ಜವಾಹರ ನವೋದಯ ವಿದ್ಯಾಲಯದಿಂದ ಅರ್ಜಿ ಆಹ್ವಾನ

Posted By:
Subscribe to Oneindia Kannada

ದಾವಣಗೆರೆ, ಮೇ 18: ಚನ್ನಗಿರಿ ತಾಲ್ಲೂಕಿನ ದೇವರಹಳ್ಳಿ ಜವಾಹರ ನವೋದಯ ವಿದ್ಯಾಲಯದಲ್ಲಿ 9ನೇ ವರ್ಗದಲ್ಲಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲು ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮೇ 29 ಕೊನೆಯ ದಿನವಾಗಿದೆ.

8ನೇ ತರಗತಿಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ವ್ಯಾಸಂಗ ನಿರತ ಸರ್ಕಾರಿ, ಸಿಬಿಎಸ್ಸಿ ಹಾಗೂ ಮಾನ್ಯತೆ ಪಡೆದ ಶಾಲೆಯ ಮಕ್ಕಳು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿಗಳನ್ನು ಇದೇ ಮೇ 12 ರಿಂದ ಇದೇ ದಿನಾಂಕ 29ರ ವರೆಗೆ ಕಚೇರಿಯ ವೇಳೆಯಲ್ಲಿ ಆಗಮಿಸಿ ಪಡೆದು ಸಲ್ಲಿಸಬಹುದು ಅಥವಾ ನವೋದಯ ವಿದ್ಯಾಲಯ ಸಮಿತಿ ವೆಬ್ಸೈಟ್ www.nvshq.org ಯಿಂದ ಪಡೆದುಕೊಳ್ಳಬಹುದು.

Apply for Lateral Entry test 2017 : JNV Class IX vacant Seats Davanagere

ಭರ್ತಿ ಮಾಡಿದ ಅರ್ಜಿಗಳನ್ನು ಪ್ರಾಚಾರ್ಯರು ಜವಾಹರ ನವೋದಯ ವಿದ್ಯಾಲಯ ದೇವರಹಳ್ಳಿ ಇಲ್ಲಿಗೆ ಮೇ 29ರ ಸಂಜೆ 5 ರೊಳಗಾಗಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08189- 239138, 239038 ಸಂಪರ್ಕಿಸಬಹುದು.

ಈ ಪ್ರವೇಶ ಪರೀಕ್ಷೆಯು ಇಂಗ್ಲಿಷ್ ಅಥವಾ ಹಿಂದಿಯಲ್ಲಿರುತ್ತದೆ. 2017 ಜೂನ್ 26 ರಂದು ಬೆಳಿಗ್ಗೆ 10 ರಿಂದ 1 ಗಂಟೆಯವರೆಗೆ ದೇವರಹಳ್ಳಿಯ ಜವಾಹರ ನವೋದಯ ವಿದ್ಯಾಲಯದಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಪಿಡಿಎಫ್ ಡೌನ್ ಲೋಡ್ ಮಾಡಿಕೊಳ್ಳಿ


(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Jawahara Navodaya Vidyalaya Samiti has invited applications for Class IX vacant Seats in all regional offices including Channagiri, Davanagere. Interested students can apply before May 29, 2017.
Please Wait while comments are loading...