Arecanut price: ಕ್ವಿಂಟಾಲ್ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ನವೆಂಬರ್ 13ರ ದರಪಟ್ಟಿ
Arecanut Price: ರಾಜ್ಯದಲ್ಲಿ ಅಡಿಕೆ ಧಾರಣೆ ಇದೀಗ ಭರ್ಜರಿ ಏರಿಕೆಯಾಗಿದೆ. ಕಳೆದ ಎರಡ್ಮೂರು ದಿನಗಳಿಂದ ಏರುಮುಖ ಮಾಡಿದ್ದು, ಇದರಿಂದ ಬೆಳೆಗಾರರ ಮುಖದಲ್ಲಿ ಮಂದಹಾಸ ಹೆಚ್ಚಾದಂತಾಗಿದೆ. ಹಾಗಾದ್ರೆ ಪ್ರಸ್ತುತ ದರಪಟ್ಟಿ ಎಷ್ಟಿದ ಎನ್ನುವ ಸಂಪೂರ್ಣ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಇದೀಗ ಸದ್ಯ ಅಡಿಕೆ ಕೊಯ್ಲಿನ ಸಮಯವಾಗಿದೆ. ಈ ವೇಳೆಯೇ ಅಡಿಕೆ ಧಾರಣೆ ಮತ್ತೆ ಏರಿಕೆಯಾಗಿರುವುದು ಬೆಳೆಗಾರರಲ್ಲಿ ಮುಖದಲ್ಲಿ ಸಂತಸ ಹೆಚ್ಚಾಗುವಂತೆ ಮಾಡಿದೆ. ಅದರಲ್ಲೂ ಚನ್ನಗಿರಿ, ಹೊನ್ನಾಳಿ, ದಾವಣಗೆರೆ ತಾಲೂಕು ಸೇರಿ ಜಿಲ್ಲೆಯ ಹಲವೆಡೆ ಅಡಿಕೆನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಹಾಗಾದ್ರೆ, ಇಂದು (ನವೆಂಬರ್ 13) ದಾವಣಗೆರೆ ಮಾರುಕಟ್ಟೆಯಲ್ಲಿ ದರ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ದಾವಣಗೆರೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಅಡಿಕೆಯಾಗಿದೆ. ಜಿಲ್ಲೆಯಲ್ಲಿ ಇಂದು (ನವೆಂಬರ್ 13) ರಾಶಿ ಅಡಿಕೆ ಧಾರಣೆ (ಕ್ವಿಂಟಾಲ್‌ಗಳಲ್ಲಿ) ಗರಿಷ್ಠ ದರ 59,331 ರೂಪಾಯಿ, ಕನಿಷ್ಠ ದರ 56,699 ರೂಪಾಯಿ ಇದ್ದು, ಸರಾಸರಿ ಬೆಲೆ 58,530 ರೂಪಾಯಿ ಇದೆ. ಕಳೆದ ಕೆಲ ದಿನಗಳ ಹಿಂದೆ ಇಳಿಕೆಯತ್ತ ಸಾಗಿದ್ದ ದರ ಇದೀಗ ಚೇತರಿಕೆಯಾಗಿದ್ದು, ಮತ್ತೆ 60,000 ಸಮೀಪದತ್ತ ಹೊರಟಿದೆ.
ಸದ್ಯ ಅಡಿಕೆ ಧಾರಣೆ ಏರುಮುಖ ಮಾಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆ ಆಗುವ ಭರವಸೆಯಲ್ಲಿ ಬೆಳೆಗಾರರಿದ್ದಾರೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ ಭಾಗದಲ್ಲಿ ಇದೇ ವರ್ಷದ ಅಂದರೆ 2025ರ ಜನವರಿ ಕೊನೆಯಲ್ಲಿ 52,000 ರೂಪಾಯಿ ಒಳಗಡೆ ಇದ್ದ ಕ್ವಿಂಟಾಲ್ ಅಡಿಕೆ ಧಾರಣೆ, ಫೆಬ್ರವರಿಯಲ್ಲಿ ಮತ್ತೆ 53,000 ರೂಪಾಯಿ ಗಡಿ ದಾಟಿತ್ತು.
ಆಗಿನಿಂದಲೂ ಸತತ ಏರಿಕೆ ಆಗುತ್ತಲಿತ್ತು. ಕೊನೆಗೂ ಏಪ್ರಿಲ್ ಅಂತ್ಯದಲ್ಲಿ 60,000 ರೂಪಾಯಿ ಗಡಿ ದಾಟಿತ್ತು. ದೀಪಾವಳಿ ಸಮಯದಲ್ಲಿ ಅಂದರೆ ಅಕ್ಟೋಬರ್ ನಾಲ್ಕನೇ ವಾರದ ಆರಂಭದಲ್ಲಿ 70,000 ರೂಪಾಯಿ ಸಮೀಪದತ್ತ ಬಂದಿತ್ತು. ಇನ್ನೇನು ಕೆಲವೇ ದಿನಗಳಲ್ಲಿ 70,000 ರೂಪಾಯಿ ಮುಟ್ಟುತ್ತದೆ ಅನ್ನುವಷ್ಟರಲ್ಲೇ ಧಾರಣೆ ಇಳಿಮುಖ ಮಾಡಿತ್ತು. ಆದರೆ ಇದೀಗ ಮತ್ತೆ ಏರಿಕೆಯತ್ತ ಹೊರಟಿದೆ.
ಮೇ ತಿಂಗಳ ಆರಂಭದಿಂದಲೂ ಜೂನ್ ತಿಂಗಳ ಕೆಲವು ವಾರಗಳವರೆಗೆ ಇಳಿಕೆಯಾಗಿ ಮತ್ತೆ ಏರಿಕೆಯತ್ತ ಸಾಗಿತ್ತು. ಬಳಿಕ ಜೂನ್ ತಿಂಗಳ ಮಧ್ಯದಿಂದಲೂ ಜುಲೈ ಮೊದಲ ವಾರದ ಮಧ್ಯದವರೆಗೂ ಇಳಿಕೆಯಾಗುತ್ತಲೇ ಬಂದಿತ್ತು. ಇನ್ನು 2023ರ ಜುಲೈ ತಿಂಗಳಲ್ಲಿ ಗರಿಷ್ಠ ದರ 57,000 ರೂಪಾಯಿ ಮುಟ್ಟಿತ್ತು. ಕಳೆದ ವರ್ಷ 2024ರ ಮೇ ತಿಂಗಳಿನಲ್ಲಿ ಗರಿಷ್ಠ 55,000 ರೂಪಾಯಿಗೆ ತಲುಪಿತ್ತು.
2025ರ ಜುಲೈ ಮೊದಲ ವಾರದ ಮಧ್ಯದವರೆಗೂ ಇಳಿಕೆಯತ್ತ ಸಾಗುತ್ತಾ ಬಂದಿತ್ತು. ಜುಲೈಗೆ ಹೋಲಿಕೆ ಮಾಡಿದರೆ, ಆಗಸ್ಟ್‌ನಲ್ಲಿ ಧಾರಣೆಯಲ್ಲಿ ತುಸು ಸುಧಾರಣೆ ಕಂಡಿತ್ತು. ಆದರೆ, ಕೊನೆಯಲ್ಲಿ ತುಸು ಇಳಿಕೆಯಾಗಿ ಮತ್ತೆ ಸೆಪ್ಟೆಂಬರ್ ಅಂತ್ಯದಲ್ಲಿ ತುಸು ಏರಿಕೆಯತ್ತ ಹೊರಟ್ಟಿತ್ತು. ಬಳಿಕ ಅಕ್ಟೋಬರ್ ಎರಡನೇ ವಾರದಿಂದ ನಾಲ್ಕನೆ ವಾರದ ಆರಂಭದವರೆಗೂ ಸತತವಾಗಿ ಏರಿಕೆ ಹಾದಿ ಹಿಡಿದಿತ್ತು. ಬಳಿಕ ಸತತ ಇಳಿಕೆಯ ಹಾದಿ ಹಿಡಿದಿದ್ದು, ಇದೀಗ ಮತ್ತೆ ಏರುಮುಖ ಮಾಡಿದೆ.
2025ರ ಜೂನ್ ಆರಂಭದಲ್ಲೇ ರಾಜ್ಯಕ್ಕೆ ಮುಂಗಾರು ಎಂಟ್ರಿ ಕೊಟ್ಟಿದ್ದು, ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಇದರಿಂದ ಅಡಿಕೆ ಫಸಲು ಸಹ ಅಷ್ಟೇ ಚೆನ್ನಾಗಿ ಬಂದಿದೆ. ಮತ್ತೊಂದೆಡೆ ಕಳೆದ ಕೆಲ ದಿನಗಳಿಂದ ಸತತ ಇಳಿಕೆ ಕಂಡಿದ್ದ ಧಾರಣೆ ಇದೀಗ ಭಾರೀ ಏರಿಕೆಯಾಗುತ್ತಿದೆ. ಇದರಿಂದ ಅಡಿಕೆ ಬೆಳೆಗಾರರಲ್ಲಿ ಮಂದಹಾಸ ಹೆಚ್ಚಾದಂತಾಗಿದೆ.












Click it and Unblock the Notifications