ದಾವಣಗೆರೆಗೆ ಕೊರೊನಾ ಬರ ಸಿಡಿಲು: 14 ಹೊಸ ಕೇಸ್ ಪತ್ತೆ
ದಾವಣಗೆರೆ, ಮೇ 8: ದಾವಣಗೆರೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಇಂದು ಒಂದೇ ದಿನ 14 ಕೊರೊನಾ ವೈರಸ್ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಜನರಲ್ಲಿ ಆತಂಕ ಸೃಷ್ಠಿಸಿದೆ.
ಗ್ರೀನ್ ಜೋನ್‌ನಲ್ಲಿದ್ದಂತ ದಾವಣಗೆರೆಯಲ್ಲಿ ಈಗ ಪ್ರತಿ ನಿತ್ಯ ಹೊಸ ಕೊರೊನ ಪ್ರಕರಣ | Davangere | Oneindia Kannada
ಇಂದು ಪತ್ತೆಯಾಗಿರುವ ಹೊಸ ಕೊರೊನಾ ಪ್ರಕರಣಗಳಲ್ಲಿ 6 ಮಕ್ಕಳಿಗೆ ಸೋಂಕು ತಗುಲಿದೆ. ಎರಡು ಹೆಣ್ಣು ಮಗು, 4 ಗಂಡು ಮಕ್ಕಳಿಗೆ ಕೊರೊನಾ ಸೋಂಕು ಪತ್ತೆಯಾಗಿದೆ.
10 ಜನ ಕೇಸ್ ನಂ 533 ನರ್ಸ್ ಸಂಪರ್ಕದಲ್ಲಿ ಇದ್ದವರಾಗಿದ್ದಾರೆ. ಕೇಸ್ ನಂ 556 ಸಂಪರ್ಕದಿಂದ 4 ಜನರಿಗೆ ಸೋಂಕು ಬಂದಿದೆ.
ಆರು ಕಂಟೈನ್ಮೆಂಟ್ ವಲಯಗಳಲ್ಲಿ ಪಾಸಿಟಿವ್ ಕೇಸ್ ಗಳು ಕಂಡುಬಂದಿವೆ.
ಇದರಲ್ಲಿ 55 ಆ್ಯಕ್ಟಿವ್ ಕೇಸ್, ನಾಲ್ವರ ಸಾವು, 2 ಗುಣಮುಖ ಪ್ರಕರಣಗಳು ಸೇರಿವೆ. 3 ವರ್ಷದ ಹೆಣ್ಣು ಮಗು, 10 ವರ್ಷದ ಗಂಡು ಮಗು, 6 ವರ್ಷದ ಗಂಡು ಮಗು, 9 ವರ್ಷದ ಗಂಡು ಮಗು, 13 ವರ್ಷದ ಹೆಣ್ಣು ಮಗು, 8 ವರ್ಷದ ಗಂಡು ಮಗುವಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ.