆ 55,000 ರೂಪಾಯಿಗಿಂತ ಕೆಳಗಿಳಿದಿತ್ತುಯ. ಬಳಿಕ ಏರಿಕೆಯಾಗಿ ಬಳಿಕ ಇಳಿಕೆಯತ್ತ ಹೊರಟಿದ್ದ ದರ ಇದೀಗ ಮತ್ತೆ ಭರ್ಜರಿ ಏರುಮುಖದತ್ತ ಓಟ ಮುಂದುವರೆಸಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ ಭಾಗದಲ್ಲಿ ಇದೇ ವರ್ಷದ ಅಂದರೆ 2025ರ ಜನವರಿ ಕೊನೆಯಲ್ಲಿ 52,000 ರೂಪಾಯಿ ಒಳಗಡೆ ಇದ್ದ ಕ್ವಿಂಟಾಲ್ ಅಡಿಕೆ ಧಾರಣೆ, ಫೆಬ್ರವರಿಯಲ್ಲಿ ಮತ್ತೆ 53,000 ರೂಪಾಯಿ ಗಡಿ ದಾಟಿತ್ತು. ಆಗಿನಿಂದಲೂ ಸತತ ಏರಿಕೆ ಆಗುತ್ತಲಿತ್ತು. ಕೊನೆಗೂ ಏಪ್ರಿಲ್ ಅಂತ್ಯದಲ್ಲಿ 60,000 ರೂಪಾಯಿ ಗಡಿ ದಾಟಿತ್ತು. ಇದೀಗ ಕಳೆದ ಕೆಲವು ದಿನಗಳಿಂದ 65,000 ರೂಪಾಯಿವರೆಗೂ ಬಂದು ಇಳಿಕೆಯಾಗಿ, ಮತ್ತೆ ಇದರೊಳಗೆ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಿದೆ.
ಮೇ ತಿಂಗಳ ಆರಂಭದಿಂದಲೂ ಜೂನ್ ತಿಂಗಳ ಕೆಲವು ವಾರಗಳವರೆಗೆ ಇಳಿಕೆಯಾಗಿ ಮತ್ತೆ ಏರಿಕೆಯತ್ತ ಸಾಗಿತ್ತು. ಬಳಿಕ ಜೂನ್ ತಿಂಗಳ ಮಧ್ಯದಿಂದಲೂ ಜುಲೈ ಮೊದಲ ವಾರದ ಮಧ್ಯದವರೆಗೂ ಇಳಿಕೆ ಆಗುತ್ತಲೇ ಬಂದಿತ್ತು. ಇನ್ನು 2023ರ ಜುಲೈ ತಿಂಗಳಲ್ಲಿ ಗರಿಷ್ಠ ದರ 57,000 ರೂಪಾಯಿ ಮುಟ್ಟಿತ್ತು. ಕಳೆದ ವರ್ಷ 2024ರ ಮೇ ತಿಂಗಳಿನಲ್ಲಿ ಗರಿಷ್ಠ 55,000 ರೂಪಾಯಿಗೆ ತಲುಪಿತ್ತು.
2025ರ ಜುಲೈ ಮೊದಲ ವಾರದ ಮಧ್ಯದವರೆಗೂ ಇಳಿಕೆಯತ್ತ ಸಾಗುತ್ತಾ ಬಂದಿತ್ತು. ಜುಲೈಗೆ ಹೋಲಿಸಿದರೆ, ಆಗಸ್ಟ್‌ನಲ್ಲಿ ಧಾರಣೆಯಲ್ಲಿ ತುಸು ಸುಧಾರಣೆ ಆಗಿತ್ತು. ಆದರೆ, ಕೊನೆಯಲ್ಲಿ ತುಸು ಇಳಿಕೆಯಾಗಿ ಮತ್ತೆ ಸೆಪ್ಟೆಂಬರ್ ಅಂತ್ಯದಲ್ಲಿ ತುಸು ಏರಿಕೆಯತ್ತ ಹೊರಟ್ಟಿತ್ತು. ಬಳಿಕ ಅಕ್ಟೋಬರ್‌ನಲ್ಲಿ ಸತತವಾಗಿ ಏರಿಕೆಯಾಗುತ್ತಾ ಬಂದಿದ್ದು, ಈ ತಿಂಗಳ ಮೊದಲ ವಾರದಲ್ಲಿ ಧಾರಣೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡಿದೆ.
ಇನ್ನು ಈ ಬಾರಿ ರಾಜ್ಯಕ್ಕೆ ವಾಡಿಕೆಯಂತೆ ಜೂನ್ ಆರಂಭದಲ್ಲೇ ಮುಂಗಾರು ಎಂಟ್ರಿ ಕೊಟ್ಟಿದ್ದು, ಬಹುತೇಕ ಜಿಲ್ಲೆಗಳಲ್ಲಿ ಅಬ್ಬರದ ಮಳೆಯಾಗಿದೆ. ಈ ಹಿನ್ನೆಲೆ ಫಸಲು ಸಹ ಅಷ್ಟೇ ಚೆನ್ನಾಗಿ ಬಂದಿದೆ. ಇದೀಗ ಸದ್ಯ ಧಾರಭೆ ಏರುಗತಿಯಲ್ಲಿಯಲ್ಲಿ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಏರಿಕೆಯಾಗುವ ಭರವಸೆ ಅಡಿಕೆ ಬೆಳೆಗಾರರದ್ದಾಗಿದೆ.












Click it and Unblock the Notifications