ಸಿಎಂ ಯಡಿಯೂರಪ್ಪ ಪರ ಬ್ಯಾಟ್ ಬೀಸಿದ ಕಾಂಗ್ರೆಸ್ ಹಿರಿಯ ಶಾಸಕ
ದಾವಣಗೆರೆ, ಜೂನ್ 18: ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್. ಯಡಿಯೂರಪ್ಪ ಅವರನ್ನು ಕೆಳಗಿಳಿಸುತ್ತಾರೆ ಎಂಬ ವದಂತಿಯ ನಡುವೆ ಕಾಂಗ್ರೆಸ್‌ನ ಹಿರಿಯ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಯಡಿಯೂರಪ್ಪರ ಪರ ಬ್ಯಾಟ್ ಬೀಸಿದ್ದಾರೆ.
"ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯಲು ಅಖಿಲ ಭಾರತ ವೀರಶೈವ ಮಹಾಸಭಾ ಸಂಪೂರ್ಣ ಬೆಂಬಲ ನೀಡಲಿದೆ,'' ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ದಾವಣಗೆರೆ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, "ವೀರಶೈವ ಮಹಾಸಭಾದಿಂದ ನಾವು ಯಡಿಯೂರಪ್ಪರಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ, ಮತ್ತೇನು?,'' ಎಂದು ತಿಳಿಸಿದರು.

ರಾಜ್ಯದ ಮಠಾಧೀಶರು ಯಡಿಯೂರಪ್ಪ ಪರ ಬ್ಯಾಟ್ ಬೀಸುತ್ತಿರುವ ಕುರಿತಂತೆ ಮಾತನಾಡಿ, "ಅವರು ದೊಡ್ಡವರು. ಅವರ ಬಗ್ಗೆ ಮಾತನಾಡಲ್ಲ. ವೀರಶೈವ ಮಹಾಸಭಾದಿಂದ ನಾನು ಮಾತನಾಡುತ್ತೇನೆ," ಎಂದ ಶಿವಶಂಕರಪ್ಪ, "ದಾವಣಗೆರೆಯಲ್ಲಿ ಕೊರೊನಾ ನಿಯಂತ್ರಣ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ನಾವು ಲಸಿಕೆಯನ್ನು ನಮ್ಮ ಹಣದಿಂದ ನೀಡುತ್ತಿದ್ದೇನೆ. ಸರ್ಕಾರದಿಂದ ಹಣ ಏನೂ ಕೊಟ್ಟಿಲ್ಲ. ಜನರು ಸಾಯಬಾರದು ಎಂಬ ಕಾರಣಕ್ಕೆ ಈ ಕಾರ್ಯ ಮಾಡುತ್ತಿದ್ದೇವೆ. ಲಸಿಕೆ ನೀಡಿಕೆಯೂ ಚೆನ್ನಾಗಿ ನಡೆಯುತ್ತಿದೆ,'' ಎಂದು ತಿಳಿಸಿದರು.












Click it and Unblock the Notifications