ಚಿತ್ರದುರ್ಗ; ಬಸ್- ಕಾರು ಅಪಘಾತದಲ್ಲಿ ಇಬ್ಬರ ದುರ್ಮರಣ
ಚಿತ್ರದುರ್ಗ, ಆಗಸ್ಟ್ 27: ಖಾಸಗಿ ಬಸ್ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
Recommended Video
ಮೈಸೂರಿನ ರಾಜಮನೆತನದ Yaduveer Krishnadatta ರಾಜಕೀಯದ ಬಗ್ಗೆ ಮಹತ್ವದ ನಿರ್ಧಾರ | Oneindia Kannada
ಬೆಳಗಾವಿ - ಶ್ರೀರಂಗಪಟ್ಟಣ ರಸ್ತೆಯ ಹಿರಿಯೂರು ತಾಲ್ಲೂಕಿನ ಗೊಲ್ಲಹಳ್ಳಿ ಸಮೀಪ ಇಂದು ಬೆಳಗಿನ ಜಾವ ಅಪಘಾತ ಸಂಭವಿಸಿದೆ. ಚಳ್ಳಕೆರೆಯಿಂದ ಹಿರಿಯೂರಿನ ಕಡೆಗೆ ಬರುತ್ತಿದ್ದ ಕಾರು, ಹಿರಿಯೂರು ಕಡೆಯಿಂದ ಚಳ್ಳಕೆರೆ ಕಡೆ ಹೋಗುತ್ತಿದ್ದ ಖಾಸಗಿ ಬಸ್ ಗೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ, ಕಾರಿನಲ್ಲಿದ್ದ ಮೂವರಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತಪಟ್ಟವರನ್ನು ಸಾಯಿಬಣ್ಣ (35), ವೆಂಕಟೇಶ್ (30) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರು ಆನಂದ್ (33) ಎಂಬುರವನ್ನು ಹಿರಿಯೂರು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮೃತರು ಲಿಂಗಸುಗೂರಿನ ಗೌಡೂರು ಗ್ರಾಮದವರು ಎಂದು ತಿಳಿದು ಬಂದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಐಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.












Click it and Unblock the Notifications