ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ; ಉದ್ಘಾಟನೆಗೆ ಸಜ್ಜಾದ ರೈಲು ನಿಲ್ದಾಣದ ವಿಶೇಷತೆಗಳು

|
Google Oneindia Kannada News

ದಾವಣಗೆರೆ, ಮಾರ್ಚ್ 25; ನವೀಕೃತಗೊಂಡ ದಾವಣಗೆರೆ ನಗರದ ರೈಲು ನಿಲ್ದಾಣದ ಕಟ್ಟಡ ಉದ್ಘಾಟನೆಗೆ ಸಿದ್ಧವಾಗಿದೆ. ಸುಮಾರು 18.45 ಕೋಟಿ ವೆಚ್ಚದಲ್ಲಿ ರೈಲು ನಿಲ್ದಾಣವನ್ನು ನವೀಕರಣ ಮಾಡಲಾಗಿದೆ.

ಮಧ್ಯ ಕರ್ನಾಟಕ ಭಾಗದ ದಾವಣಗೆರೆ ರೈಲು ನಿಲ್ದಾಣ ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗಕ್ಕೆ ಸೇರುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣಗೊಂಡಿದ್ದ ರೈಲು ನಿಲ್ದಾಣದಲ್ಲಿ ಆಧುನಿಕ ಸೌಲಭ್ಯಗಳನ್ನು ಒದಗಿಸಿ ನವೀಕರಿಸಲಾಗಿದೆ.

ಕೊಂಕಣ ರೈಲ್ವೆ ಮಾರ್ಗ ವಿದ್ಯುದೀಕರಣ ಬಹುತೇಕ ಪೂರ್ಣ: ಲೋಕೋ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿಕೊಂಕಣ ರೈಲ್ವೆ ಮಾರ್ಗ ವಿದ್ಯುದೀಕರಣ ಬಹುತೇಕ ಪೂರ್ಣ: ಲೋಕೋ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿ

ಎಸ್ಕಲೇಟರ್ ಸೌಲಭ್ಯವನ್ನು ನಿಲ್ದಾಣದಲ್ಲಿ ಒದಗಿಸಲಾಗಿದೆ. ಕರ್ನಾಟಕದ 5 ರೈಲು ನಿಲ್ದಾಣದಲ್ಲಿ ಎಸ್ಕಲೇಟರ್ ಸೌಲಭ್ಯವಿದ್ದು, ಇದರಲ್ಲಿ ದಾವಣಗೆರೆ ಸಹ ಒಂದಾಗಿದೆ. ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಬಳ್ಳಾರಿ ನಿಲ್ದಾಣದಲ್ಲಿ ಈ ಸೌಲಭ್ಯವಿದೆ.

ಶೀಘ್ರದಲ್ಲೇ ದಾವಣಗೆರೆ-ಹುಬ್ಬಳ್ಳಿ ಡೆಮು ರೈಲು ಸಂಚಾರ ಶೀಘ್ರದಲ್ಲೇ ದಾವಣಗೆರೆ-ಹುಬ್ಬಳ್ಳಿ ಡೆಮು ರೈಲು ಸಂಚಾರ

 All Set For Davanagere Railway Station New Building Inauguration

ರೈಲು ನಿಲ್ದಾಣದ ಕಟ್ಟಡ, ಪಾರ್ಕಿಂಗ್ ವ್ಯವಸ್ಥೆ, ಲಿಫ್ಟ್, ಎರಡು ಕಡೆ ಎಸ್ಕಲೇಟರ್, ಟಿಕೆಟ್ ವಿತರಣಾ ಕೊಠಡಿ ಸೇರಿ ಸುಮಾರು 18.45 ಕೋಟಿ ರೂ. ವೆಚ್ಚದಲ್ಲಿ ನಿಲ್ದಾಣವನ್ನು ನವೀಕರಣ ಮಾಡಲಾಗಿದೆ. ಏಪ್ರಿಲ್ ತಿಂಗಳಿನಲ್ಲಿ ರೈಲು ನಿಲ್ದಾಣ ಉದ್ಘಾಟನೆಗೊಳ್ಳುವ ನಿರೀಕ್ಷೆ ಇದೆ.

ಮಕ್ಕಳಿಗೆ ಲಭಿಸದ ದಾವಣಗೆರೆ ಜಿಲ್ಲಾ ಬಾಲಭವನ! ಮಕ್ಕಳಿಗೆ ಲಭಿಸದ ದಾವಣಗೆರೆ ಜಿಲ್ಲಾ ಬಾಲಭವನ!

ಕೋವಿಡ್ ಲಾಕ್ ಡೌನ್‌ಗೂ ಮೊದಲು 44 ರೈಲುಗಳು ದಾವಣಗೆರೆ ರೈಲು ನಿಲ್ದಾಣದಿಂದ ಸಂಚಾರ ನಡೆಸುತ್ತಿದ್ದವು. ಈಗ ವಿಶೇಷ ರೈಲುಗಳು ಮಾತ್ರ ಸಂಚಾರ ನಡೆಸುತ್ತಿದ್ದು, ದಿನಕ್ಕೆ 22 ರೈಲು ಸಂಚರಿಸುತ್ತಿವೆ. ಏಪ್ರಿಲ್ ಬಳಿಕ ಪ್ರತಿದಿನ 36 ರೈಲುಗಳು ಸಂಚಾರ ನಡೆಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೈಸೂರು ವಿಭಾಗದಲ್ಲಿ ಅತಿ ಹೆಚ್ಚು ಆದಾಯ ತಂದು ಕೊಡುವ ಎರಡನೇ ನಿಲ್ದಾಣ ದಾವಣಗೆರೆಯಾಗಿದೆ. ನಿಲ್ದಾಣ ನವೀಕರಣಗೊಂಡಿದ್ದು, ನಿಲ್ದಾಣದಲ್ಲಿ ಈಗ 23 ಕೊಠಡಿಗಳು ನಿರ್ಮಾಣಗೊಂಡಿವೆ. ಗಣ್ಯವ್ಯಕ್ತಿಗಳ ವಿಶ್ರಾಂತಿ ಕೊಠಡಿ ಸೇರಿದಂತೆ ವಿವಿಧ ಕೊಠಡಿಗಳನ್ನು ನಿರ್ಮಿಸಲಾಗಿದೆ.

Recommended Video

ಕೊರೊನಾ ಕಂಟ್ರೋಲ್ ಗೆ ರಾಜ್ಯ ಸರ್ಕಾರದಿಂದ ಹೊಸ ಗೈಡ್ ಲೈನ್ಸ್..! ನಿಯಮ ಉಲ್ಲಂಘಿಸಿದ್ರೆ ದಂಡ | Oneindia Kannada

ಸೆಲ್ಫೀ ಸ್ಪಾಟ್; ನವೀಕರಣಗೊಂಡ ರೈಲು ನಿಲ್ದಾಣದ ಮುಂದೆ 'ಐ ಲವ್ ಡಿವಿಜಿ' ಎಂದು ಕೆಂಪು ಬಣ್ಣದಲ್ಲಿ ಬರೆದ ಫಲಕವಿದ್ದು, ಇದು ನಿಲ್ದಾಣದ ಸೆಲ್ಫೀ ಸ್ಟಾಟ್ ಆಗಿದೆ. 100 ಅಡಿ ಎತ್ತರದ ಧ್ವಜ ಸ್ತಂಭವನ್ನು ಸಹ ನಿರ್ಮಾಣ ಮಾಡಲಾಗಿದೆ.

English summary
Davanagere railway station building repaired at the cost 18.45 crore. New building all set for inauguration in the month of April.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X