Arecanut price: ಕ್ವಿಂಟಾಲ್ ಅಡಿಕೆ ಧಾರಣೆ ಎಷ್ಟಿದೆ ಗೊತ್ತಾ?: ಇಲ್ಲಿದೆ ಅಕ್ಟೋಬರ್ 26ರ ದರಪಟ್ಟಿ
Arecanut Price: ರಾಜ್ಯದಲ್ಲಿ ಕಳೆದ ಕೆಲ ವಾರಗಳಿಂದ ಭರ್ಜರಿ ಏರಿಕೆಯಾಗುತ್ತಾ ಬಂದಿತ್ತು. ಇನ್ನು ಚನ್ನಗಿರಿ, ಹೊನ್ನಾಳಿ, ದಾವಣಗೆರೆ ತಾಲೂಕು ಸೇರಿ ಜಿಲ್ಲೆಯ ಹಲವೆಡೆ ಅಡಿಕೆನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಹಾಗಾದ್ರೆ, ಇಂದು (ಅಕ್ಟೋಬರ್ 26) ದಾವಣಗೆರೆ ಮಾರುಕಟ್ಟೆಯಲ್ಲಿ ದರ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ದಾವಣಗೆರೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಅಡಿಕೆಯಾಗಿದೆ. ಜಿಲ್ಲೆಯಲ್ಲಿ ಇಂದು (ಅಕ್ಟೋಬರ್ 26) ಸಹ ರಾಶಿ ಅಡಿಕೆ ಧಾರಣೆ (ಕ್ವಿಂಟಾಲ್‌ಗಳಲ್ಲಿ) ಗರಿಷ್ಠ ದರ 66,669 ರೂಪಾಯಿ, ಕನಿಷ್ಠ ದರ 61,279 ರೂಪಾಯಿ ಇದ್ದು, ಸರಾಸರಿ ಬೆಲೆ 65,565 ರೂಪಾಯಿ ಇದೆ. ಈ ಮೂಲಕ ನಿನ್ನೆಯ ದರವನ್ನೇ ಕಾಯ್ದುಕೊಂಡಿದೆ. ಕಳೆದ ಕೆಲ ತಿಂಗಳುಗಳ ಹಿಂದೆ 55,000 ರೂಪಾಯಿಗಿಂತ ಕೆಳಗಿಳಿದಿತ್ತು.

ನಂತರ ಏರಿಕೆಯಾಗಿ ಬಳಿಕ ಇಳಿಕೆಯತ್ತ ಹೊರಟಿದ್ದ ದರ ಮತ್ತೆ ಭರ್ಜರಿ ಏರಿಕೆಯಾಗಿತ್ತು. ಆದರೆ ಇದೀಗ ಮತ್ತೆ ಆಡಿದ್ದೇ ಆಟ ಎಂಬಂತೆ ದಿಢೀರ್ ಇಳಿಮುಖ ಮಾಡಿದೆ. ಮುಂದಿನ ದಿನಗಳಲ್ಲಿ ಮತ್ತೆ ಏರಿಕೆಯಾಗುವ ಭರವಸೆಯಲ್ಲಿ ಬೆಳೆಗಾರರು ಇದ್ದಾರೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ ಭಾಗದಲ್ಲಿ ಇದೇ ವರ್ಷದ ಅಂದರೆ 2025ರ ಜನವರಿ ಕೊನೆಯಲ್ಲಿ 52,000 ರೂಪಾಯಿ ಒಳಗಡೆ ಇದ್ದ ಕ್ವಿಂಟಾಲ್ ಅಡಿಕೆ ಧಾರಣೆ, ಫೆಬ್ರವರಿಯಲ್ಲಿ ಮತ್ತೆ 53,000 ರೂಪಾಯಿ ಗಡಿ ದಾಟಿತ್ತು.
ಆಗಿನಿಂದಲೂ ಸತತ ಏರಿಕೆ ಆಗುತ್ತಲಿತ್ತು. ಕೊನೆಗೂ ಏಪ್ರಿಲ್ ಅಂತ್ಯದಲ್ಲಿ 60,000 ರೂಪಾಯಿ ಗಡಿ ದಾಟಿತ್ತು. ಇದೀಗ ದೀಪಾವಳಿ ಸಮಯದಲ್ಲೇ 68,000 ರೂಪಾಯಿ ದಾಟಿತ್ತು. ಇದೀಗ 70,000 ರೂಪಾಯಿ ಮುಟ್ಟುವ ಹೊತ್ತಲ್ಲೇ ಮತ್ತೆ ಕೆಳಗಿರುವುದು ಬೆಳೆಗಾರರಿಗೆ ಭಾರೀ ನಿರಾಸೆ ಮೂಡಿಸಿದೆ.
ಮೇ ತಿಂಗಳ ಆರಂಭದಿಂದಲೂ ಜೂನ್ ತಿಂಗಳ ಕೆಲವು ವಾರಗಳವರೆಗೆ ಇಳಿಕೆಯಾಗಿ ಮತ್ತೆ ಏರಿಕೆಯತ್ತ ಸಾಗಿತ್ತು. ನಂತರ ಜೂನ್ ತಿಂಗಳ ಮಧ್ಯದಿಂದಲೂ ಜುಲೈ ಮೊದಲ ವಾರದ ಮಧ್ಯದವರೆಗೂ ಇಳಿಕೆಯಾಗುತ್ತಲೇ ಬಂದಿತ್ತು. ಇನ್ನು 2023ರ ಜುಲೈ ತಿಂಗಳಲ್ಲಿ ಗರಿಷ್ಠ ದರ 57,000 ರೂಪಾಯಿ ಮುಟ್ಟಿತ್ತು. ಕಳೆದ ವರ್ಷ 2024ರ ಮೇ ತಿಂಗಳಿನಲ್ಲಿ ಗರಿಷ್ಠ 55,000 ರೂಪಾಯಿಗೆ ತಲುಪಿತ್ತು.
2025ರ ಜುಲೈ ಮೊದಲ ವಾರದ ಮಧ್ಯದವರೆಗೂ ಇಳಿಕೆಯತ್ತ ಸಾಗುತ್ತಾ ಬಂದಿತ್ತು. ಜುಲೈಗೆ ಹೋಲಿಕೆ ಮಾಡಿದರೆ, ಆಗಸ್ಟ್‌ನಲ್ಲಿ ಧಾರಣೆಯಲ್ಲಿ ತುಸು ಸುಧಾರಣೆ ಆಗಿತ್ತು. ಆದರೆ, ಕೊನೆಯಲ್ಲಿ ತುಸು ಇಳಿಕೆಯಾಗಿ ಮತ್ತೆ ಸೆಪ್ಟೆಂಬರ್ ಅಂತ್ಯದಲ್ಲಿ ತುಸು ಏರಿಕೆಯತ್ತ ಹೊರಟ್ಟಿತ್ತು. ಬಳಿಕ ಅಕ್ಟೋಬರ್ ಎರಡನೇ ವಾರದಿಂದ ನಾಲ್ಕನೇ ವಾರದ ಆರಂಭದವರೆಗೂ ಸತತವಾಗಿ ಏರಿಕೆ ಹಾದಿ ಹಿಡಿದಿತ್ತು. ಆದರೆ ಇದೀಗ ದಿಢೀರ್ ತುಸು ಇಳಿಕೆಯಾಗಿದೆ.
2025ರ ಜೂನ್ ಆರಂಭದಲ್ಲೇ ರಾಜ್ಯಕ್ಕೆ ಮುಂಗಾರು ಎಂಟ್ರಿ ಕೊಟ್ಟಿದ್ದು, ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆ ಆಗಿದೆ. ಇದರಿಂದ ಅಡಿಕೆ ಫಸಲು ಸಹ ಅಷ್ಟೇ ಚೆನ್ನಾಗಿ ಏನೋ ಬಂದಿದೆ. ಅಷ್ಟರ ಮಟ್ಟಿಗೆ ಧಾರಣೆ ಕೂಡ ಏರಿಕೆಯಾಗುತ್ತಾ ಸಾಗಿತ್ತು. ಆದರೆ, ಮತ್ತೊಂದೆಡೆ ಇದೀಗ ಧಾರಣೆ ಕುಸಿತ ಕಂಡಿದೆ. ಮುಂದಿನ ದಿನಗಳಲ್ಲಾದರೂ ಮತ್ತೆ ಏರಿಕೆಯಾಗಲಿದೆ ಎನ್ನುವ ಭರವಸೆಯಲ್ಲಿ ಅಡಿಕೆ ಬೆಳೆಗಾರರಿದ್ದಾರೆ.












Click it and Unblock the Notifications