• search
  • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿರಿಯೂರಿನಲ್ಲಿ ನಂಜಾವಧೂತ ಶ್ರೀಗಳ ಜೊತೆ ಸಮುದಾಯದ ಮುಖಂಡನ ವಾಗ್ವಾದ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ನವೆಂಬರ್‌, 14: ರಾಜ್ಯದಲ್ಲಿ ಶೇಕಡಾ 16ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಒಕ್ಕಲಿಗ ಸಮುದಾಯ ಮತ್ತು ಮಕ್ಕಳಿಗೆ ಅನ್ಯಾಯ ಆಗಿದೆ. ಆದ್ದರಿಂದ ನಮಗೂ ಶೇಕಡಾ 11 ರಿಂದ 15 ರಷ್ಟು ಮೀಸಲಾತಿ ಹೆಚ್ಚಳ ಮಾಡಬೇಕು ಎಂದು ಪಟ್ಟನಾಯಕನಹಳ್ಳಿ ಶ್ರೀನಂಜಾವಧೂತ ಶ್ರೀಗಳು ಹೇಳಿದ್ದಾರೆ. ಈ ವೇಳೆ ಶ್ರೀಗಳು ಮತ್ತು ಜನಾಂಗದ ಮುಖಂಡನ ನಡುವೆ ತೀವ್ರ ವಾಗ್ವಾದ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬುರಡುಕುಂಟೆ ಗ್ರಾಮದಲ್ಲಿ ಭಾನುವಾರ ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವೇದಿಕೆಯಲ್ಲಿ ವಾಗ್ವಾದ ಘಟನೆ ಸಂಭವಿಸಿದೆ.

ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನದ ವೇಳೆ ಒಕ್ಕಲಿಗರಿಗೆ ಮೀಸಲಾತಿ ನೀಡುವ ವಿಚಾರದ ಬಗ್ಗೆ ಮಾತನಾಡಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡುವಾಗ ಸಮಾಜದ ಮುಖಂಡರೊಬ್ಬರು ಕುಂಚಿಟಿಗರ ಬಗ್ಗೆ ಯಾಕೆ ಮಾತಾನಾಡುತ್ತಿಲ್ಲ? ಎಂದು ಪ್ರಶ್ನೀಸುತ್ತಾ ಶ್ರೀಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆಗ ಶ್ರೀಗಳು ಕುಳಿತುಕೊಳ್ಳಪ್ಪ ಇಲ್ಲಿ ಕೇಳಪ್ಪಾ ಎಂದು ಮುಖಂಡರನ್ನು ಸಮಾಧಾನಪಡಿಸಲು ಮುಂದಾದರು. ಶ್ರೀಗಳ ಮಾತಿಗೆ ಕ್ಯಾರೇ ಎನ್ನದ ಸಮಾಜದ ಮುಖಂಡ ನಮ್ಮ ಒಕ್ಕಲಿಗ ಸಮುದಾಯದ ಸ್ವಾಮೀಜಿಯಾಗಿ ಯಾಕೆ ಮಾತನಾಡುತ್ತಿಲ್ಲ? ನಿಖಿಲ್ ಅಣ್ಣಗೆ ದಯವಿಟ್ಟು ಅವಕಾಶ ಕೊಡಬೇಕು ಎಂದು ಶ್ರೀಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ವೇದಿಕೆ ಮೇಲೆ ಕುಳಿತಿದ್ದ ನಿಖಿಲ್ ಕುಮಾರಸ್ವಾಮಿ ಅವರು ವ್ಯಕ್ತಿಯನ್ನು ಸಮಾಧಾನಪಡಿಸಲು ಮುಂದಾದರು.

ಪಂಚರತ್ನ ಯಾತ್ರೆಯಲ್ಲಿ ಜೆಡಿಎಸ್ ಮೊದಲ ಹಂತದ ಪಟ್ಟಿ ಬಿಡುಗಡೆ: ಚಿತ್ರದುರ್ಗದಲ್ಲಿ ನಿಖಿಲ್ ಸ್ಪಷ್ಟನೆಪಂಚರತ್ನ ಯಾತ್ರೆಯಲ್ಲಿ ಜೆಡಿಎಸ್ ಮೊದಲ ಹಂತದ ಪಟ್ಟಿ ಬಿಡುಗಡೆ: ಚಿತ್ರದುರ್ಗದಲ್ಲಿ ನಿಖಿಲ್ ಸ್ಪಷ್ಟನೆ

ಎಚ್‌.ಡಿ.ದೇವೇಗೌಡರಿಂದ ಪ್ರಧಾನಿಗೆ ಪತ್ರ

ಎಚ್‌.ಡಿ.ದೇವೇಗೌಡರಿಂದ ಪ್ರಧಾನಿಗೆ ಪತ್ರ

"ಒಕ್ಕಲಿಗರ ಜನಸಂಖ್ಯೆಯಲ್ಲಿ ಶೇಕಡಾ 3ರಷ್ಟಿರುವ ಜನರಿಗೆ ಶೇಕಡಾ 10ರಷ್ಟು ಮೀಸಲಾತಿ ನೀಡುವ ತೀರ್ಮಾನ ಒಳ್ಳೆಯದೆ. ಆದರೆ ಶೇಕಡಾ 16ರಿಂದ ಶೇಕಡಾ 19ರಷ್ಟಿರುವ ಒಕ್ಕಲಿಗರಿಗೆ ಇದರಿಂದ ಅನ್ಯಾಯವಾಗಲಿದೆ. ಈ ವಿಚಾರವಾಗಿ ದೇವೇಗೌಡರು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ. ನ್ಯಾಯ ಸಿಗುವ ಭರವಸೆ ಇದೆ," ಎಂದರು.

ಕೆಂಪೇಗೌಡರ ಆಡಳಿತ ಸಾಮಾಜಿಕ ನ್ಯಾಯ ಅಭಿವೃದ್ಧಿ ಕಾರ್ಯಗಳು ಇಂದಿನ ರಾಜಕಾರಣಿಗಳಿಗೆ ಮಾರ್ಗದರ್ಶನ ಹಾಗೂ ಮಾದರಿಯಾಗಿವೆ. ಕೆಂಪೇಗೌಡರ ವ್ಯಕ್ತಿತ್ವ ಅತ್ಯಂತ ದೊಡ್ಡದು. ಅವರ ಐತಿಹಾಸಿಕ ಘಟನೆಗಳ ಆಧಾರಿತ ಚಿತ್ರ ನಿರ್ಮಾಣ ಮಾಡಬೇಕು. ಅದು ನಿಖಿಲ್ ಅವರೇ ನಟನೆ ಮಾಡಬೇಕು. ಒಕ್ಕಲಿಗರ ಸಮುದಾಯಕ್ಕೆ ನ್ಯಾಯ ಕೊಟ್ಟಿರುವ ವ್ಯಕ್ತಿ ಮಾಜಿ ಪ್ರಧಾನಿ ದೇವೇಗೌಡರಾಗಿದ್ದಾರೆ. ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಎರಡು ಬಾರಿ ರೈತರ ಸಾಲ ಮನ್ನಾ ಮಾಡಿದ ಏಕೈಕ ಆಡಳಿತಗಾರ ಹಾಗೂ ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ ತುಮಕೂರು ಜಿಲ್ಲೆಗೆ ನೀರು ಕೊಟ್ಟಿದ್ದಾರೆ ಎಂದರು.

ಸತೀಶ್‌ ಜಾರಕಿಹೊಳಿ ಕ್ಷಮೆ ಬೇಕಿಲ್ಲ, ಚರ್ಚೆಯ ಅಗತ್ಯವಿಲ್ಲ: ಸಿಎಂ ಬೊಮ್ಮಾಯಿಸತೀಶ್‌ ಜಾರಕಿಹೊಳಿ ಕ್ಷಮೆ ಬೇಕಿಲ್ಲ, ಚರ್ಚೆಯ ಅಗತ್ಯವಿಲ್ಲ: ಸಿಎಂ ಬೊಮ್ಮಾಯಿ

ಜೆಡಿಎಸ್ ಅಭ್ಯರ್ಥಿ ಘೋಷಿಸುವ ಸಾಧ್ಯತೆ

ಜೆಡಿಎಸ್ ಅಭ್ಯರ್ಥಿ ಘೋಷಿಸುವ ಸಾಧ್ಯತೆ

ಪಂಚರತ್ನ ಯಾತ್ರೆಯಲ್ಲಿ ಜೆಡಿಎಸ್‌ನ ಮೊದಲ ಹಂತದ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಅಂದೇ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಗೊಂದಲವಿರುವ ಜೆಡಿಎಸ್ ಅಭ್ಯರ್ಥಿ ಯಾರು ಎಂದು ಘೋಷಿಸುವ ಸಾಧ್ಯತೆಗಳಿವೆ ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಚಿತ್ರದುರ್ಗದಲ್ಲಿ ಹೇಳಿದರು. ಹಿರಿಯೂರು ತಾಲ್ಲೂಕಿನ ಬುರಡುಕಂಟೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ ತಿಂಗಳ 19ರಂದು ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಪಂಚರತ್ನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ.

ಹಿರಿಯೂರು ಟಿಕೆಟ್ ವಿಚಾರದಲ್ಲಿ ಗೊಂದಲ ಇರುವ ಬಗ್ಗೆ ಶೀಘ್ರದಲ್ಲೇ ಬಗೆಹರಿಯಲಿದೆ. ಇನ್ನು ದೇವೇಗೌಡರ ಕುಟುಂಬದಿಂದ ವ್ಯಕ್ತಿಯೊಬ್ಬರು ಹಿರಿಯೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ? ಎಂಬ ಪ್ರಶ್ನೆಗೆ ಉತ್ತರಿಸಿದ ನಿಖಿಲ್ ನಮ್ಮ ಕುಟುಂಬದಿಂದ ಹಿರಿಯೂರು ಕ್ಷೇತ್ರದಲ್ಲಿ ಯಾರು ಸ್ಪರ್ಧಿಸುವುದಿಲ್ಲ. ಇದು ಸುಳ್ಳು ಎಂದು ಗೊಂದಲಕ್ಕೆ ತೆರೆ ಎಳೆದರು.

ಬಿಜೆಪಿ, ಕಾಂಗ್ರೆಸ್‌ ವಿರುದ್ಧ ನಿಖಿಲ್‌ ಆಕ್ರೋಶ

ಬಿಜೆಪಿ, ಕಾಂಗ್ರೆಸ್‌ ವಿರುದ್ಧ ನಿಖಿಲ್‌ ಆಕ್ರೋಶ

ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಡವಳಿಕೆಗಳನ್ನು ಜನರು ಗಮನಿಸಿದ್ದಾರೆ. ಇತ್ತೀಚೆಗೆ ರಾಜ್ಯದ ಜನತೆ ಪ್ರಾದೇಶಿಕ ಪಕ್ಷದ ಕಡೆ ಒಲವು ತೋರಿದ್ದಾರೆ. ಮುಂದಿನ ದಿನಗಳಲ್ಲಿ ಆರೂವರೆ ಕೋಟಿ ಜನರ ಆಶಿರ್ವಾದ ಜೆಡಿಎಸ್ ಪಕ್ಷದ ಮೇಲಿರುತ್ತದೆ. ನಮ್ಮ ಪಕ್ಷದ ಕಾರ್ಯಕರ್ತರು ಬಹಳ ಸದೃಢವಾಗಿದ್ದು, ಜೆಡಿಎಸ್ ಪಕ್ಷ ಶಕ್ತಿಯುತವಾಗಿದೆ. ರಾಜ್ಯದ ಪ್ರತಿ ಕ್ಷೇತ್ರದಲ್ಲೂ ಎರಡು ಮೂರು ಅಭ್ಯರ್ಥಿಗಳು ಸ್ಪರ್ಧಿಸಲು ಮುಂದೆ ಬಂದಿದ್ದಾರೆ. ಆಗಾಗಿ ಯಾರು ಸೂಕ್ತ ಅಭ್ಯರ್ಥಿ ಎಂದು ಗ್ರೌಂಡ್ ರಿಪೋರ್ಟ್ ಮೂಲಕ ಪಕ್ಷದ ನಾಯಕರು ತೀರ್ಮಾನ ಕೈಗೊಳ್ಳಲಿದ್ದಾರೆ.

ನಮ್ಮ ಪಕ್ಷದ ಹೈಕಮಾಂಡ್ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಬಳಿ ಇದೆ. ನಾವೇನು ದೆಹಲಿಗೆ ಹೋಗಬೇಕಿಲ್ಲ. ಜೆಡಿಎಸ್ ಟಿಕೆಟ್ ಪಟ್ಟಿ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಅಲ್ಲದೆ ಎರಡು ರಾಷ್ಟ್ರೀಯ ಪಕ್ಷಗಳಿಂದ ಮುಂಚಿತವಾಗಿ ಅಭ್ಯರ್ಥಿಗಳನ್ನು ತೀರ್ಮಾನ ಮಾಡಲಾಗುತ್ತದೆ ಎಂದು ಹೇಳಿದರು. ರಾಜ್ಯದ ಒಕ್ಕಲಿಗರಿಗೆ ಮೀಸಲಾತಿ ವಿಚಾರದಲ್ಲಿ ಅನ್ಯಾಯವಾಗಿದೆ ಎಂದರು.

ಯುವಕರಿಗೆ ನಿಖಿಲ್‌ ಕುಮಾರಸ್ವಾಮಿ ಮನವಿ

ಯುವಕರಿಗೆ ನಿಖಿಲ್‌ ಕುಮಾರಸ್ವಾಮಿ ಮನವಿ

ನಂತರ ಕೆಂಪೇಗೌಡ ಪ್ರತಿಮೆ ಅನಾವರಣ ಸಮಾರಂಭದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 500 ವರ್ಷಗಳ ಹಿಂದೆ ಬೆಂಗಳೂರು ನಗರವನ್ನು ನಿರ್ಮಾಣ ಮಾಡಿರುವ ಕೆಂಪೇಗೌಡರ ಬಗ್ಗೆ ಇಂದಿನ ಯುವಕರು ಇತಿಹಾಸವನ್ನು ಅಧ್ಯಯನ ಮಾಡುವ ಮೂಲಕ ಅವರ ತತ್ವಗಳನ್ನು ಪಾಲಿಸಬೇಕು ಎಂದು ಕರೆ ನೀಡಿದರು. ಇನ್ನು 2018ರಲ್ಲಿ ರೈತರ ಸಾಲ ಮನ್ನಾ ಮಾಡಿದ ಏಕೈಕ ಆಡಳಿತಗಾರ ಎಂದರೆ ಅದು ಕುಮಾರಸ್ವಾಮಿ ಆಗಿದ್ದಾರೆ. ರಾಜ್ಯದಲ್ಲಿ ಪ್ರತಿದಿನ ರೈತರ ಆತ್ಮಹತ್ಯೆ ದೃಶ್ಯವನ್ನು ಕಣ್ಣಾರೆ ಕಂಡು ಎಚ್‌.ಡಿ. ಕುಮಾರಸ್ವಾಮಿ ಅವರು ಆಗ ರೈತರ ಬಾಳಿಗೆ ಬೆಳಕಾದರು. ನಮ್ಮ ಮನೆಯಲ್ಲಿ ತಂದೆಯವರು ನನ್ನ ಜೊತೆಗೆ ಮಾತಾಡಿದ್ದರು. ಜನರು ಸಿಎಂ ಆಗಲು ಅವಕಾಶ ಮಾಡಿ ಕೊಟ್ಟರೆ ರೈತರ ಸಾಲ ಮನ್ನಾ ಮಾಡುತ್ತೇನೆ ಅಂತಾ ಹೇಳಿದ್ದರು ಎಂದರು.

ಪಂಚರತ್ನ ಯೋಜನೆಯಲ್ಲಿನ ಕಾರ್ಯಕ್ರಮಗಳು

ಪಂಚರತ್ನ ಯೋಜನೆಯಲ್ಲಿನ ಕಾರ್ಯಕ್ರಮಗಳು

ಇನ್ನು ನವೆಂಬರ್ 1ರ ಆರಂಭದಲ್ಲಿ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮಾಡಲು ಅವಕಾಶ ಕೊಡಲಿಲ್ಲ. ಇದೇ ತಿಂಗಳ 19ಕ್ಕೆ ಪಂಚರತ್ನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಆರೋಗ್ಯ, ಶಿಕ್ಷಣ, ಉದ್ಯೋಗ, ಕೃಷಿ ಸೇರಿದಂತೆ ರೈತರು ಸಾಲ ಮಾಡದಂತೆ ಈ ಐದು ಯೋಜನೆಗಳನ್ನು ಒಳಗೊಂಡಿದೆ. ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಕಾಡುತ್ತಾ ಇದೆ. ಖಾಸಗಿ ಹಾಗೂ ಸರ್ಕಾರಿ ಶಾಲೆಗಳು ಹೇಗೆ ನಡೆಯುತ್ತಿದೆ ಎಂದು ಗೊತ್ತಿದೆ. ಬಡವರು ಮಕ್ಕಳಿಗೆ ಉತ್ತಮ ರೀತಿಯಲ್ಲಿ ಶಿಕ್ಷಣ ನೀಡುವುದು ಕೂಡ ಪಂಚರತ್ನ ಯೋಜನೆಯಲ್ಲಿ ಸೇರಿದೆ. ಇನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿ ನಿಮ್ಮ ಜೊತೆಗೆ ಜವಾಬ್ದಾರಿ ಇರುತ್ತದೆ ಎಂದು ತಿಳಿಸಿದರು.

English summary
Vokkaliga leader slams Nanjavadhutha shree in Buradukunte village of Chitradurga district for reservation in front of nikhil kumaraswamy, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X